
‘ಕೆಲಸ’ ಮುಗಿದ್ಕೂಡ್ಲೆ ನಿದ್ದೆ ಬರುತ್ತಲ್ಲ?
1) ನನ್ನ ವಯಸ್ಸು 36. ಲೈಂಗಿಕ ಕ್ರಿಯೆ ಮುಗಿದ ಕೂಡಲೇ ನನಗೆ ನಿದ್ರೆ ಬರುತ್ತದೆ. ನನ್ನ ಈ ವರ್ತನೆಯನ್ನು ಸ್ವಾರ್ಥ ಎಂದು ಜರಿದು, ಪತ್ನಿ ಕೋಪಿಸಿಕೊಂಡಿದ್ದೂ ಉಂಟು. ನನ್ನ ನಿದ್ರಾ ಸಮಸ್ಯೆಗೆ ಏನು ಮಾಡುವುದು? ಎಲ್ಲರಿಗೂ ಹೀಗೆಯೇ ಆಗುತ್ತದಾ?
- ಹೆಸರು ಬೇಡ, ಊರು ಬೇಡ
ಅನೇಕ ಗಂಡಸರು ರತಿ ಮುನ್ನಲಿವಿನಾಟದಲ್ಲಿ ತೊಡಗದೆ, ಪತ್ನಿಯಲ್ಲಿ ಲೈಂಗಿಕ ಬಯಕೆಯನ್ನು ಅರಳಿಸದೆ, ಕೇವಲ ಸಂಭೋಗ ಮಾಡಿ ಮುಗಿಸುತ್ತಾರೆ. ಅಲ್ಲದೆ, ಬೆಳಗಿನಿಂದ ಕೆಲಸ ಮಾಡಿ ಬಂದು ಆಯಾಸಗೊಂಡಿದ್ದು, ಪ್ರೀತಿಯಿಲ್ಲದೆ ಸುಮ್ಮನೆ ಯಾಂತ್ರಿಕವಾಗಿ ಸಂಭೋಗ ಮಾಡಬೇಕೆಂಬ ಹಠದಿಂದ ಬಯಕೆ ನೀಗಿಸಿಕೊಳ್ಳುತ್ತಾರೆ. ಇದು ಪತ್ನಿಗೆ ಸ್ವಾರ್ಥ ಎಂದು ತೋರುತ್ತದೆ. ಪ್ರಾಯಶಃ ನೀವೂ ಹೀಗೆಯೇ ಮಾಡುತ್ತಿರಬಹುದು. ಲೈಂಗಿಕ ಕ್ರಿಯೆಗೆ ಹೆಚ್ಚಿನ ಸಮಯ ಕೊಡಿ. ಬಹಳ ಆಯಾಸವಾಗಿದ್ದರೆ ಲೈಂಗಿಕ ಕ್ರಿಯೆ ಮಾಡಬೇಡಿ. ಸೀಯರಲ್ಲಿ ಕಾಮ ಅರಳುವುದು ನಿಧಾನ. ಅದು ಶಾಂತವಾಗುವುದೂ ನಿಧಾನ. ಆದ್ದರಿಂದ ಸಂಭೋಗ ಪೂರ್ವದ ರತಿಯಾಟ (ಊಟ್ಟಛ್ಟಿಟ್ಝ) ಹಾಗೂ ಸಂಭೋಗಾನಂತರದ ರತಿಯಾಟ (ಅ್ಛಠಿಛ್ಟಿಟ್ಝ) ಎರಡೂ ಮುಖ್ಯ. ಒಂದೆರಡು ದಿನ ಸಂಭೋಗದ ನಂತರ ಆಲಿಂಗನ, ಚುಂಬನಾದಿಗಳಲ್ಲಿ ತೊಡಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಗ ಬೇಗನೆ ನಿದ್ರೆ ಬರುವುದು ತಪ್ಪುತ್ತದೆ.
(ಕನ್ನಡ ಪ್ರಭ : ಡಾ. ಬಿ.ಆರ್ ಸುಹಾಸ್, ಲೈಂಗಿಕತಜ್ಞ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.