ಮನುಷ್ಯ ಬದುಕಿರೋಕೆ ಉಸಿರಾಟ ನಿರಂತರವಾಗಿ ನಡೆಯುತ್ತಿರಬೇಕು. ಹಾಗಾಂತ ಹೆಂಗ್ ಹೆಂಗೋ ಉಸಿರಾಡಿದ್ರೆ ಅದು ಒಳ್ಳೆಯದಲ್ಲ. ಆರೋಗ್ಯವಂತ ವ್ಯಕ್ತಿ ಉಸಿರಾಟಕ್ಕೂ ಒಂದಿಷ್ಟು ನಿಯಮವಿದೆ. ಯಾವ ವಯಸ್ಸಿನ ಮನುಷ್ಯ ಒಂದು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಟ ನಡೆಸಬೇಕು ಎಂಬುದು ತಿಳಿದಿರಬೇಕು.
ಉಸಿರಾಟ ನಿಂತ್ರೆ ಮುಗೀತು. ದೀರ್ಘಕಾಲ ಆರೋಗ್ಯಕರವಾಗಿ ಬಾಳ್ಬೇಕು ಎಂದಾದ್ರೆ ಶ್ವಾಸಕೋಶದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈಗಿನ ದಿನಗಳಲ್ಲಿ ಜಾಗತಿಕವಾಗಿ ಉಸಿರಾಟದ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಒಂದು ಸಂಶೋಧನೆಯ ಪ್ರಕಾರ, ಸುಮಾರು ಶೇಕಡಾ 76ರಷ್ಟು ಹೃದಯಾಘಾತ ರೋಗಿಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಉಸಿರಾಟದ ಸಮಸ್ಯೆ ಹಿಂದೆ ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಕಾಯಿಲೆ ಕಾರಣವಾಗಿರಬಹುದು. ಬೇಗ ರೋಗ ಪತ್ತೆಯಾದ್ರೆ ಚಿಕಿತ್ಸೆ ಸುಲಭವಾಗುತ್ತದೆ. ಇದ್ರಿಂದ ರೋಗಿಗಳ ಜೀವ ಉಳಿಯುತ್ತದೆ. ಆದ್ರೆ ನಮ್ಮ ಉಸಿರಾಟ ಸರಿಯಾಗಿದೆಯೇ ಇಲ್ಲವೆ ಎಂಬುದನ್ನು ಪತ್ತೆ ಮಾಡೋದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಉಸಿರಾಟದ ಪತ್ತೆ ಹೇಗೆ ಎಂಬ ಗೊಂದಲ ಅನೇಕರಲ್ಲಿದೆ. ನಾವಿಂದು ಇದ್ರ ಬಗ್ಗೆ ಮಾಹಿತಿ ನೀಡ್ತೇವೆ.
ಒಬ್ಬ ವ್ಯಕ್ತಿ ಒಂದು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡಬೇಕು? : ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಉಸಿರಾಟ (Breathe) ದ ಪ್ರಮಾಣ ಬದಲಾಗುತ್ತದೆ. ಮಕ್ಕಳ (Children) ಲ್ಲಿ ಪ್ರತಿ ನಿಮಿಷಕ್ಕೆ ಉಸಿರಾಟದ ಪ್ರಮಾಣವು ವಯಸ್ಕರಿಗಿಂತ ಹೆಚ್ಚಾಗಿರುತ್ತದೆ. ವಯಸ್ಸಿ (Age) ಗೆ ತಕ್ಕಂತೆ ಉಸಿರಾಟದ ಪ್ರಮಾಣ ಇಲ್ಲಿದೆ :
HEALTH TIPS: ಮಸಾಲೆ ಸೇರಿಸೋ ಬದಲು ಬೇಯಿಸಿದ ಚಿಕನ್ ತಿನ್ನೋದು ಆರೋಗ್ಯಕ್ಕೆ ಬೆಸ್ಟ್
0 ರಿಂದ 6 ತಿಂಗಳ ವಯಸ್ಸಿನ ಮಕ್ಕಳಲ್ಲಿ - 30 ರಿಂದ 60 ರವರೆಗೆ
6 ರಿಂದ 12 ತಿಂಗಳ ವಯಸ್ಸಿನ ಮಕ್ಕಳಲ್ಲಿ - 24 ರಿಂದ 30 ರವರೆಗೆ
1 ರಿಂದ 5 ವರ್ಷ ವಯಸ್ಸಿನ ಮಕ್ಕಳಲ್ಲಿ - 20 ರಿಂದ 30 ರವರೆಗೆ
6 ರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ - 12 ರಿಂದ 20 ರವರೆಗೆ
12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ - 12 ರಿಂದ 18 ರವರೆಗೆ
ಇದಕ್ಕಿಂತ ಹೆಚ್ಚಾದಲ್ಲಿ ಅಥವಾ ಕಡಿಮೆಯಾದಲ್ಲಿ ವೈದ್ಯ (Doctor) ರನ್ನು ಸಂಪರ್ಕಿಸಬೇಕಾಗುತ್ತದೆ. ಒತ್ತಡ, ಉಸಿರಾಟದ ಕಾಯಿಲೆ, ಮಧುಮೇಹ, ಸ್ಥೂಲಕಾಯ, ವ್ಯಾಯಾಮದ ಕೊರೆತೆ ಸಂದರ್ಭದಲ್ಲಿ ರೋಗಿಯ ಉಸಿರಾಟದಲ್ಲಿ ಬದಲಾವಣೆಯಾಗುತ್ತದೆ.
ಉಸಿರಾಟದ ದರ ಪರೀಕ್ಷೆ ಹೇಗೆ? : ನಿಮ್ಮ ಉಸಿರಾಟ ಸರಿಯಾಗಿದೆಯೇ ಎಂಬುದನ್ನು ನೀವು ಮನೆಯಲ್ಲಿಯೇ ಪರೀಕ್ಷೆ ಮಾಡಬಹುದು. ಒಂದು ನಿಮಿಷದಲ್ಲಿ ನೀವು ಎಷ್ಟು ಉಸಿರಾಡುತ್ತೀರಿ ಎಂಬುದನ್ನು ಪರೀಕ್ಷೆ ಮಾಡಬೇಕಾಗುತ್ತದೆ. ಮೊದಲು ನೀವು ಆರಾಮವಾಗಿ ಕುಳಿತುಕೊಳ್ಳಬೇಕು. ನಂತ್ರ ಉಸಿರಾಡುವ ವೇಳೆ ನಿಮ್ಮ ಎದೆ ಎಷ್ಟು ಬಾರಿ ಮೇಲೆಕ್ಕೆ ಹೋಗಿದೆ ಎಂಬುದನ್ನು ಒಂದು ನಿಮಿಷದವರೆಗೆ ಲೆಕ್ಕ ಹಾಕಬೇಕು.
ಅರ್ಧ ಗಂಟೆಗೂ ಹೆಚ್ಚು ಮೊಬೈಲ್‌ನಲ್ಲಿ ಮಾತನಾಡ್ತೀರಾ, ಹಾರ್ಟ್‌ಅಟ್ಯಾಕ್ ಆಗೋದು ಖಂಡಿತ!
ಉಸಿರಾಟ ಕ್ರಿಯೆ ಅಸಹಜವಾಗಿದ್ದರೆ ಕಾಡುತ್ತೆ ಈ ಎಲ್ಲ ಸಮಸ್ಯೆ : ನಿಮ್ಮ ಉಸಿರಾಟ, ಮೇಲಿನ ದರಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಿದ್ದರೆ ಕೆಲವೊಂದು ಲಕ್ಷಣ ಕಾಣಿಸಿಕೊಳ್ಳುತ್ತದೆ. ಆತಂಕ, ಸುಸ್ತು, ಹೃದಯಾಘಾತ, ಭಯ, ಜ್ವರ, ಅತಿಯಾದ ಬೆವರು, ದೇಹದ ತಾಪಮಾನದಲ್ಲಿ ಬದಲಾವಣೆ ಸೇರಿದಂತೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಉಸಿರಾಟ ಅಸಹಜವಾಗಿದ್ದರೆ ಏನು ಮಾಡ್ಬೇಕು? : ನಿಮ್ಮ ಉಸಿರಾಟ ಕ್ರಿಯೆ ಅಸಹಜವಾಗಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಆಸ್ಪತ್ರೆಯಲ್ಲಿ ವ್ಯಕ್ತಿಯ ಪರೀಕ್ಷೆ ನಡೆಸಿ ಆಕ್ಸಿಜನ್ ಮಾಸ್ಕ್ ಅಳವಡಿಸುತ್ತಾರೆ. ಉಸಿರಾಡಲು ನಿಮಗೆ ತೊಂದರೆ ಅನ್ನಿಸಿದ್ರೆ ತೆರೆದ ಕೋಣೆಯಲ್ಲಿ ಕುಳಿತುಕೊಳ್ಳಿ. ಆಳವಾಗಿ ಉಸಿರಾಡಿ. ಯಾವುದೇ ಒತ್ತಡಕ್ಕೆ ಒಳಗಾಗಬೇಡಿ. ಪ್ರತಿ ದಿನ ನಿಯಮಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳನ್ನು ಮಾಡುವುದ್ರಿಂದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಬಹುದು. ಇದಲ್ಲದೆ ನೀವು ಆರೋಗ್ಯಕರ ಆಹಾರ ಸೇವನೆ ಮಾಡಬೇಕಾಗುತ್ತದೆ. ಮಾಲಿನ್ಯದಿಂದ ದೂರವಿರಬೇಕು. ತೂಕ ನಿಯಂತ್ರಣದ ಮಾಡುವುದಲ್ಲದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಮುಖ್ಯವಾಗುತ್ತದೆ. ಅಗತ್ಯವಿರುವ ಲಸಿಕೆಯನ್ನು ಹಾಕಿಕೊಳ್ಳಬೇಕು.