
ನವದೆಹಲಿ(ಅ.17): ಸ್ಪರ್ಧೆಯೇ ನಡೆಸದೆ ‘ಮಿಸ್ ಅರ್ಥ್ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರನ್ನು ಘೋಷಣೆ ಮಾಡಲಾಗಿದೆ ಎಂದು ಫೈನಲಿಸ್ಟ್ ಸ್ಪರ್ಧಿ ಬರೆದಿರುವ ಬಹಿರಂಗ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್ ಹಂತಕ್ಕೇರಿದ್ದ ತನಗೆ ಸ್ಪರ್ಧೆಯ ಆಯೋಜಕ ಮಂಡಳಿಯ ಕಾರ್ಯನಿರ್ವಹಣೆ ಶೈಲಿಯ ಈ ಬೆಳವಣಿಗೆಯಿಂದ ಮಾನಸಿಕವಾಗಿ ಆಘಾತವಾಗಿದೆ ಎಂದು ಅವರು ಹೇಳಿರುವುದಾಗಿ ‘ಯಾಹೂ ಲೈಫ್`ಸ್ಟೈಲ್ ವರದಿ ಮಾಡಿದೆ
ಹೆಸರನ್ನು ಬಹಿರಂಗಪಡಿಸದಿರುವ ಫೈನಲಿಸ್ಟ್, ಸ್ಪರ್ಧೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಮಿಸ್ ಅರ್ಥ್ ಇಂಡಿಯಾ-2016’ ವಿಜೇತೆ ರಾಶಿ ಯಾದವ್‌ರನ್ನು ಸ್ಪರ್ಧೆ ನಡೆಸದೆ ಆಯ್ಕೆ ಮಾಡಲಾಗಿದೆ ಎಂದು ಆಕೆ ಆಪಾದಿಸಿದ್ದಾರೆ. ಫೈನಲ್‌ನಲ್ಲಿ 25 ಅ ಸ್ಪರ್ಥಿಗಳನ್ನು ವೇದಿಕೆಗೆ ಕರೆಯಲಾಯಿತು ಮತ್ತು ಕೆಲವೇ ಕ್ಷಣಗಳಲ್ಲಿ ವಿಜೇತೆಯ ಹೆಸರನ್ನು ಘೋಷಿಸಲಾಯಿತು ಎಂದು ಆಕೆ ಬರೆದಿದ್ದಾರೆ.
‘ಕ್ರಮವಾಗಿ ಮೂರು ಸುತ್ತಿನ ಸ್ಪರ್ಧೇ ನಾವು ಎದುರಿಸಬೇಕಾಗಿತ್ತು. ಕೊನೆಯ ಸುತ್ತಿನಲ್ಲಿ ಕೊರಿಯೊಗ್ರಾಫಿ ಸಿದ್ಧವಾಗಿರಲಿಲ್ಲ. 25 ಸ್ಪ ರ್ಧಿಗಳನ್ನು ವೇದಿಕೆಗೆ ಕರೆದಾಗ ಅತ್ಯಂತ ನಾಟಕೀಯ ಬೆಳವಣಿಗೆಯೊಂದು ನಡೆಯಿತು. ಓರ್ವ ವ್ಯಕ್ತಿ ವೇದಿಕೆಗೆ ಆಗಮಿಸಿ, ವಿಜೇತರನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಘೋಷಿಸಿದರು. ಅನುಭವ, ಮೌಲ್ಯ, ಸಾಧನೆಯ ಆಧಾರದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ರಾಶಿಯವರನ್ನು ವಿಜೇತೆ ಎಂದು ಘೋಷಿಸಲಾಯಿತು. ಉಳಿದ 24 ಸ್ಪರ್ಧೆಗಳೂ ಅವಮಾನಿತರಾದರು ಮತ್ತು ಬೆಚ್ಚಿಬಿದ್ದಿದ್ದರು,’’ ಎಂದು ಅವರು ಬರೆದುಕೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಅತ್ಯಂತ ಮುಖ್ಯವಾಗಿರುವ ಪರಿಚಯ ಸುತ್ತು, ಪ್ರಶ್ನಾ ಸುತ್ತು, ಉತ್ತರ ಸುತ್ತು ಹಾಗೂ ಸಂಜೆ ಗೌನು ಸುತ್ತು ಇರಲೇ ಇಲ್ಲ ಎಂದೂ ಪತ್ರ ಬರೆದಿರುವ ಫೈನಲಿಸ್ಟ್ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.