
ಎಚ್‌ಐವಿಗೆ ಕಾರಣವಾಗುವ ಸಿಮಿಯನ್ ಇಮ್ಯುನೊಡಿಫಿಶಿಯೆನ್ಸಿ ವೈರಸ್ (ಎಸ್‌ಐವಿ) ನಿವಾರಣೆಗೆ ನೂತನ ಚಿಕಿತ್ಸೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಜರ್ಮನ್ ಪ್ರಿಮೇಟ್ ಕೇಂದ್ರದ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ತಂಡ ಅಭಿವೃದ್ಧಿ ಪಡಿಸಿದ ಆ್ಯಂಟಿರಿಟ್ರೊವೈರಲ್ ಔಷಧದ ಮೂಲಕ ಎಸ್‌ಐವಿ ವೈರಸ್‌ನ್ನು 90 ದಿನಗಳಲ್ಲಿ ನಿವಾರಿಸಲಾಗಿತ್ತು. ಅಲ್ಲದೆ, ಪ್ರತಿಕಾಯ ಚಿಕಿತ್ಸೆ ಮೂಲಕ ರೋಗ ಗುಣಪಡಿಸಲಾಗಿತ್ತು. ಆದರೆ, ಕಾಯಿಲೆಪೀಡಿತ ವ್ಯಕ್ತಿ ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ವೈರಸ್ ಮತ್ತೆ ಮರುಜೀವ ಪಡೆಯುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.