
ಮುಂಬೈ(ನ.28): ಕ್ಯಾಬ್'ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹಲವರಿಗೆ ಕೆಟ್ಟ ಅನುಭವವಾಗುತ್ತದೆ. ಟ್ರಾಫಿಕ್ ಸಮಸ್ಯೆ, ಚಾಲಕನ ಕೆಟ್ಟ ವರ್ತನೆ, ಹೀಗೆ ಒಂದಿಲ್ಲೊಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಮುಂಬೈಯ ಹಿಮಾನಿ ಜೈನ್ ಎಂಬಾಕೆಗೆ ಆದ ಅನುಭವ ವಿಭಿನ್ನವಾಗಿದೆ. ಮನೆಯಿಂದ ಆಫಿಸ್'ಗೆ ತಲುಪುವವರೆಗೆ ತನಗಾದ ಅನುಭವವನ್ನು ಹಿಮಾನಿ ತನ್ನ ಫೇಸ್'ಬುಕ್'ನಲ್ಲಿ ಹಂಚಿಕೊಂಡಿದ್ದು, ಇದೀಗ ಈಕೆಯ ಈ ಪೋಸ್ಟ್ ವೈರಲ್ ಆಗುತ್ತಿದೆ.
'ನಾನು ಉಬರ್ ಪೂಲ್ ಕ್ಯಾಬ್'ನಲ್ಲಿ ಮನೆಯಿಂದ ಆಫೀಸ್'ಗೆ ಹೊರಟಿದ್ದೆ. ಗಾಯತ್ರಿ ಎಂಬಾಕೆಯೊಂದಿಗೆ ನಾನು ಕ್ಯಾಬ್ ಶೇರ್ ಮಾಡಿದ್ದೆ. ಚಾಲಕ ಶಾಂತ ಸ್ವಭಾವದವನಾಗಿದ್ದ. ಆದರೆ ಗಾಯತ್ರಿ ಡ್ರಾಪ್ ವಿಚಾರವಾಗಿ ಚಾಲಕನೊಂದಿಗೆ ವಾದ ಮಾಡಲಾರಂಭಿಸಿದ್ದಳು.
'ಆ್ಯಪ್'ನಲ್ಲಿದ್ದಂತೆ ನಾನು ಡ್ರಾಪ್ ಮಾಡುತ್ತೇನೆ' ಎಂದು ಸಮಾಧಾನದಿಂದ ಚಾಲಾಕ ಉತ್ತರಿಸಿದ್ದ. ಆದರೆ ಗಾಯತ್ರಿ ಆತನಿಗೆ ಅವಾಚ್ಯ ಪದಗಳನ್ನುಪಯೋಗಿಸಿ ಬೈಯ್ದದ್ದಲ್ಲದೆ, ಕೆನ್ನೆಗೆ ಬಾರಿಸುತ್ತೇನೆಂದು ಬೆದರಿಕೆ ಹಾಕಿದಳು. ಈ ಸಂದರ್ಭದಲ್ಲಿ ನೀವು ತಪ್ಪು ಅರ್ಥೈಸಿಕೊಂಡಿದ್ದೀರಿ ಎಂದು ತಿಳಿಸಲು ಪ್ರಯತ್ನಿಸಿದೆ. ಆದರೆ ಇದ್ಯಾವುದನ್ನೂ ಕೇಳದ ಆಕೆ ಪೊಲೀಸ್ ಸ್ಟೇಷನ್'ಗೆ ಹೋಗಲು ತಯಾರಾದಳು ಆದರೆ ನಾನು ದೂರು ನೀಡಲು ಒಪ್ಪದ ಕಾರಣ ನನ್ನ ಮೇಲೂ ಕೋಪಗೊಂಡಳು. ಇದಾದ ಬಳಿಕ ಚಾಲಕ ನನ್ನನ್ನು ನನ್ನ ಆಫೀಸ್ ಬಳಿ ಡ್ರಾಪ್ ನೀಡಿದ ಆದರೆ ಇಷ್ಟಾಗುವಾಗಲೇ ಗಾಯತ್ರಿ ಪೊಲೀಸರಿಗೆ ಕರೆ ಮಾಡಿದ್ದಳು. ದೂರು ಪಡೆದ ಪೊಲೀಸರು ಸ್ಥಳಕ್ಕಾಗಮಿಸಿದ್ದಲ್ಲದೆ, ಅಕ್ಕ ಪಕ್ಕದ ಜನರು ಗುಂಪುಗೂಡಿದರು. ನಾನು ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿ ನಡೆದಿರುವುದಲ್ಲಿ ಚಾಲಕನ ಯಾವುದೇ ತಪ್ಪಿಲ್ಲ ಎಂದು ವಿವರಿಸಿದೆ.
ವಿವರಣೆ ನೀಡಿದ ಬಳಿಕ ಆಫೀಸ್ ಕಡೆ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ನನ್ನನ್ನು ತಡೆದ ಮಹಿಳಾ ಪೊಲೀಸ್ 'ನೀನು ಕೂಡಾ ಸ್ಟೇಷ'ಗೆ ಬಾ. ಇಲ್ದರೆ ಚಾಲಕನಿಗೆ ಹಿಂಸೆ ನೀಡುತ್ತಾರೆ' ಎಂದರು. ಆಗ ರಾತ್ರಿ 9 ಗಂಟೆಯಾಗಿತ್ತು. ಪೊಲೀಸ್ ಠಾಣೆಗೆ ಹೋಗಲು ಭಯವಾಯಿತಾದರೂ ನಾನು ಠಾಣೆಗೆ ತೆರಳಿದೆ. ಠಾಣೆಯಲ್ಲಿ ಗಾಯತ್ರಿ ಚಾಲಕನ ವಿರುದ್ಧ ಿಲ್ಲ ಸಲ್ಲದ ಾರೋಪ ಮಾಡಿದಳಲ್ಲದೆ ಆತನ ವಿರುದ್ಧ FIR ದಾಖಲಿಸಬೇಕೆಂದು ಒತ್ತಾಯಿಸಿದಳು.
ನಾನು ನಡೆದ ಘಟನೆ ವಿವರಿಸಿದೆ. ಗಂಟೆ 11 ಆದರೂ ಗಾಯತ್ರಿ ಮಾತ್ರ ಚಾಲಕ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಹಠ ಹಿಡಿದಿದ್ದಳು. ಆದರೆ ನಾವು ಆತನಿಗೆ ಬುದ್ಧಿ ಕಲಿಸುತ್ತೇವೆ. ನೀನು ಮನೆಗೆ ಹೋಗು ಎಂದು ಸಮಾಧಾನ ಮಾಡಿ ಮನೆಗೆ ಕಳುಹಿಸಿದರು. ಇದಾದ ಬಳಿಕ ಪೊಲೀಸರು ಚಾಲಕನನ್ನು ಒಳಗೆ ಕರೆದೊಯ್ದರು. ಆದರೆ ಒಳ ಹೋದ ಕೆಲವೇ ಕ್ಷಣಗಳಲ್ಲಿ ಯಾರಿಗೋ ಹೊಡೆಯುವ ಶಬ್ಧ ಕೇಳಿಸಿತು. ಚಾಲಕನಿಗೇ ಹೊಡೆಯುತ್ತಿರಬೇಕೆಂದು ಗಾಬರಿ ಬಿದ್ದು ಒಳ ಹೋದ ನಾನು ಅಲ್ಲಿನ ದೃಶ್ಯ ಕಂಡು ಮೂಕ ವಿಸ್ಮಿತಳಾಗಿದ್ದೆ. ಯಾಕೆಂದರೆ ಪೊಲೀಸ್ ತನ್ನ ಬೆಲ್ಟ್'ನ್ನು ನೆಲಕ್ಕೆ ಬಡಿಯುತ್ತಿದ್ದು, ಚಾಲಕ ನಗುತ್ತಾ ನಿಂತಿದ್ದ. ಬಳಿಕ ಪೊಲೀಸರು ಚಾಲಕನನ್ನು ಮನೆಗೆ ಕಳುಹಿಸಿದರು. ನಾನು ಕೂಡಾ ಮನೆಗೆ ತೆರಳಿದೆ. ಮಾನವೀಯತೆ ಮೆರೆದ ಮುಂಬೈ ಪೊಲೀಸರಿಗೆ ನನ್ನ ಧನ್ಯವಾದಗಳು' ಎಂದಿದ್ದಾಳೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕ್ಯಾಬ್ ಡ್ರೈವರ್'ಗಳ ವಿರುದ್ಧ ಕೆಟ್ಟ ಅಭಿಪ್ರಾಯಗಳು ಕೇಳಿ ಬರುತ್ತಿರುವ ಈ ಕಾಲದಲ್ಲಿ ಏನೂ ತಪ್ಪಿಲ್ಲದ ಅಮಾಯಕ ಚಾಲಕನನ್ನು ಪೊಲೀಸ್ ಠಾಣೆ ಏರುವಂತೆ ಮಾಡಿದ್ದು ಅನ್ಯಾಯವೇ ಸರಿ. ಆದರೆ ಈ ದಿಟ್ಟ ಯುವತಿಯ ಧೈರ್ಯ ಹಾಗೂ ಪೊಲೀಸರ ಮಾನವೀಯತೆಯ ಗುಣ ಮಾತ್ರ ಮೆಚ್ಚಲೇಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.