ಮಂಜುಗಡ್ಡೆಯಾದ ನಯಾಗರಾ: ವೈರಲ್ ಆಯ್ತು ಫಾಲ್ಸ್ ಬ್ಯೂಟಿ!

First Published | Feb 1, 2019, 4:50 PM IST

ತನ್ನ ಸೌಂದರ್ಯದಿಂದಲೇ ವಿಶ್ವ ಪ್ರಸಿದ್ಧವಾಗಿರುವ ಕೆನಡಾದ ನಯಾಗರಾ ಜಲಪಾತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ವರ್ಷವಿಡೀ ಹಸಿರು ಬಣ್ಣದಿಂದ ಕಂಗೊಳಿಸುವ ಈ ಜಲಪಾತ ಇದೀಗ ಮತ್ತೊಂದು ರೂಪ ಪಡೆದಿದೆ. ತಾಪಮಾನ ಇಳಿಕೆಯಾದ ಪರಿಣಾಮ ಸದ್ಯ ನಿಂತ ನೀರಾಗಿರುವ ಈ ಜಲಪಾತ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಸದ್ಯ ನಯಾಗರಾ ಜಲಪಾತದ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಕೆನಡಾದಲ್ಲಿರುವ ವಿಶ್ವ ಪ್ರಸಿದ್ಧ ನಯಾಗರಾ ಜಲಪಾತ ಸದ್ಯ ನಿಂತ ನೀರಾಗಿದೆ. ಜಲಪಾತದ ಬಹುತೇಕ ಭಾಗ ಕಡಿಮೆ ತಾಪಮಾನದಿಂದಾಗಿ ಮಂಜುಗಡ್ಡೆಯಾಗಿ ಮಾರ್ಪಾಡಾಗಿದೆ.
undefined
ಸದ್ಯ ನಯಾಗರಾ ಜಲಪಾತದ ಮನಮೋಹಕ ದೃಶ್ಯಗಳು ಜನರ ಕಣ್ಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.
undefined

Latest Videos


ಪ್ರಕೃತಿ ಸೌಂದರ್ಯವನ್ನು ಮೀರುವ ಸೌಂದರ್ಯ ಮತ್ತೊಂದಿಲ್ಲ ಎನ್ನುವ ಮಾತಿದೆ. ಈ ಮಾತು ನಯಾಗರಾ ಜಲಪಾತದ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ಇದೇ ಕಾರಣದಿಂದ ಇಲ್ಲಿ ಮೈಕೊರೆಯುವ ಚಳಿ ಇದ್ದರೂ ಪ್ರವಾಸಿಗರ ಸಂಖ್ಯೆ ಕುಂದಿಲ್ಲ.
undefined
ಸರಿ ಸುಮಾರು 12ಸಾವಿರ ವರ್ಷಗಳ ಹಿಂದೆ ವಿಸ್ಕೋಸ್ನಿನ್ ಗ್ಲೇಶಿಯರ್ ಎಂಬ ಹಿಮಗಡ್ಡೆ ಕರಗಿದ ಪರಿಣಾಮವಾಗಿ ಈ ಜಲಪಾತ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ. ಆದರೆ 1880ರ ಬಳಿಕ ಈ ಜಲಪಾತದ ನೀರಿನಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಯ್ತು.
undefined
ಚಳಿಗಾಲದಲ್ಲಿ ಹೊಸ ರೂಪ ತಾಳಿರುವ ನಯಾಗರಾ ಜಲಪಾತ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಜಲಪಾತದ ಈ ನಯನ ಮನೋಹರ ದೃಶ್ಯ ಕಂಡ ಪ್ರವಾಸಿಗರೂ ಪ್ರಕೃತಿ ವಿಸ್ಮಯವೆನ್ನುತ್ತಿದ್ದಾರೆ.
undefined
ಉಳಿದ ದಿನಗಳಲ್ಲಿ ಜಲಪಾತವು ಹಸಿರು ಬಣ್ಣದಿಂದ ಕೂಡಿರುತ್ತದೆ. ನೀರಿನ ರಭಸಕ್ಕೆ ಬರುವ ಚಿಕ್ಕ ಪುಟ್ಟ ಕಲ್ಲುಗಳು ಹಾಗೂ ನೀರಿನಲ್ಲಿರುವ ಉಪ್ಪಿನ ಅಂಶದಿಂದಾಗಿ ಈ ಬಣ್ಣ ಪಡೆದುಕೊಳ್ಳುತ್ತದೆ ಎನ್ನಲಾಗಿದೆ.
undefined
ಎಲ್ಲಿ ನೋಡಿದರೂ ಮಂಜುಗಡ್ಡೆಯ ರೂಪ ತಾಳಿರುವ ನಯಾಗರಾ ಫಾಲ್ಸ್‌ನ ಈ ಬ್ಯೂಟಿಯನ್ನು ಕೆಲವರು ಮನದಲ್ಲೇ ಸೆರೆ ಹಿಡಿದರೆ, ಹಲವರು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.
undefined
click me!