
ಮನೆ, ಅಡುಗೆ ಮನೆಯಲ್ಲಿ ಇನ್ನಿಲ್ಲದೇ ಕಾಡುವ ಹಾಗೂ ರಾತ್ರಿ ವೇಳೆ ಮನೆ ತುಂಬಾ ಓಡಾಡುತ್ತಾ ಮನೆ ಮಂದಿಗೆ ಅನಾರೋಗ್ಯವನ್ನು ಹರಡುವ, ಭಯ ಪಡಿಸುವ ಜಿರಳೆಗಳ ಕಾಟ ಹೆಚ್ಚಾಗಿದೆಯೇ? ಹಾಗಿದ್ದರೆ ಜಿರಳೆಗಳನ್ನೂ ಓಡಿಸಲು ಇಲ್ಲಿದೆ ನೋಡಿ ನೈಸರ್ಗಿಕ ವಿಧಾನ. ಈ ಸಿಂಪಲ್ ಟಿಪ್ಸ್ ಬಳಸಿ, ಎಂದಿಗೂ ಜಿರಳೆಗಳು ಮನೆಯತ್ತ ಸುಳಿಯದಂತೆ ಓಡಿಸಿ..
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಒಂದೇ ಒಂದು ಸಾರ್ವಕಾಲಿಕ ಸಮಸ್ಯೆ ಎಂದರೆ ಜಿರಳೆಗಳ ಹಾವಳಿ. ಬಹುತೇಕರ ಮನೆಯ ಅಡುಗೆ ಮನೆಯಲ್ಲಿ ಹೆಚ್ಚಾಗಿ ಜಿರಳೆಗಳು ಕಂಡುಬರುತ್ತವೆ. ಇನ್ನು ಕೆಲವರ ಮನೆಗಳಲ್ಲಿ ಕಟ್ಟಿಗೆ ಅಲ್ಮೆರಾ, ವಾಲ್ಡ್ರೋಬ್, ಪೆಟ್ಟಿಗೆಗಳು ಅಥವಾ ಇನ್ನಿತರೆ ಖಾಲಿ ಸಾಮಗ್ರಿಗಳಲ್ಲಿ ಜಿರಳೆಗಳು ಸೇರಿಕೊಂಡು ಮೊಟ್ಟೆ ಇಡುತ್ತವೆ. ನಂತರ, ಒಂದು ಮೊಟ್ಟೆ ಮರಿಯಾದರೆ ಇಡೀ ಮನೆಯಲ್ಲೆಲ್ಲಾ ಅಡಗಿ ಕುಳಿತು ಮನೆ ತುಂಬೆಲ್ಲಾ ಜಿರಳೆಗಳ ಓಡಾಟ ಶುರುವಾಗುತ್ತದೆ. ಜಿರಳೆಗಳು ಬಂದ ನಂತರ ನಾವು ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಅವುಗಳನ್ನು ನಿಯಂತ್ರಣ ಮಾಡುವುದು ಸಾಧ್ಯವಾಗುವುದಿಲ್ಲ. ಇನ್ನು ಜಿರಳೆ ಓಡಿಸಲು ಬಳಸುವ ರಾಸಾಯನಿಕಗಳನ್ನು ಹಾಕುವುದಕ್ಕೆ ಮಕ್ಕಳಿಗೆ ಎಲ್ಲಿ ಹಾನಿಯಾಗುತ್ತದೆ ಎಂಬ ಭಯ ಇರುತ್ತದೆ. ಹೀಗಾಗಿ, ನೈಸರ್ಗಿಕವಾಗಿಯೇ ಜಿರಳೆಗಳನ್ನು ಓಡಿಸಲು ಪಾಲಿಸಬೇಕಾದ ಕ್ರಮಗಳು ಇಲ್ಲಿವೆ ನೋಡಿ..
ಮನೆಯಲ್ಲಿ ತಿಂಡಿ ತಿನಿಸುಗಳನ್ನ ಎಲ್ಲೆಂದರಲ್ಲಿ ಚೆಲ್ಲದೇ, ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೀರೋ ಅಷ್ಟೇ ಸ್ವಚ್ಛವಾಗಿ ನಿಮ್ಮ ಅಡುಗೆ ಮನೆಯೂ ಇರುತ್ತದೆ. ಯಾವಾಗಲೂ ಅಡುಗೆ ಮನೆ ಒರೆಸಿಟ್ಟರೆ ಚಿಕ್ಕ ಪುಟ್ಟ ಕ್ರಿಮಿ ಕೀಟಗಳು, ನೊಣಗಳು, ಜಿರಳೆಗಳು ಯಾವುದೂ ಅಡುಗೆ ಮನೆ ಹತ್ತಿರ ಸುಳಿಯುವುದಿಲ್ಲ. ಆದರೆ ಪ್ರತಿದಿನ ಸ್ವಚ್ಛ ಮಾಡಿದ ಮಾತ್ರಕ್ಕೆ ಜಿರಳೆಗಳ ಕಾಟ ತಪ್ಪುವುದಿಲ್ಲ. ಅಡುಗೆ ಮನೆಯ ಡ್ರಾಯರ್‌ಗಳಲ್ಲಿ ಅವು ಸೇಫಾಗಿ ಕೂತಿರುತ್ತವೆ. ಹಾಗಾಗಿ ಅಡುಗೆ ಮನೆ ಡ್ರಾಯರ್‌ಗಳಿಗೆ ಜಿರಳೆಗಳು ಬರದ ಹಾಗೆ ನೋಡಿಕೊಳ್ಳಬೇಕು. ಜಿರಳೆಗಳು ಸಂಪೂರ್ಣವಾಗಿ ಬರದೇ ಇರಬೇಕು ಅಂದ್ರೆ ನೀವು ಈ ಕೆಲಸಗಳನ್ನು ಮಾಡಬೇಕು. ಏನೇನು ಅಂತ ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ: ಗಂಡನಾಗಲು 18 ಷರತ್ತು; ಸಿಂಗಲ್ಲಾಗಿರುವಂತೆ ಸಲಹೆ ಕೊಟ್ಟ ನೆಟ್ಟಿಗರು!
ಅಡುಗೆ ಮನೆ ಡ್ರಾಯರ್‌ಗಳನ್ನ ಯಾವಾಗಲೂ ಸ್ವಚ್ಛವಾಗಿಡೋದು ತುಂಬಾ ಮುಖ್ಯ. ಸ್ವಚ್ಛ ಮಾಡೋಕೆ ವಿನೆಗರ್ ಮತ್ತು ನೀರನ್ನು ಮಿಕ್ಸ್ ಮಾಡಿ ಆ ಮಿಶ್ರಣದಿಂದ ಡ್ರಾಯರ್ ಒರೆಸಬೇಕು. ಇದು ಡ್ರಾಯರ್‌ನಲ್ಲಿರೋ ತಿಂಡಿಯ ಚೂರುಗಳು ಮತ್ತು ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತೆ. ತಿಂಡಿ ತಿನಿಸುಗಳನ್ನ ಗಾಳಿ ಆಡದ ಡಬ್ಬಗಳಲ್ಲಿಡೋದನ್ನ ಮರೀಬೇಡಿ. ಹೀಗೆ ಮಾಡಿದ್ರೆ ಜಿರಳೆಗಳ ಕಾಟ ಕಡಿಮೆಯಾಗುತ್ತದೆ.
ಒಣಗಿದ ಬೇವಿನ ಎಲೆಗಳನ್ನು ಡ್ರಾಯರ್ ಒಳಗೆ ಅಥವಾ ಜಿರಳೆಗಳು ಹೆಚ್ಚಾಗಿ ಬರೋ ಜಾಗದಲ್ಲಿಟ್ಟರೆ ಜಿರಳೆಗಳ ಕಾಟ ದೂರವಾಗುತ್ತದೆ. ಬೇವಿನ ಎಲೆ ಅಥವಾ ಬೇವಿನ ಎಣ್ಣೆಯನ್ನೂ ಜಿರಳೆಗಳನ್ನ ಓಡಿಸೋಕೆ ಉಪಯೋಗಿಸಬಹುದು. ಬೇವಿನ ಎಣ್ಣೆ ಹಾಕಿದ ನೀರನ್ನ ಸ್ಪ್ರೇ ಮಾಡಿದರೂ ಜಿರಳೆಗಳು ಬರೋದಿಲ್ಲ. ಬೇವಿನ ಎಲೆ ಸಿಕ್ಕಿಲ್ಲವೆಂದತೆ ಲವಂಗ, ಏಲಕ್ಕಿ ಇವುಗಳನ್ನೂ ಉಪಯೋಗಿಸಬಹುದು.
ಇದನ್ನೂ ಓದಿ: ಬ್ರೌನ್ ರೈಸ್ vs ವೈಟ್ ರೈಸ್: ತೂಕ ಇಳಿಸಲು ಯಾವುದು ಬೆಸ್ಟ್?
ಜಿರಳೆಗಳನ್ನ ಓಡಿಸೋ ಔಷಧಿಗಳು:
ಜಿರಳೆಗಳು ಬಂದಾಗ ಅವುಗಳನ್ನ ಓಡಿಸೋ ಔಷಧಿಗಳನ್ನು ಉಪಯೋಗಿಸುವುದೂ ಒಳ್ಳೆಯದು. ತಿಂಡಿ ತಿನಿಸುಗಳನ್ನ ಇಡೋ ಜಾಗದಲ್ಲಿ ಮತ್ತು ಸ್ವಚ್ಛ ಇರದ ಜಾಗದಲ್ಲಿ ಜಿರಳೆಗಳು ಹೆಚ್ಚಾಗಿ ಬರುತ್ತವೆ. ಹಾಗಾಗಿ ಜಿರಳೆಗಳು ಹೆಚ್ಚಾಗಿ ಬರೋ ಜಾಗದಲ್ಲಿ ಔಷಧಿ ಹಾಕಿದರೆ ಜಿರಳೆಗಳನ್ನ ಓಡಿಸಬಹುದು. ರಾಸಾಯನಿಕ ಔಷಧಿಗಳನ್ನು ಬಳಸುವಾಗ ಮಕ್ಕಳ ಬಗ್ಗೆ ಜಾಗ್ರತೆವಹಿಸುವುದು ಮುಖ್ಯವಾಗುತ್ತದೆ. ಇನ್ನು ಜಿರಳೆಗಳು ತಿಂದು ಸಾಯಲೆಂದು ಇಡುವ ಕೆಲವೊಂದು ಔಷಧಿಗಳನ್ನು ಚಿಕ್ಕ ಮಕ್ಕಳು ಸೇವಿಸಿದಲ್ಲಿ ಪ್ರಾಣಕ್ಕೂ ಹಾನಿ ಆಗಬಹುದು. ಇನ್ನು ಜಿರಳೆ ಓಡಿಸಲು ಬಳಸುವ ಸ್ಪ್ರೇಗಳಿಂದ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.