ಅಡುಗೆ ರೆಸಿಪಿ: ರಾಗಿ ಚಕ್ಕುಲಿ

By Web DeskFirst Published Sep 16, 2018, 12:22 PM IST
Highlights

ಉದ್ದು, ಅಕ್ಕಿ ಹಾಕೋ ಮಾಡುವ ಚಕ್ಕುಲಿ ಎಲ್ಲರಿಗೂ ಗೊತ್ತು. ಆದರೆ, ರಾಗಿ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಒಳ್ಳೆಯದು ರಾಗಿ ಮುದ್ದೆ, ಅಮ್ಲಿ ಅಲ್ಲದೇ ಇದರ ಚಕ್ಕುಲಿಯೂ ಮಾಡಬಹುದು. ಇಲ್ಲಿದೆ ರೆಸಿಪಿ.

ಹಬ್ಬ ದಿನಗಳು ಬಂದರೆ ಸಾಕು ಎಲ್ಲಾತರಹದ ಕುರುಕು ತಿನ್ನುವ ಆಸೆ ಮನೆಯವರಿಗಿರುತ್ತದೆ. ಅಂಗಡಿ ಚಕ್ಕುಲಿಯಲ್ಲಿ ಎಣ್ಣೆ ಜಾಸ್ತಿ ಎಂದರೆ ಮನೆಯಲ್ಲಿಯೇ ಮಾಡಿ ಸೇವಿಸಲು ಇಲ್ಲಿವೆ ರೆಸಿಪಿ....

ಬೇಕಾಗುವ ಸಾಮಾಗ್ರಿ:

  • ರಾಗಿ ಹಿಟ್ಟ
  • ಹುರಿಗಡಲೆ
  • ಜೀರಿಗೆ
  • ಮೆಣಸಿನಪುಡಿ
  • ಬೆಣ್ಣೆ
  • ಇಂಗು 
  • ಎಣ್ಣೆ
  • ಉಪ್ಪು

ಮಾಡುವ ವಿಧಾನ:

ಹುರಿಗಡಲೆ ಪುಡಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ಕಡಲೆ ಹಿಟ್ಟು, ಮೆಣಸಿನ ಪುಡಿ, ಇಂಗು, ಉಪ್ಪು ಮತ್ತು ಜೀರಿಗೆ ಬೆರೆಸಿ.ಅದಕ್ಕೆ ಸ್ವಲ್ಪ ನೀರು ಬೆರೆಸಿಕೊಂಡು ಹಿಟ್ಟನ್ನು ತಯಾರಿಸಿಕೊಳ್ಳಿರಿ. ಒಂದು ಬಾಣಲೆಯಲ್ಲಿ ಎಣ್ಣೆ ಚನ್ನಾಗಿ ಕಾಯಿಸಿ. 

ನಂತರ ಬೆಕ್ಕಿುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಎಣ್ಣೆಯಲ್ಲಿ ಬೆಕ್ಕುಲಿ ಹಿಂಡಿ ಗರಿ ಗರಿಯಾಗಿ ಕರಿಯಿರಿ. ರುಚಿ ರುಚಿಯಾದ ಚಕ್ಕುಲಿ ಸವಿಯಲು ಸಿದ್ಧ. 

click me!