
ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಎಲ್ಲೆ ಮೀರುತ್ತೆ. ಬರೀ ಪಾರ್ಕ್, ಸಾರ್ವಜನಿಕ ಪ್ರದೇಶದಲ್ಲಿ ಮಾತ್ರವಲ್ಲ ಮನೆಯ ಮೂಲೆ ಮೂಲೆಯಲ್ಲಿ ಸೊಳ್ಳೆ ಇರುತ್ತೆ. ಸಂಜೆಯಾಗ್ತಿದ್ದಂತೆ ಮನೆಯೊಳಗೆ ನುಗ್ಗುವ ಸೊಳ್ಳೆಗಳು ರಾತ್ರಿಪೂರ್ತಿ ದಾಳಿ ಮಾಡುತ್ವೆ. ಫ್ಯಾನ್ ಗಾಳಿಗೂ ಜಗ್ಗದ ಈ ಸೊಳ್ಳೆಗಳು ಬರೀ ಕಚ್ಚಿ ಹೋಗೋದಿಲ್ಲ. ಮನುಷ್ಯ ಹಾಸಿಗೆ ಹಿಡಿಯುವಂತೆ ಮಾಡುತ್ತೆ. ಮಕ್ಕಳನ್ನು ಈ ಸೊಳಳೆಯಿಂದ ರಕ್ಷಿಸೋದು ಪಾಲಕರಿಗೆ ದೊಡ್ಡ ಚಾಲೆಂಜ್.
ಮಾರ್ಕೆಟ್ ನಲ್ಲಿ ನಾನಾ ಸೊಳ್ಳೆ ಸ್ಪ್ರೇ, ಕಾಯಿಲ್ ಇದೆ. ಆದ್ರೆ ಅದಕ್ಕೆಲ್ಲ ಕೆಮಿಕಲ್ ಬಳಸ್ತಾರೆ. ಹಾಗಾಗಿ ಪ್ರತಿ ದಿನ ಮನೆಯಲ್ಲಿ ಈ ಕಾಯಿಲ್ ಬಳಸೋದು ಕಷ್ಟ. ಹಿಂಗಿರುವಾಗ ನೀವು ಮನೆಯಲ್ಲೇ, ಅಡುಗೆ ಮನೆಯಲ್ಲಿರುವ ಪದಾರ್ಥ ಬಳಸಿಕೊಂಡೇ ಸೊಳ್ಳೆ ಓಡಿಸ್ಬಹುದು. ನಾವಿಂದು ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಸೊಳ್ಳೆ ಓಡಿಸುವ ವಿಧಾನವನ್ನು ಇಲ್ಲಿ ಹೇಳ್ತೇವೆ.
ಕಲ್ಲಂಗಡಿ ಹಣ್ಣಿನ ಬೀಜ ತೆಗೆಯೋದು ಕಷ್ಟ ಅನಿಸ್ತಿದ್ಯಾ? ಈ ಜಪಾನೀ
ನಿಮ್ಮ ಮನೆಯಲ್ಲೂ ಸೊಳ್ಳೆ ಜಾಸ್ತಿ ಇದ್ರೆ ಇದನ್ನು ಬಳಸ್ಬಹುದು. ಇದು 100 ಪರ್ಸೆಂಟ್ ಪರಿಣಾಮಕಾರಿ. ಇದ್ರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ನೀವು ಹೆಚ್ಚು ಖರ್ಚು ಮಾಡಿ ಇದನ್ನು ತಯಾರಿಸ್ಬೇಕಾಗಿಲ್ಲ. ಸ್ವಲ್ಪ ತಾಳ್ಮೆಯಿಂದ ಪ್ರತಿ ದಿನ ಬಳಸಿದ್ರೆ ಸಾಕು. ಸಂಜೆ ಸೊಳ್ಳೆ ಹೆಚ್ಚು ಬರುವ ಸ್ಥಳದಲ್ಲಿ ಇದನ್ನು ಬಳಸಬೇಕು.
ಸೊಳ್ಳೆ ಓಡಿಸುವ ಎಣ್ಣೆ ತಯಾರಿಸಲು ನಿಮಗೆ ಕಹಿಬೇವು, ಲವಂಗ, ಕರ್ಪೂರ, ಈರುಳ್ಳಿ, ಎಣ್ಣೆ, ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ದಾಲ್ಚಿನಿ ಎಲೆ ಅಗತ್ಯವಿರುತ್ತದೆ. ಕಹಿಬೇವಿನ ಎಲೆಯನ್ನು ತೆಗೆದು ಅದನ್ನು ಒಣಗಿಸಿ. ಅದು ಒಣಗಿದ ಮೇಲೆ ಒಂದು ಮಿಕ್ಸಿ ಜಾರಿಗೆ ದಾಲ್ಚಿನಿ ಎಲೆ, ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ಲವಂಗ, ಕಹಿ ಬೇವಿನ ಎಲೆಯನ್ನು ಹಾಕಿ ಪುಡಿ ಮಾಡ್ಕೊಳ್ಳಿ. ಮಿಕ್ಸಿಗೆ ಅಪ್ಪಿತಪ್ಪಿಯೂ ಕರ್ಪೂರ ಹಾಕ್ಬೇಡಿ.
ಬಾಣೆಲೆಗೆ ಯಾವುದಾದ್ರೂ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನೀವು ಅರ್ಧ ಕಪ್ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆ ಬಿಸಿ ಆಗ್ತಿದ್ದಂತೆ ಅದಕ್ಕೆ ಮಿಕ್ಸಿ ಮಾಡಿದ ಪುಡಿ ಹಾಕಿ, ಅದಕ್ಕೆ ಕರ್ಪೂರ ಹಾಕಿ ಬಿಸಿ ಮಾಡಿ. ಅದಕ್ಕೆ ನೀವು ಕರ್ಪೂರವನ್ನು ಹಾಕ್ಬೇಕು. ಕರ್ಪೂರ ಎಣ್ಣೆಯಲ್ಲಿ ಕರಗಿದ ಮೇಲೆ ಗ್ಯಾಸ್ ಬಂದ್ ಮಾಡಿ.
ನಂತ್ರ ಎಣ್ಣೆಯನ್ನು ಸೋಸಿ ನೀವು ಅದನ್ನು ಸೊಳ್ಳೆ ಲಿಕ್ವಿಡ್ ವೇಪರೈಸರ್ ಗೆ ಹಾಕಿ ಬಳಸಬೇಕು. ಇದು ಸೊಳ್ಳೆಯನ್ನು ಓಡಿಸಲು ಸಹಾಯಕಾರಿ. ಕೆಲವೇ ಕ್ಷಣಗಳಲ್ಲಿ ಮನೆ ಸೇರಿರುವ ಸೊಳ್ಳೆ ಮಾಯವಾಗುತ್ತದೆ.
ಸ್ಪ್ರೇ ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ
ನೀವು ಇದೇ ಪುಡಿಯನ್ನು ಈರುಳ್ಳಿ ದೀಪ ಹಚ್ಚಲು ಬಳಸಬಹುದು. ಒಂದು ಈರುಳ್ಳಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದು, ಅದ್ರ ಮಧ್ಯ ಭಾಗದಲ್ಲಿ ಜಾಗ ಮಾಡಿ, ಅದಕ್ಕೆ ಮೇಲೆ ಹೇಳಿದ ಪುಡಿಯನ್ನು ಹಾಕಿ. ಎಣ್ಣೆಯಲ್ಲಿ ಬಿಸಿ ಮಾಡುವ ಮೊದಲೇ ನೀವು ಪುಡಿಯನ್ನು ತೆಗೆದಿಟ್ಟುಕೊಂಡು ಅದನ್ನು ಈರುಳ್ಳಿ ಒಳಗೆ ಹಾಕಬೇಕು. ನಂತ್ರ ಅದಕ್ಕೆ ಎಣ್ಣೆ ಹಾಕಿ, ಬತ್ತಿ ಇಟ್ಟು ದೀಪ ಬೆಳಗಿಸಬೇಕು. ಈ ಎರಡೂ ವಿಧಾನಗಳಿಂದ ಸೊಳ್ಳೆ ಕಾಟ ತಪ್ಪುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಮಕ್ಕಳು ಇದ್ರ ಹೊಗೆಯನ್ನು ಆರಾಮವಾಗಿ ತೆಗೆದುಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.