ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ.
undefined
ತೀರ್ಥಹಳ್ಳಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ
undefined
ಪಶ್ಚಿಮ ಘಟ್ಟಗಳ ಕಾಡಿನ ನಡುವೆ ಇರುವ ಕೋಟೆ ಇದು. ಚಾರಣಕ್ಕೆ ಹೇಳಿ ಮಾಡಿಸಿದ ತಾಣ.
undefined
9ನೇ ಶತಮಾನದಲ್ಲಿ ನಿರ್ಮಿಸಿದ ಈ ಕೋಟೆಯನ್ನು 14ನೇ ಶತಮಾನದಲ್ಲಿ ಚೆಲುವರಂಗಪ್ಪ ಅವರಿಂದ ನವೀಕರಿಸಲ್ಪಟ್ಟಿತು.
undefined
ವೆಂಕಟಪ್ಪ ನಾಯಕ ಇಲ್ಲಿ ಅರಮನೆಯನ್ನು ಕಟ್ಟಿ, ಅದನ್ನು ಅಗ್ರಹಾರವನ್ನಾಗಿಸಿದ್ದರು.
undefined
ಮೂರು ಸುತ್ತಿನ ಈ ಕೋಟೆಯನ್ನು ಕಲ್ಲು, ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ.
undefined
ಕೋಟೆ ಮಧ್ಯದಲ್ಲಿ ದೇವಾಲಯ ಹಾಗೂ ಪಾಳುಬಿದ್ದ ಒಂದು ಭವ್ಯ ಅರಮನೆಯೂ ಇದೆ.
undefined
ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳ ಹಾಗೂ ಸುಮಾರು 6 ಅಡಿ ಉದ್ದದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು.
undefined
ಕಾಶಿಯಿಂದ ತಂದ ಅಮೃತಶಿಲೆ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
undefined
ರಶ್ಮಿ ಕಾರ್ಗಲ್, ಮೇಲಿನಕೊಪ್ಪ
undefined