ರೆಸಿಪಿ: ಈರುಳ್ಳಿ ಪಕೋಡ

By Web DeskFirst Published Sep 22, 2018, 12:51 PM IST
Highlights

ಅರ್ಧ ಗಂಟೆಯಲ್ಲಿ ಮಕ್ಕಳಿಗೆ ಕುರುಕು ತಿಂಡಿ ಮಾಡಿ ಕೊಟ್ಟರೆ, ಅಮ್ಮಂದಿರಿಗೋ ಎಲ್ಲಿಲ್ಲದ ನೆಮ್ಮದಿ ಸಿಕ್ಕಿದಂತಾಗುತ್ತದೆ. ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳಿಂದಲೇ ರುಚಿ ರುಚಿಯಾಗಿ ತಿಂಡಿ ಮಾಡಿಕೊಡಬಹುದೆಂದರೆ ಅದಕ್ಕಿಂತ ಖುಷಿ ಇನ್ನೇನಿದೆ? ಇಂಥದ್ದೊಂದು ಈರುಳ್ಳಿ ಪಕೋಡ ರೆಸಿಪಿ ಮಾಡೋ ವಿಧಾನ ಇಲ್ಲಿದೆ...

ಬೇಕಾಗುವ ಸಾಮಾಗ್ರಿ :

  • ಈರುಳ್ಳಿ
  • ಕಡ್ಲೆಹಿಟ್ಟು
  • ಖಾರದ ಪುಡಿ
  • ಉಪ್ಪು
  • ಓಮಕಾಳು
  • ಅಡುಗೆ ಸೋಡಾ
  • ಎಣ್ಣೆ

ಮಾಡುವ ವಿಧಾನ:

ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಬೇರ್ಪಡಿಸಿಟ್ಟು ಕೊಳ್ಳಿ. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮ, ಸೋಡಾ ಮತ್ತು ಉಪ್ಪು, ಕತ್ತರಿಸಿದ ಈರುಳ್ಳಿ ಮತ್ತು 2 ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಬಳಸಬೇಕು, ತುಂಬಾ ತೆಳ್ಳಗೆ ಹಿಟ್ಟನ್ನು ಕಲಸಬೇಡಿ, ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಗಟ್ಟಿಯಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಗರಿಗರಿಯಾಗಿ ಕರಿಯಿರಿ.

ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ.

click me!