ಹಾಲಿವುಡ್ ನಟಿಯರಿಗೆ ಟಕ್ಕರ್ ನೀಡ್ತಿದ್ದಾರೆ ಟ್ರಂಪ್ 45 ವರ್ಷದ ಮಗಳು, ಅವರ ಫಿಟ್ನೆಸ್ ರುಟೀನ್ ಇಲ್ಲಿದೆ

Published : Nov 12, 2026, 03:44 PM IST
Ivanka Trump

ಸಾರಾಂಶ

ಹಾಲಿವುಡ್‌ ನಟಿಯರನ್ನು ನಾಚಿಸುವಂತ ಸೌಂದರ್ಯವನ್ನು ಇವಾಂಕಾ ಟ್ರಂಪ್‌ ಹೊಂದಿದ್ದಾರೆ. 45ನೇ ವಯಸ್ಸಿನಲ್ಲೂ ಅವರು ಇಷ್ಟೊಂದು ಫಿಟ್‌ ಆಗಿರಲು ಕಾರಣ ಏನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ತಮ್ಮ ಸೌಂದರ್ಯ, ಫಿಟ್ನೆಸ್ ಮತ್ತು ಜೀವನಶೈಲಿಯಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. 45ನೇ ವಯಸ್ಸಿನಲ್ಲೂ ಅವರು ಇಷ್ಟೊಂದು ಫಿಟ್‌ ಆಗಿರಲು ಅವರ ಲೈಫ್‌ ಸ್ಟೈಲ್‌ ಕಾರಣ. ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿರುವ ಇವಾಂಕಾ, ತಮ್ಮ ಫಿಟ್ನೆಸ್ ಹಿಂದಿನ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

ಇವಾಂಕಾ ದಿನ ಹೀಗಾರಂಭವಾಗುತ್ತೆ

ಇವಾಂಕಾ ಟ್ರಂಪ್ ಫಿಟ್ನೆಸ್ಗಾಗಿ ಕೇವಲ ಜಿಮ್ವನ್ನೇ ಅವಲಂಬಿಸಿಲ್ಲ. ಸಕ್ರಿಯ ಜೀವನಶೈಲಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪ್ರತಿದಿನ ಬೆಳಗ್ಗೆ ಬೇಗ ಎದ್ದು ಧ್ಯಾನ ಮಾಡುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಇದು ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಬಳಿಕ ವಾಕಿಂಗ್ ಮಾಡ್ತಾರೆ. ಕೆಲವೊಮ್ಮೆ ಸ್ವಿಮ್ಮಿಂಗ್ ಅವರ ದಿನಚರಿಯ ಭಾಗವಾಗಿದೆ. ಕುಟುಂಬದೊಂದಿಗೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನೂ ಪಡೆಯುತ್ತಾರೆ. ಇದು ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ದೃಢತೆಯನ್ನೂ ಹೆಚ್ಚಿಸುತ್ತದೆ.

ಆಹಾರ ಪದ್ಧತಿಯಲ್ಲೂ ಶಿಸ್ತು

ಡೈಲಿ ಮೇಲ್ ವರದಿ ಪ್ರಕಾರ, ಇವಾಂಕಾ ತಮ್ಮ ಆಹಾರದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಪ್ರಸ್ತುತ ಹೈ ಪ್ರೋಟೀನ್ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದು, ಪ್ರತಿ ಊಟದಲ್ಲೂ ಸಾಕಷ್ಟು ಪ್ರೋಟೀನ್ ಇರುವಂತೆ ನೋಡಿಕೊಳ್ಳುತ್ತಾರೆ. ಬೆಳಗ್ಗೆ ಬಾಳೆಹಣ್ಣು, ಕೋಕೋ ಸೇರಿದಂತೆ ಪೌಷ್ಟಿಕಾಂಶಗಳಿರುವ ವಿಶೇಷ ಪಾನೀಯ ಸೇವಿಸುತ್ತಾರೆ. ಆಹಾರದಲ್ಲಿ ಸಾಧ್ಯವಾದಷ್ಟು ಪೋಷಕಾಂಶಗಳನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ವಾರಕ್ಕೆ ನಾಲ್ಕು ದಿನ ವರ್ಕೌಟ್

ಇವಾಂಕಾ ವಾರದಲ್ಲಿ ನಾಲ್ಕು ದಿನ ವ್ಯಾಯಾಮ ಮಾಡುತ್ತಾರೆ. ಪುಶ್, ಪುಲ್ ಮತ್ತು ಡೆಡ್ಲಿಫ್ಟ್ನಂತಹ ಸರಳವಾದರೂ ಪರಿಣಾಮಕಾರಿ ವ್ಯಾಯಾಮಗಳಿಗೆ ಆದ್ಯತೆ ನೀಡುತ್ತಾರೆ. ಕಠಿಣ ವ್ಯಾಯಾಮ ಮಾಡುವುದಕ್ಕಿಂತ ಸರಿಯಾದ ತಂತ್ರದೊಂದಿಗೆ ಮೂಲಭೂತ ವ್ಯಾಯಾಮಗಳನ್ನು ಮಾಡುವುದು ಮುಖ್ಯ ಅನ್ನೋದು ಅವರ ವಾದ. ಮಾತೃತ್ವದ ಬಳಿಕ ತಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಹಿಂದೆ ಆಹಾರ ಪದ್ಧತಿಯ ಬಗ್ಗೆ ಅಷ್ಟೊಂದು ಗಮನ ನೀಡುತ್ತಿರಲಿಲ್ಲ. ಆದರೆ ತಾಯಿಯಾದ ಬಳಿಕ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರಂತೆ.

ಇವಾಂಕಾ ಕೆಲವೊಮ್ಮೆ ತಮಗಿಷ್ಟವಾದ ಆಹಾರವನ್ನೂ ಸವಿಯುತ್ತಾರೆ. ಅವರ ಪ್ರಕಾರ ಫಿಟ್ನೆಸ್ ಕಾಪಾಡಿಕೊಳ್ಳಲು ಆಹಾರದಲ್ಲಿ ಸಮತೋಲನ ಅತ್ಯಂತ ಮುಖ್ಯ. ಒಟ್ಟಿನಲ್ಲಿ, ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ, ಧ್ಯಾನ ಮತ್ತು ಸಕ್ರಿಯ ಜೀವನಶೈಲಿಯೇ 45ರ ಹರೆಯದಲ್ಲೂ ಇವಾಂಕಾ ಫಿಟ್ ಆಗಿರಲು ಪ್ರಮುಖ ಕಾರಣವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಮಾಯಣದಲ್ಲಿ ಸಾಯಿಪಲ್ಲವಿ ಧರಿಸಿದ ಆಭರಣಗಳ ಹಿಂದೆ 18 ತಿಂಗಳ ಶ್ರಮ, 150ಕ್ಕೂ ಹೆಚ್ಚು ಕುಶಲಕರ್ಮಿಗಳ ಕೌಶಲ್ಯ!
Kurta Sets: ಕಾಲೇಜು ಮತ್ತು ಆಫೀಸ್‌ಗೆ ಯಾವ ಕುರ್ತಾ ಸೆಟ್ ಚೆನ್ನಾಗಿರುತ್ತೆ? ಇಲ್ಲಿವೆ ಟ್ರೆಂಡಿ ಡಿಸೈನ್ಸ್