
ಮೈಸೂರ್ ಪಾಕ್.. ಕನ್ನಡನಾಡಿನ ಬಹು ಜನಪ್ರಿಯ ಸಿಹಿ ತಿಂಡಿ. ದೇಶ, ವಿದೇಶಗಳಲ್ಲಿ ಇದರ ಖ್ಯಾತಿ ಹಬ್ಬಿದೆ. ಅಂದಹಯಾಗೆ, ಈ ಸಿಹಿ ತಿಂಡಿ ತಯಾರಿಸಲು ಆರಂಭಿಸಿದ ಇತಿಹಾಸ ತುಂಬಾನೇ ಕುತೂಹಲಕಾರಿಯಾಗಿದೆ.
ಹೌದು, 1935ರಲ್ಲಿ ಮೈಸೂರ ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಊಟಕ್ಕೆ ಅಣಿಗೊಳಿಸಿದ್ದರಂತೆ. ಆದರೆ, ರಾಜಭೋಜನದಲ್ಲಿ ಸಿಹಿ ತಿಂಡಿಯ ಜಾಗ ಖಾಲಿ ಇಳಿದಿತ್ತಂತೆ. ಯಾವ ಸಿಹಿತಿಂಡಿ ಮಾಡಬೇಕು ಎಂದು ಮಾದಪ್ಪನವರು ಚಿಂತೆಗೀಡಾಗಿದ್ದರು. ತಲೆಗೆ ಅದೇನೊ ಹೊಳೆಯಿತೋ ಏನೋ ಕಡಳೆಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಒಂದು ಪಾಕಪ್ರಯೋಗ ಮಾಡಿಯೇ ಬಿಟ್ಟರು.
ಮಹಾರಾಜರು ಊಟ ಮುಗಿಸುವ ಹೊತ್ತಿಗೆ ಗಟ್ಟಿಯಾದ ಪಾಕವನ್ನ ಅಳುಕಿನಿಂದಲೇ ದೊರೆಯ ಮುಂದಿಟ್ಟರು. ಸಿಹಿತಿಂಡಿಯನ್ನ ಚಪ್ಪರಿಸಿದ ಮಹಾರಾಜರು ಇದೇನಿದು ಹೊಸ ರುಚಿ ಇಷ್ಟೊಂದು ಸ್ವಾದಿಷ್ಟವಾಗಿದೆ. ಈ ಸಿಹಿತಿಂಡಿಯ ಹೆಸರೇನೆ ಎಂದರಂತೆ. ತಬ್ಬಿಬ್ಬಾದ ಮಾದಪ್ಪನವರು ‘ಮೈಸೂರು ಪಾಕ’ ಎಂದರಂತೆ. ಅಂದು ಹುಟ್ಟಿಕೊಂಡ ಮೈಸೂರು ಪಾಕ್ ಇಂದು ಜಗತ್ಪ್ರಸಿದ್ಧವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.