ಆ ಟೈಮಲ್ಲಿ ಅಂಡರ್‌ವೈರ್ ಬ್ರಾಗಳಿಗೆ ಹೇಳಿ ಬೈ ಬೈ!
ಅಂಡರ್‌ವೈರ್ಡ್ ಬ್ರಾ ಮಹಿಳೆಯರಲ್ಲಿ ಅವರ ಅರಿವಿಗೆ ಬಾರದೆಯೇ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ತರಬಹುದು. ಅಂಥ ಸಮಸ್ಯೆಗಳ್ಯಾವುವು?
ಬಹುತೇಕ ಮಹಿಳೆಯರ ಕ್ಲೋಸೆಟ್ ತೆಗೆದರೆ ಅಲ್ಲಿ ಒಂದಾದರೂ ಅಂಡರ್‌ವೈರ್ಡ್ ಬ್ರಾ ಇರುತ್ತದೆ. ಅವು ಸುಂದರವಾಗಿ, ಲೇಸ್‌ಗಳನ್ನು ಹೊಂದಿ ಸೆಕ್ಸಿಯಾಗಿರಬಹುದು. ಆದರೆ, ಇವುಗಳನ್ನು ಧರಿಸುವುದರಿಂದ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳು ಹುಟ್ಟಬಹುದು ಎಂದು ನಿಮಗೆ ಗೊತ್ತೇ? ಹೌದು, ಚರ್ಮ ಸಮಸ್ಯೆಗಳಿಂದ ಹಿಡಿದು ಎದೆಹಾಲು ಬ್ಲಾಕ್ ಆಗುವವರೆಗೆ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂಡರ್‌ವೈರ್ಡ್ ಬ್ರಾಗಳಿಂದಾಗಬಹುದಾದ ಅನಾರೋಗ್ಯಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.
ಚರ್ಮ ಸಮಸ್ಯೆಗಳು
ಅಂಡರ್‌ವೈರ್ಡ್ ಬ್ರಾಗಳಿಂದ ಹಲವು ರೀತಿಯ ಚರ್ಮ ಸಮಸ್ಯೆಗಳು ತಲೆದೋರಬಹುದು. ಅವುಗಳೆಂದರೆ ತುರಿಕೆ ಹಾಗೂ ಇನ್ಫೆಕ್ಷನ್, ಗಾಯ, ಚರ್ಮ ಕೆಂಪಗಾಗುವುದು, ಅಲರ್ಜಿ. ಇವೆಲ್ಲವೂ ಅಂಡರ್‌ವೈರ್‌ಗಳ ಸಮಸ್ಯೆ. ಅಲ್ಲದೆ, ಬ್ರಾ ಅತಿ ಟೈಟ್ ಆಗಿದ್ದರೆ, ಅವು ಚರ್ಮಕ್ಕೆ ಗಿರಿದು, ಹಿಂಸೆ ಮಾಡುತ್ತವೆ. ಪದೇ ಪದೆ ಬಳಸುವುದರಿಂದ ಮಾರ್ಕ್ ಹೋಗಿ ಗಾಯವಾಗಬಹುದು. ಈ ಗಾಯ ಇನ್ಫೆಕ್ಷನ್‌ಗೆ ತಿರುಗಬಹುದು.
ವಿಶ್ವಾಸ ಹೆಚ್ಚಿಸೋ ಇಂಥ ಬ್ರಾ ಇರಲಿ ನಿಮ್ಮ ವಾಡ್ರೋಬಿನಲ್ಲಿ!
ಇಲ್ಲವೇ ಬಹಳ ಕಾಲದಿಂದ ಬಳಸಿ ಲೂಸಾಗಿದ್ದರೆ ವೈರ್ ಹೊರಗೆ ಬಂದು ವರ್ಕೌಟ್ ಮಾಡುವಾಗ ಅಥವಾ ಡ್ಯಾನ್ಸ್ ಮಾಡುವಾಗ ಚರ್ಮಕ್ಕೆ ಚುಚ್ಚಲಾರಂಭಿಸಬಹುದು. ಇದೂ ಕೂಡಾ ಗಾಯ ಮಾಡಡುತ್ತದೆ. ವಿಷಯ ಎಂದರೆ ಬಹಳಷ್ಟು ಮಹಿಳೆಯರು ಬ್ರಾ ಅದೆಷ್ಟೇ ಹಳತಾದರೂ ಎಸೆಯಲು ಮನಸ್ಸು ಬಾರದೆ ಅವನ್ನಿಟ್ಟುಕೊಂಡು ಧರಿಸಿ ಒದ್ದಾಡುತ್ತಾರೆ. ಅಲ್ಲದೆ, ಬ್ರಾ ಖರೀದಿಸಿದಾಗೆಲ್ಲ ಅವು ಮಹಿಳೆಯರಿಗೆ ಸರಿಯಾಗಿ ಫಿಟ್ ಆಗುವ ನಂಬಿಕೆ ಯಾರಿಗೂ ಇಲ್ಲ. ಇನ್ನು ಕೆಲವೊಂದು ಕಡಿಮೆ ಗುಣಮಟ್ಟದ ಅಂಡರ್‌ವೈರ್ ಮೆಟಲ್ ಬಹಳ ಗಂಟೆಗಳ ಕಾಲ ಚರ್ಮದ ಮೇಲೆ ತಿಣುಕಾಡಿ, ನಿಧಾನವಾಗಿ ತುರಿಕೆ ಆರಂಭವಾಗುತ್ತದೆ. ತುರಿಕೆ ಕೆಲವೊಮ್ಮೆ ಡರ್ಮಟೈಟಿಸ್‌ಗೆ ಕಾರಣವಾಗಿ ಸ್ಕಿನ್ ಡಾಕ್ಟರ್ ಹತ್ರ ಹೋಗದೆ ಉಪಶಮನವಾಗುವ ಲಕ್ಷಣಗಳೇ ಕಾಣುವುದಿಲ್ಲ.
ಕಟ್ಟಿಕೊಳ್ಳುವ ಮಿಲ್ಕ್ ಡಕ್ಟ್‌ಗಳು
ಮಗುವಿಗೆ ಹಾಲು ಕುಡಿಸುವ ತಾಯಂದಿರಿಗೆ ಅಂಡರ್‌ವೈರ್ಡ್ ಬ್ರಾ ಮತ್ತೊಂದು ರೀತಿಯ ಸಮಸ್ಯೆಗೆ ಕಾರಣವಾಗಬಹುದು. ನರ್ಸಿಂಗ್‌ಗೆ ವಿಶೇಷವಾಗಿ ತಯಾರಿಸಲಾದ ಬ್ರಾಗಳನ್ನು ಬಳಸಬೇಕೆಂಬುದು ಸಾಕಷ್ಟು ಮಹಿಳೆಯರಿಗೆ ಅರಿವಿರುವುದಿಲ್ಲ. ಹೀಗಾಗಿ, ತಮ್ಮ ಹಳೆಯ ಬ್ರಾಗಳನ್ನೇ ಬಳಸುತ್ತಾರೆ. ಅದು ಸರಿಯಾದ ಸಪೋರ್ಟ್ ನೀಡದೆ ಕಡೆಗೆ ಅಂಡರ್‌ವೈರ್ಡ್ ಬ್ರಾಗಳ ಮೊರೆ ಹೋಗುವವರು ಹಲವರು. ಈ ಅಂಡರ್‌ವೈರ್ಡ್ ಬ್ರಾಗಳು ಒತ್ತಡ ಹೇರಿ ಹಾಲಿನ ಹರಿವಿನ ಮೇಲೆ ಪರಿಣಾಮ ಬೀರಬಹುದು. ಒಂದೇ ಅತಿಯಾಗಿ ಹಾಲು ಚೆಲ್ಲುವಂತಾಗಿ ಬಾಣಂತಿಗೆ ಹಿಂಸೆಯಾಗಬಹುದು. ಇಲ್ಲವೇ ಅವು ಮಿಲ್ಕ್ ಡಕ್ಟ್‌ಗಳನ್ನು ಬ್ಲಾಕ್ ಮಾಡಿ ಹಾಲು ಬಾರದೆ ತಾಯಿ ಎದೆನೋವಿನಿಂದ ಒದ್ದಾಡುವಂತಾಗಬಹುದು.
ಬೊಜ್ಜಿರೋ ಹೊಟ್ಟೆ ಯಾರಿಗೇ ಬೇಕೇಳಿ? ಹೀಗ್ ಹೋಗಲಾಡಿಸಿಕೊಳ್ಳಿ...
ತಲೆನೋವು ಹಾಗೂ ಕತ್ತು ನೋವು
ಅಂಡರ್‌ವೈರ್ಡ್ ಬ್ರಾಗಳು ತಲೆನೋವು ಹಾಗೂ ಕತ್ತು ನೋವಿಗೆ ಕಾರಣವಾಗುವುದು ಕೂಡಾ ಸಾಬೀತಾಗಿದೆ. ಎದೆ ಹೆಚ್ಚು ಭಾರವಿದ್ದಾಗ ಅದರಿಂದ ಕತ್ತು ಹಾಗೂ ಭುಜ ಎಳೆದಂತಾಗಿ ಮತ್ತಷ್ಟು ನೋವುಂಟಾಗುತ್ತದೆ. ಆಗ ಹೆಚ್ಚಿನ ಸಪೋರ್ಟ್ ಬಯಸಿ ಹಲವು ಮಹಿಳೆಯರು ಅಂಡರ್‌ವೈರ್ಡ್ ಬ್ರಾಗಳ ಮೊರೆ ಹೋಗುತ್ತಾರೆ. ಆದರೆ ಅವುಗಳು ಎದೆಯ ಭಾರವನ್ನೆಲ್ಲ ಕತ್ತು ಹಾಗೂ ಭುಜಗಳೇ ಎಳೆದು ಹಿಡಿದುಕೊಳ್ಳುವಂತೆ ಮಾಡುತ್ತವೆ. ಇದರಿಂದ ತಲೆನೋವು, ಕತ್ತು ನೋವಿನ ಸಮಸ್ಯೆ ಆರಂಭವಾಗುತ್ತದೆ.
ಕ್ರೀಡಾ ಪೆಟ್ಟುಗಳು
ನಿಮಗೆ ತಿಳಿಯದೆ ಹೋಗಬಹುದು, ಆದರೆ ವ್ಯಾಯಾಮಕ್ಕೆ, ಕ್ರೀಡೆಗೆ ಅಂಡರ್‌ವೈರ್ಡ್ ಬ್ರಾ ಯೋಗ್ಯವಲ್ಲ. ಎದೆಗೆ ಸಪೋರ್ಟ್ ಸರಿಯಾಗಿ ಸಿಗದ ಕಾರಣಕ್ಕಾಗಿ ಪರ್ಫಾರ್ಮೆನ್ಸ್ ಕುಗ್ಗುತ್ತದೆ ಅಷ್ಟೇ ಅಲ್ಲ, ಇದು ನೋವುಂಟು ಮಾಡುತ್ತದೆ ಕೂಡಾ. ಸ್ಪೋರ್ಟ್ಸ್‌ಗೆ ಸ್ಟ್ರಾಂಗ್ ಸಪೋರ್ಟ್ ನೀಡುವ ಸ್ಪೋರ್ಟ್ಸ್ ಬ್ರಾವನ್ನೇ ಧರಿಸಬೇಕು.
ಇತರೆ ಸಮಸ್ಯೆಗಳು
ಟೈಟ್ ಆದ ಅಂಡರ್‌ವೈರ್ಡ್ ಬ್ರಾಗಳಿಂದ ಎದೆ ನೋವು ಕೂಡಾ ಕಾಣಿಸಿಕೊಳ್ಳಬಹುದು. ಇದನ್ನು ಹಾರ್ಟ್ ಅಟ್ಯಾಕ್ ಎಂದು ಬಗೆದು ಆಸ್ಪತ್ರೆಯ ಎಮರ್ಜೆನ್ಸಿ ರೂಂಗೆ ಓಡಿದ ಮಹಿಳೆಯರೂ ಇದ್ದಾರೆ. ಚೈನೀಸ್ ಸಾಂಪ್ರದಾಯಿಕ ವೈದ್ಯರ ಬಳಿ ಹೋದರೆ ಅವರು ಅಂಡರ್‌ವೈರ್ಡ್ ಬ್ರಾ ಬಳಸದಿರಲು ಸೂಚಿಸುತ್ತಾರೆ. ಕಾರಣ, ಇದರಲ್ಲಿರುವ ಮೆಟಲಲ್, ದೇಹದ ಎನರ್ಜಿ ಫ್ಲೋ ಹಾಳು ಮಾಡುತ್ತದೆ ಎಂದು. ಜೊತೆಗೆ, ಈ ಮೆಟಲ್ ಎಲೆಕ್ಟ್ರೋಮ್ಯಾಗ್ನೆಟಿಕ್ ಫ್ರೀಕ್ವೆನ್ಸಿಗಳನ್ನು ಆಕರ್ಷಿಸುವುದರಿಂದ ಅವು ಕೆಟ್ಟ ರೇಡಿಯೇಶನ್‌ಗಳಿಗೆ ನಮ್ಮ ದೇಹ ಎಕ್ಸ್‌ಪೋಸ್ ಆಗುವ ಸಂಭವಗಳನ್ನು ಹೆಚ್ಚಿಸುತ್ತದೆ ಎನ್ನುವುದು ಅವರ ನಂಬಿಕೆ.