'ಆ' ಸಮಯದಲ್ಲಿ ನೋವಾಗುತ್ತಾ? ಈ ನಂಬಿಕೆಗಳಿಗೆ ಹೇಳಿ ಗುಡ್‌ ಬೈ!

By Web DeskFirst Published Aug 12, 2019, 1:54 PM IST
Highlights

ಸೆಕ್ಸ್ ಎಂಬುದು ಹಲವರಲ್ಲಿ ಉತ್ತಮ ಅನುಭವ, ನೆನಪುಗಳನ್ನು ಉಳಿಸಿದರೆ, ಮತ್ತೆ ಕೆಲವರಿಗೆ ಆತಂಕ ತರುತ್ತದೆ, ಮಹಿಳೆಯರಲ್ಲಿ ಈ ಕುರಿತು ಹಲವು ಚಿಂತೆಗಳಿರುತ್ತವೆ. ಈ ಚಿಂತೆಯಿಂದಾಗಿ ಒತ್ತಡ ಶುರುವಾಗುತ್ತದೆ. ಒತ್ತಡ ಒಳ್ಳೆಯದು ಮಾಡಿದ ಉದಾಹರಣೆಗಳಿಲ್ಲ. 

ಸೆಕ್ಸ್ ಎಂದರೆ ಬದುಕಿನ ಒತ್ತಡಗಳನ್ನು ಕಳೀಬೇಕು ಅಲ್ಲವೇ? ಆದರೆ ಸೆಕ್ಸ್ ಎಂಬ ಯೋಚನೆಯೇ ಒತ್ತಡವಾದರೆ? ಹೌದು, ಸೆಕ್ಸ್ ಎಂದರೆ ಹಲವರಿಗೆ ಹಲವು ಚಿಂತೆಗಳು. ಅದರಲ್ಲೂ ಮಹಿಳೆಯರಿಗೆ ಸೆಕ್ಸ್ ಎಂಜಾಯ್ ಮಾಡಲು ಹಲವು ಅಡ್ಡಿ ಆತಂಕಗಳು, ಸಲ್ಲದ ಯೋಚನೆಗಳು. ಅವುಗಳಲ್ಲಿ ಮುಖ್ಯವಾದ ಮಹಿಳೆಯರ ಭಯಗಳೆಂದರೆ, 

- ಬಟ್ಟೆಯಿಲ್ಲದೆ ನಾನು ಸುಂದರವಾಗಿ ಕಾಣೋಲ್ಲ

ಬಹಳಷ್ಟು ಮಹಿಳೆಯರಿಗೆ ಅವರ ದೇಹದ ಬಗ್ಗೆ ಪಾಸಿಟಿವ್ ಯೋಚನೆಗಳಿರುವುದಿಲ್ಲ. ಬೊಜ್ಜು, ಬಣ್ಣ, ಕೂದಲು, ಮೊಡವೆ, ಕಲೆ - ಹೀಗೆ ಹಲವಾರು ವಿಷಯಗಳು ಮಹಿಳೆಯರು ತಮ್ಮ ದೇಹದ ಕುರಿತು ಆತ್ಮವಿಶ್ವಾಸ ಕಳೆದುಕೊಳ್ಳಲು ಕಾರಣವಾಗುತ್ತವೆ ಎನ್ನುತ್ತಾರೆ ಕೌನ್ಸೆಲರ್ಸ್. ತಮ್ಮ ದೇಹ ಪಾರ್ಟ್ನರ್‌ಗೆ ಇಷ್ಟವಾಗದಿದ್ದರೆ, ಅವರು  ಇದರಿಂದ ನನ್ನಲ್ಲಿ ಆಸಕ್ತಿ ಕಳೆದುಕೊಂಡು ಬಿಟ್ಟರೆ, ಏನಾದರೂ ಅವಮಾನಿಸುವ ಮಾತುಗಳನ್ನಾಡಿದರೆ ಎಂಬ ಆತಂಕ ಬಹುತೇಕ ಮಹಿಳೆಯರರಿಗೆ ಕಾಡುತ್ತಿರುತ್ತದೆ. ಇಂಥ  ಆತಂಕಗಳು ಮಹಿಳೆಯರ ಸೆಕ್ಸ್ ಲೈಫ್‌ನಲ್ಲಿ ಗೊತ್ತಿಲ್ಲದೆಯೇ ಪರಿಣಾಮ ಬೀರುತ್ತವೆ.

- ಉದ್ರೇಕಗೊಳ್ಳುವುದಿಲ್ಲ

ಬಹಳಷ್ಟು ಅಧ್ಯಯನಗಳ ಪ್ರಕಾರ, ಶೇ.70ರಷ್ಟು ಮಹಿಳೆಯರು ಇಂಟರ್‌ಕೋರ್ಸ್‌ನಿಂದ ಉದ್ರೇಕಗೊಳ್ಳುವುದಿಲ್ಲ. ಅವರ ಪ್ಲೆಶರ್  ಪಾಯಿಂಟ್ ಕ್ಲಿಟೋರಿಸ್‌ನಲ್ಲಿರುತ್ತದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದೆ ಪಾರ್ಟ್ನರ್ ನನ್ನ ದೇಹದಲ್ಲೇ ಏನಾದರೂ ಡಿಫೆಕ್ಟ್ ಇರಬಹುದೆಂದು ಎಣಿಸಬಹುದೇ ಎಂಬ ಭಯ  ಮತ್ತೆ ಕೆಲ ಮಹಿಳೆಯರದ್ದು.

- ನಾನು ಕ್ರಿಯೇಟಿವ್ ಅಲ್ಲ

ಇದು  ಪರ್ಫಾರ್ಮೆನ್ಸ್  ಕುರಿತ ಚಿಂತೆ.  ನನಗೆ ಕಲ್ಪನೆಯ ಕೊರತೆ ಇದೆ. ಪಾರ್ಟ್ನರ್‌ಗೆ ಹೊಸ ಹೊಸ ರೀತಿಯಲ್ಲಿ ಖುಷಿಪಡಿಸಲಾರೆನೇನೋ ಎಂಬ ಆತಂಕ. ಹೀಗಾಗಿ, ಬಹಳಷ್ಟು ಮಹಿಳೆಯರು ತಾವು ಸೆಕ್ಸ್ ವಿಷಯದಲ್ಲಿ ತುಂಬಾ ದಡ್ಡರು ಎಂದುಕೊಳ್ಳುತ್ತಾರೆ. 

ಆ ಟೈಮಲ್ಲಿ ಅಂಡರ್‌ವೈರ್ ಬ್ರಾಗಳಿಗೆ ಹೇಳಿ ಬೈ ಬೈ!

- ಸೆಕ್ಸ್‌ನಲ್ಲಿ ಆಸಕ್ತಿ ಇಲ್ಲ

ಬಹಳಷ್ಟು ಮಹಿಳೆಯರಿಗೆ ಸೆಕ್ಸ್‌ನಲ್ಲಿ ಆಸಕ್ತಿ ಹೊರಟುಹೋಗಬಹುದು. ಇದಕ್ಕೆ ಜನನ ನಿಯಂತ್ರಣ ವಿಧಾನ, ಖಿನ್ನತೆ, ನಿದ್ರಾಹೀನತೆ, ಒತ್ತಡ, ಕೆಲವೊಂದು ಮಾತ್ರೆಗಳು ಜೊತೆಗೆ ಸಂಬಂಧದಲ್ಲಿ ತೊಡಕುಗಳು ಕೂಡಾ ಕಾರಣವಿರಬಹುದು. ಆದರೆ, ಈ ಕಾರಣಗಳ ಬಗ್ಗೆ ಜ್ಞಾನವಿಲ್ಲದೆ, ತನ್ನಲ್ಲೇ ಏನೋ ಕೊರತೆ ಇರಬೇಕು ಎಂದು ಬಹಳಷ್ಟು ಮಹಿಳೆಯರು ಅಂದುಕೊಳ್ಳುತ್ತಾರೆ.

- ಬೋರಿಂಗ್

ದಂಪತಿಯು ಅದದೇ ಸೆಕ್ಸ್ ರೂಟಿನ್‌ನಿಂದ ಬೇಸರಗೊಂಡಿರಬಹುದು. ಇದರಿಂದ ಸೆಕ್ಸ್ ಎಂಬುದೇ ಬಹಳಷ್ಟು ಮಹಿಳೆಯರಿಗೆ ಬೋರ್ ಬಂದಿರುತ್ತದೆ. ಅಲ್ಲದೆ, ಸಾಮಾನ್ಯವಾಗಿ ಮಹಿಳೆಯರು ಸೆಕ್ಸ್‌ನಲ್ಲಿ ತಾವೇನು ಬಯಸುತ್ತೇವೆ ಎಂಬುದನ್ನು ಪತಿಯ ಬಳಿ ಹೇಳಲು ಮುಜುಗರ ಅನುಭವಿಸುತ್ತಾರೆ. ತಮಗೆ ಬೇಕಾದ್ದು ದೊರೆಯದ ಕಾರಣದಿಂದಲೂ ಸೆಕ್ಸ್ ಬೋರಿಂಗ್ ಎನಿಸಬಹುದು. ಇದರಿಂದ ಮನಸ್ಸಿಲ್ಲದೆ ಮಾಡಿ ಪಾರ್ಟ್ನರನ್ನು ಖುಷಿಪಡಿಸದಿರುವ ಆತಂಕ ಅನುಭವಿಸುತ್ತಾರೆ. 

- ನೋವಾಗುತ್ತದೆ

ಬಹಳಷ್ಟು ಮಹಿಳೆಯರು ಆರಂಭದಲ್ಲಿ ಸೆಕ್ಸ್‌ನಿಂದ ನೋವನುಭವಿಸುತ್ತಾರೆ. ಇದರಿಂದ ನೋವಾಗುತ್ತದೆ ಎಂಬ ಆತಂಕ ಮನಸ್ಸಿನಲ್ಲಿ ಕುಳಿತುಬಿಡುತ್ತದೆ. ಈಗ ನೋವಾಗುತ್ತದೆ ಎಂಬ ಆತಂಕದಲ್ಲೇ ಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಅವರದನ್ನು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ. 

ಪರಿಸರಕ್ಕೆ ಹಾನಿಕರ ಪ್ಯಾಡ್‌ಗೊಂದು ಪರ್ಯಾಯ ಮೆನ್ಸ್‌ಟ್ರುಯಲ್ ಕಪ್ಸ್!

- ಪ್ರೊಟೆಕ್ಷನ್ ಕೆಲಸ ಮಾಡದಿದ್ದರೆ..

ಮಗು ಬೇಡ ಎಂದು ನಿರ್ಧರಿಸುವ ಸಂದರ್ಭದಲ್ಲಿ ಪ್ರೊಟೆಕ್ಷನ್ ಬಳಸದೆ ದಿನದ ಆಧಾರದಲ್ಲಿ ನಡೆಸುವಾಗ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಎಲ್ಲಾದರೂ ಲೆಕ್ಕಾಚಾರ ತಪ್ಪಿದರೆ, ಪ್ರಗ್ನೆಂಟ್ ಆಗಿಬಿಟ್ಟರೆ ಎಂದು. ಪ್ರೊಟೆಕ್ಷನ್ ಬಳಸುವಾಗಲೂ ಇದು ಕೈಕೊಟ್ಟರೆ ಎಂಬ ಭಯ ಇದ್ದೇ ಇರುತ್ತದೆ. ಈ ಭಯ ಆ ಸಮಯವನ್ನು ಖುಷಿಯಾಗಿರಲು ಬಿಡುವುದಿಲ್ಲ. 

click me!