Achiever : 26ನೇ ಬಾರಿ ಮೌಂಟ್ ಎವರೆಸ್ಟ್ ಏರಿ ವ್ಯಕ್ತಿದ ಸಾಧನೆಗೆ ಬೇಷೆ ಎಂದ ನೆಟ್ಟಿಗರು!

By Suvarna NewsFirst Published May 16, 2023, 1:25 PM IST
Highlights

ಮೌಂಟ್ ಎವರೆಸ್ಟ್ ಏರೋದು ಅನೇಕರ ಕನಸು. ಕೆಲವರು ಕನಸು ಈಡೇರಿಸಿಕೊಳ್ಳಲು ಹೋಗಿ ಹಿಂತಿರುಗಿ ಬಂದಿಲ್ಲ. ಮತ್ತೆ ಕೆಲವರಿಗೆ ಮೌಂಟ್ ಎವರೆಸ್ಟ್ ಏರೋದು ತುಂಬಾ ಸುಲಭ. ಅದ್ರಲ್ಲಿ ಪಸಾಂಗ್ ದಾವಾ ಸೇರಿದ್ದಾರೆ. 
 

ಮೌಂಟ್ ಎವರೆಸ್ಟ್ ಏರೋದು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ಪ್ರಯತ್ನ ಬೇಕು. ತರಬೇತಿ ಬೇಕು. ಛಲವೊಂದಿದ್ರೆ ಎಲ್ಲವನ್ನೂ ಸಾಧಿಸಬಹುದು ಎಂಬುದಕ್ಕೆ ನೇಪಾಳದ ಪಸಾಂಗ್ ದಾವಾ ಶೆರ್ಪಾ ಉತ್ತಮ ನಿದರ್ಶನ. ನೇಪಾಳದ ಪಸಾಂಗ್ ದಾವಾ ಶೆರ್ಪಾ, ಒಂದಲ್ಲ ಎರಡಲ್ಲ ಬರೋಬ್ಬರಿ 26ನೇ ಬಾರಿ ಮೌಂಟ್ ಎವರೆಸ್ಟ್ ಏರಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಸಾಂಗ್ ದಾವಾ ಶೆರ್ಪಾ ಪಾತ್ರರಾಗಿದ್ದಾರೆ. 

46 ವರ್ಷದ ಪಸಾಂಗ್ ದಾವಾ (Pasang Dawa) ಶೆರ್ಪಾ ಅವರು 8,849 ಮೀಟರ್ (29,032 ಅಡಿ) ಶಿಖರವನ್ನು 26 ನೇ ಆರೋಹಣ ಮಾಡಿದ್ದಾರೆ ಎಂದು ಸರ್ಕಾರಿ ಪ್ರವಾಸೋದ್ಯಮ (Tourism) ಅಧಿಕಾರಿ ಬಿಗ್ಯಾನ್ ಕೊಯಿರಾಲಾ ತಿಳಿಸಿದ್ದಾರೆ.

ದಾಖಲೆ (Record) ಮಾಡಿದ ಪಸಾಂಗ್ ದಾವಾ : ಹಂಗೇರಿಯನ್ ಪ್ರವಾಸಿಯೊಂದಿಗೆ ಪಸಾಂಗ್ ದಾವಾ ಮೌಂಟ್ ಎವರೆಸ್ಟ್ ತಲುಪಿದ್ದಾರೆ. ಪಾಂಗ್‌ಬೋಚೆಯಲ್ಲಿ ಜನಿಸಿದ ದಾವಾ, ಪ್ರತಿದಿನ ಎವರೆಸ್ಟ್ ಅನ್ನು ನೋಡುತ್ತಾ ಬೆಳೆದವರು. ಅವರು ಭಾನುವಾರ ಬೆಳಿಗ್ಗೆ 9 ಗಂಟೆ 6 ನಿಮಿಷಕ್ಕೆ ಮೌಂಟ್ ಎವರೆಸ್ಟ್ ಶಿಖರವನ್ನು 26ನೇ ಬಾರಿ ತಲುಪಿ ಸಾಧನೆ ಮಾಡಿದ್ದಾರೆ. 

BREATHING TIPS : ಉಸಿರಾಡೋದೊಂದು ಕಲೆ, ಸರಿಯಾಗಿ ಉಸಿರಾಡುತ್ತೀರಾ?

1998ರಲ್ಲಿ ಮೊದಲ ಬಾರಿ ಮೌಂಟ್ ಎವರೆಸ್ಟ್ ಏರಿದ ದಾವಾ : ಪಸಾಂಗ್ ದಾವಾ ಅವರು ಈ ಹಿಂದೆ 1998, 1999, 2002, 2003, 2004 ಮತ್ತು 2006 ರಲ್ಲಿ ಎರಡೆರೆಡು ಬಾರಿ ಎವರೆಸ್ಟ್ ಶಿಖರವನ್ನು ಏರಿದ್ದರು.  2007, 2008, 2009, 2010, 2011 ರಲ್ಲಿ ಎರಡು ಬಾರಿ ಮತ್ತು  2012 ರಲ್ಲಿ ಎರಡು ಬಾರಿ, 2013 ರಲ್ಲಿ ಎರಡು ಬಾರಿ, 2016 ರಲ್ಲಿ ಎರಡು ಬಾರಿ, 2017 ಮತ್ತು 2018ರಲ್ಲಿ ಎರಡು ಬಾರಿ ಮತ್ತು 2019ರಲ್ಲಿ ಎರಡು ಬಾರಿ ಮತ್ತು 2022ರಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ್ದಾರೆ. 

ಶೆರ್ಪಾಗಳು ಯಾರು? : ಕ್ಲೈಂಬಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ಜನರನ್ನು ಶೆರ್ಪಾಗಳು ಎಂದು ಕರೆಯಲಾಗುತ್ತದೆ. ಶೆರ್ಪಾಗಳು ಮುಖ್ಯವಾಗಿ ವಿದೇಶಿ ಜನರಿಗೆ ಪರ್ವತಗಳನ್ನು ಏರಲು ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಾರೆ. 

Health Tips: ಮಸಾಲೆ ಸೇರಿಸೋ ಬದಲು ಬೇಯಿಸಿದ ಚಿಕನ್ ತಿನ್ನೋದು ಆರೋಗ್ಯಕ್ಕೆ ಬೆಸ್ಟ್‌

ದಾಖಲೆ ಪರವಾನಗಿ : ಎವರೆಸ್ಟ್ ಶಿಖರವನ್ನು ತಲುಪಲು ಬಯಸುವ ವಿದೇಶಿ ಆರೋಹಿಗಳಿಗೆ ನೇಪಾಳ ಹೇಳಿ ಮಾಡಿಸಿದ ಜಾಗ. ಈ ವರ್ಷ ಶಿಖರ ಏರಲು ದಾಖಲೆಯ 467 ಪರವಾನಗಿಗಳನ್ನು ನೀಡಲಾಗಿದೆ. ನೇಪಾಳವು ಈ ಹಿಂದೆ 2021 ರಲ್ಲಿ ದಾಖಲೆಯ 409 ಪರವಾನಗಿಗಳನ್ನು ನೀಡಿತ್ತು. ಒಂದು ವರ್ಷದ ನಂತರ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಈ ವರ್ಷ ಮುಂಬರುವ ಆರ್ಥಿಕ ಹಿಂಜರಿತದಿಂದಾಗಿ  ಈ ಸಂಖ್ಯೆ 325 ಕ್ಕೆ ಇಳಿದಿದೆ.

11000ಕ್ಕೂ ಬಾರಿ ಎವರೆಸ್ಟ್ ಏರಿದ್ದು ಯಾರು? : ಕನಿಷ್ಠ ಒಬ್ಬ ಶೆರ್ಪಾ ಮಾರ್ಗದರ್ಶಿಯೊಂದಿಗೆ ಪ್ರತಿಯೊಬ್ಬ ಆರೋಹಿ ಶಿಖರ ಏರಬೇಕಾಗುತ್ತದೆ. ಹಿಮಾಲಯನ್ ಡೇಟಾಬೇಸ್ ಮತ್ತು ನೇಪಾಳಿ ಅಧಿಕಾರಿಗಳ ಪ್ರಕಾರ, 1953 ರಲ್ಲಿ ಸರ್ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ತೇನ್ಸಿಂಗ್ ನಾರ್ಗೆ ಮೊದಲ ಬಾರಿಗೆ ಎವರೆಸ್ಟ್ ಅನ್ನು 11,000 ಕ್ಕೂ ಹೆಚ್ಚು ಬಾರಿ ಏರಿದ್ದರು. ಅವರ ಜೊತೆ ಎವರೆಸ್ಟ್ ಏರಲು  ಪ್ರಯತ್ನಿಸಿದವರಲ್ಲಿ ಸುಮಾರು 320  ಮಂದಿ ಸಾವನ್ನಪ್ಪಿದ್ದರು.  ಹೈಕಿಂಗ್ ಕಂಪನಿ ಇಮ್ಯಾಜಿನ್ ನೇಪಾಲ್ ಟ್ರೆಕ್ಸ್ ನ ಅಧಿಕಾರಿಯೊಬ್ಬರ ಪ್ರಕಾರ, ಹಂಗೇರಿಯನ್ ಪ್ರವಾಸಿಗರೊಂದಿಗೆ ಪಸಾಂಗ್ ದಾವಾ ಈಗ ವಾಪಸ್ ಆಗ್ತಿದ್ದು, ಸುರಕ್ಷಿತವಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.ಪಸಾಂಗ್ ದಾವಾ ಜೊತೆ ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಹಂಗೇರಿ, ಚೀನಾ ಮತ್ತು ಪಾಕಿಸ್ತಾನ ಹಾಗೂ ನೇಪಾಳದ 5 ಪ್ರವಾಸಿಗರು ಸಹ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಾರೆ. 
 

click me!