ಮನುಷ್ಯರು ನಡೆದಾಡುವ ಶಬ್ದ ಹಾವಿಗೆ ಕೇಳಿಸುತ್ತಾ? ಕಿವಿಗಳೇ ಇಲ್ಲದಿದ್ದರೂ ಹಾವಿನಲ್ಲಿದೆ ವಿಶೇಷ ಶಕ್ತಿ

Published : Nov 12, 2026, 04:48 PM IST
Snake behavior facts

ಸಾರಾಂಶ

ಹಾವಿಗೆ ಇತರ ಪ್ರಾಣಿಗಳಂತೆ ಕಿವಿಗಳಿಲ್ಲ. ಕೇಳಿಸುವುದು ಇಲ್ಲ. ಆದರೂ ಮನುಷ್ಯರು ನಡೆದಾಡುವ ಶಬ್ದ ಕೇಳಿಸುತ್ತೆ, ತರಗಲೆ, ಗಿಡಿಗಳ ಮರೆಯಲ್ಲಿ ಮುದುಡಿದ್ದರೂ ಕಾಲಿಗೆ ಕಚ್ಚುತ್ತೆ, ಇದು ಹೇಗೆ ಸಾಧ್ಯ?

ಮನುಷ್ಯನ ಜೀವನಕ್ಕೆ ಕೆಲವೇ ನಿಮಿಷದಲ್ಲಿ ಅಪಾಯತಂದೊಡ್ಡಬಲ್ಲ ಜೀವಿಗಳ ಪೈಕಿ ಹಾವು ಕೂಡ ಒಂದು. ಹಾವು ಕಡಿತ ಪ್ರಕರಣಗಳು ಹೆಚ್ಚಾಗಿದೆ. ಹೊಲಕ್ಕೆ ಹೋದಾಗ, ಮನೆಯೊಳಗೆ ಸೇರಿಕೊಂಡ ಹಾವು ಕಡಿತ ಪ್ರಕರಣಗಳೇ ಹೆಚ್ಚು. ಹಾವುಗಳು ಮುದುಡಿಕೊಂಡು ಕುಳಿತಿರುತ್ತದೆ. ಮನುಷ್ಯರು ಬಂದಾಗ ಹತ್ತಿರಬರುತ್ತಿದ್ದಂತೆ ಒಂದೇ ಬಾರಿ ದಾಳಿ ಮಾಡುತ್ತದೆ. ವಿಶೇಷ ಅಂದರೆ ಹಾವುಗಳಿಗೆ ಮನುಷ್ಯ ಸೇರಿದಂತೆ ಇತರ ಪ್ರಾಣಿಗಳಿಗೆ ಇರುವಂತೆ ಕಿವಿಗಳಿಲ್ಲ. ಶಬ್ಧಗಳು ಕೇಳುವುದಿಲ್ಲ. ಆದರೂ ಹಾವುಗಳು ಮದುಡಿ ಕುಳಿತಿದ್ದರೂ ತನ್ನ ಹತ್ತಿರಕ್ಕೆ ಬರುವ ಮನುಷ್ಯ ಸೇರಿ ಪ್ರಾಣಿಗಳ ಮೇಲೆ ದಾಳಿ ಮಾಡುತ್ತದೆ. ಆದರೆ ಹಾವಿಗೆ ವಿಶೇಷ ಶಕ್ತಿ ಇದೆ. ಇದೇ ಶಕ್ತಿ ಮೂಲಕ ಹಾವುಗಳು ಗ್ರಹಿಸುತ್ತದೆ.

ಕಂಪನ ಗ್ರಹಿಸುತ್ತದೆ ಹಾವು

ಭೂಮಿಯಲ್ಲಿ ಉಂಟಾಗುವ ಕಂಪನಗಳನ್ನು (Vibrations) ಗ್ರಹಿಸುವಲ್ಲಿ ಹಾವುಗಳು ಅತ್ಯಂತ ಚುರುಕಾಗಿರುತ್ತವೆ. ನೀವು ನೆಲದ ಮೇಲೆ ನಡೆದುಕೊಂಡು ಹೋಗುವಾಗ, ನಿಮ್ಮ ಹೆಜ್ಜೆಗಳು ಭೂಮಿಯ ಮೇಲ್ಮೈಯಲ್ಲಿ ಸೂಕ್ಷ್ಮ ಕಂಪನಗಳನ್ನು ಸೃಷ್ಟಿಸುತ್ತವೆ. ನೆಲಕ್ಕೆ ತಾಗಿಕೊಂಡಿರುವ ಹಾವಿನ ದೇಹವು ಈ ಕಂಪನಗಳನ್ನು ತಕ್ಷಣವೇ ಗ್ರಹಿಸುತ್ತದೆ. ಬಳಿಕ ಈ ಕಂಪನಗಳು ಹಾವಿನ ದವಡೆಯ ಮೂಳೆಗಳು (Jaw) ಮತ್ತು ಸುತ್ತಮುತ್ತಲಿನ ಅಂಗಾಂಶಗಳ ಮೂಲಕ ನೇರವಾಗಿ ಅದರ ಒಳಕಿವಿಗೆ (Inner ear) ತಲುಪುತ್ತವೆ.

ನೀವು ಪೊದೆ ಅಥವಾ ಕಾಡಿನ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಹಾವೊಂದು ತಕ್ಷಣವೇ ಅಲ್ಲಿಂದ ಸರಿದು ಮರೆಯಾದರೆ, ಅದು ನಿಮ್ಮ ಹೆಜ್ಜೆ ಸಪ್ಪಳವನ್ನು 'ಕೇಳಿಸಿಕೊಂಡು' ಹೋಗಿರುವುದಿಲ್ಲ. ಬದಲಾಗಿ, ನೀವು ಬರುತ್ತಿರುವುದನ್ನು ಭೂಮಿಯ ಕಂಪನದ ಮೂಲಕ 'ಅನುಭವಿಸಿ' (Felt) ದಾರಿ ಬಿಟ್ಟಿರುತ್ತದೆ. ಅಥವಾ ನಿಮ್ಮ ನಡೆಯುವ ಶಬ್ದದ ಕಂಪನಗಳನ್ನು ಕೇಳಿಸಿಕೊಂಡು ಹತ್ತಿರ ಬರುತ್ತಿದ್ದಂತೆ ದಾಳಿ ಮಾಡುತ್ತದೆ.

ಹಾವುಗಳು ಇಷ್ಟೊಂದು ವಿಶಿಷ್ಟ ಮತ್ತು ವಿಸ್ಮಯಕಾರಿ ಜೀವಿಗಳಾಗಿರಲು ಇದೂ ಒಂದು ಪ್ರಮುಖ ಕಾರಣ. ಅವು ಈ ಜಗತ್ತನ್ನು ಮನುಷ್ಯರಿಗಿಂತ ಸಂಪೂರ್ಣ ಭಿನ್ನವಾಗಿ ಗ್ರಹಿಸುತ್ತವೆ. ಮನುಷ್ಯರು 20 ರಿಂದ 20,000 ಹರ್ಟ್ಜ್ (Hertz) ತರಂಗಾಂತರದ ಶಬ್ದ ಕೇಳಬಲ್ಲವರಾದರೆ, ಹಾವುಗಳು ಕೇವಲ 50 ರಿಂದ 1,000 ಹರ್ಟ್ಜ್ ನಡುವಿನ ಕಂಪನಗಳನ್ನು ಮಾತ್ರ ಗ್ರಹಿಸಬಲ್ಲವು.

ಹಾವಿನ ಕಣ್ಣು ಸೂಕ್ಷ್ಮ

ಹಾವುಗಳಿಗೆ ಕಣ್ಣುರೆಪ್ಪೆಗಳು (Eyelids) ಇಲ್ಲ. ಹೀಗಾಗಿ ಹಾವು ಎಂದಿಗೂ ಕಣ್ಣು ಮಿಟುಕಿಸುವುದಿಲ್ಲ. ಬದಲಾಗಿ, ಕಣ್ಣಿನ ರಕ್ಷಣೆಗಾಗಿ 'ಸ್ಪೆಕ್ಟಾಕಲ್' ಅಥವಾ 'ಐ ಕ್ಯಾಪ್' (Eye cap) ಎಂಬ ಪಾರದರ್ಶಕ ಪೊರೆಯಿರುತ್ತದೆ. ಹಾವುಗಳು ನೀಲಿ ಮತ್ತು ಹಸಿರು ಬಣ್ಣಗಳನ್ನು ಮಾತ್ರ ಗುರುತಿಸಬಲ್ಲವು. ಅಪಾಯ ಎದುರಾದಾಗ ಕಣ್ಣಿನ ರಕ್ತನಾಳಗಳನ್ನು ಸಂಕುಚಿತಗೊಳಿಸಿ ಮತ್ತಷ್ಟು ಸ್ಪಷ್ಟವಾಗಿ ನೋಡುವ ಸಾಮರ್ಥ್ಯ ಇವುಗಳಿಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಮ್​ ಹೆಂಡ್ತಿ ಬಿಟ್ಟು ಪಕ್ಕದ್​ ಮನೆ ಹೆಂಡ್ತೀರ ಮಾತು ಯಾಕೆ ಕೇಳ್ತೀರಾ ಎಂದ ಜಡ್ಜ್​! ಹೈಕೋರ್ಟ್​ನಲ್ಲಿ ಹೀಗೊಂದು ಪ್ರಸಂಗ
ಮನೆ ಖರೀದಿಸುವ ಮುನ್ನ ಎಚ್ಚರ.. ಈ 5 ಸ್ಥಳಗಳಲ್ಲಿ ಫ್ಲ್ಯಾಟ್, ಮನೆ ತಗೊಂಡ್ರೆ ಬದುಕು ನರಕ!