ಐಸ್ ಕ್ರೀಂ ಯಾರಿಗೆ ಇಷ್ಟವಾಗಲ್ಲ ಹೇಳಿ? ಬರೀ ಮನುಷ್ಯರಿಗೆ ಮಾತ್ರವಲ್ಲ ಕೋತಿಗಳೂ ಅದನ್ನು ಎಂಜಾಯ್ ಮಾಡ್ತಿವೆ. ಚಪ್ಪರಿಸಿ ಐಸ್ ಕ್ಯಾಂಡಿ ಹೀರುವ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಕೊರೆಯುವ ಚಳಿ ಇರಲಿ, ಭೋರ್ಗರೆವ ಮಳೆ ಇರಲಿ ರುಚಿಯಾದ ಐಸ್ ಕ್ರೀಂ ಸಿಕ್ಕಿದ್ರೆ ಆ ಸಂದರ್ಭದಲ್ಲೂ ಜನರು ಐಸ್ ಕ್ರೀಂ ನಿರಾಕರಿಸೋದಿಲ್ಲ. ಮನೆಯಲ್ಲಿ ಹೊದ್ದು ಕುಳಿತುಕೊಂಡು ಐಸ್ ಕ್ರೀಂ ತಿನ್ನುವವರಿದ್ದಾರೆ. ಕೆಲ ಸಂದರ್ಭದಲ್ಲಿ ಐಸ್ ಕ್ರೀಂ ತಿಂದ್ರೆ ನೆಗಡಿ, ಜ್ವರ ಕಾಡುವುದಿದೆ. ಈ ಸತ್ಯ ಗೊತ್ತಿದ್ದರೂ ಜನರು ಐಸ್ ಕ್ರೀಂ ಚಪ್ಪರಿಸಿ ತಿನ್ನುತ್ತಾರೆ. ಬೇಸಿಗೆಯಲ್ಲಂತೂ ಅದಕ್ಕೆ ಬೇಡಿಕೆ ಹೆಚ್ಚು. ಇದೇ ಕಾರಣಕ್ಕೆ ಎಲ್ಲ ಋತುವಿನಲ್ಲೂ ಐಸ್ ಕ್ರೀಂ ಪಾರ್ಲರ್ ತೆಗೆದಿರುತ್ತೆ. ವೆರೈಟಿ ವೆರೈಟಿ ಐಸ್ ಕ್ರೀಂಗಳು ಮಾರುಕಟ್ಟೆಗೆ ಲಗ್ಗೆ ಇಡುತ್ವೆ.
ಬರೀ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ (Animal) ಗಳು ಕೂಡ ಐಸ್ ಕ್ರೀಂ (Ice Cream) ರುಚಿ ನೋಡಿದ್ರೆ ಬಿಡೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಾನಿಗಳ ವಿಡಿಯೋ ವೈರಲ್ ಆಗ್ತಿರುತ್ತವೆ. ಮಂಗನಿಂದ ಮಾನವ ಎನ್ನುವ ಮಾತಿದೆ. ನಮಗಿಷ್ಟ ಅಂದ್ಮೇಲೆ ಮಂಗಗಳು ಇಷ್ಟಪಡದೆ ಇರುತ್ವಾ? ಮಂಗ (Monkey) ಗಳಿಗೂ ಐಸ್ ಕ್ರೀಂ ಇಷ್ಟ ಎನ್ನುವುದು ವೈರಲ್ ವಿಡಿಯೋದಿಂದ ಬಹಿರಂಗವಾಗಿದೆ.
ಪ್ರವಾಸಿ ತಾಣಗಳಲ್ಲಿ ನೀವು ಮಂಗಗಳ ಗುಂಪನ್ನ ನೋಡ್ಬಹುದು. ನೀವು ಏನೇ ಕೈನಲ್ಲಿ ಹಿಡಿದಿದ್ರೂ ಅವು ಕಿತ್ಕೊಂಡು ಓಡ್ತವೆ. ಬಾಳೆ ಹಣ್ಣು, ಆಹಾರವಾದ್ರಂತೂ ಮಂಗನಿಂದ ಅದ್ರ ರಕ್ಷಣೆ ಕಷ್ಟವಾಗುತ್ತೆ. ಈ ವಿಡಿಯೋದಲ್ಲಿ ಮಂಗಗಳು ಐಸ್ ಕ್ರೀಂ ಕಸಿದುಕೊಂಡು ತಿನ್ನುತ್ತಿಲ್ಲ. ಮಂಗಗಳಿಗಾಗಿಯೇ ಐಸ್ ಕ್ರೀಂ ನೀಡಲಾಗಿದೆ. ಒಂದು ಬಾಕ್ಸ್ ನಲ್ಲಿ ಒಂದಿಷ್ಟು ಐಸ್ ಕ್ಯಾಂಡಿ ಇರೋದನ್ನು ನೀವು ನೋಡ್ಬಹುದು. ಬಿಳಿ ಮತ್ತು ಗುಲಾಬಿ ಬಣ್ಣದ ಐಸ್ ಕ್ಯಾಂಡಿಯನ್ನು ನೀವು ಕಾಣಬಹುದು. ಮಂಗಗಳ ಮುಂದೆ ಇದನ್ನು ಇಡುತ್ತಿದ್ದಂತೆ ಅವು ಅದನ್ನು ನಿರಾಕರಿಸೋದಿಲ್ಲ. ಒಂದೊಂದಾಗಿ ಬಂದು ಐಸ್ ಕ್ಯಾಂಡಿ ಹಿಡಿದು ತಿನ್ನುತ್ತಾ ಹೋಗುತ್ವೆ. ಕೆಲ ಮಂಗಗಳಿ ಜನರು ಐಸ್ ಕ್ರೀಂ ತಿನ್ನಿಸೋದನ್ನು ನೀವು ನೋಡ್ಬಹುದು. ಕೈನಲ್ಲಿ ಒಂದು ಐಸ್ ಕ್ಯಾಂಡಿ ಹಿಡಿದಿದ್ದು, ಇನ್ನೊಂದನ್ನು ತಿನ್ನುತ್ತಿರುವ ಮಂಗಗಳೂ ವಿಡಿಯೋದಲ್ಲಿವೆ.
undefined
ಉತ್ತರ ಭಾರತದಲ್ಲಿ ಭೀಕರ ಉಣುಗು ಕಾಟ, ಒಟ್ಟು 14 ಮಂದಿ ಸಾವು, 700 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ!
ಕೆಲ ಮಂಗಗಳು ಐಸ್ ಕ್ಯಾಂಡಿಯನ್ನು ಕಚ್ಚಿ ತಿಂದ್ರೆ ಮತ್ತೆ ಕೆಲ ಮಂಗಗಳು ಅದನ್ನು ನೆಕ್ಕಿ ತಿನ್ನುತ್ತಿವೆ. ಮಂಗಕ್ಕೂ ಐಸ್ ಕ್ರೀಂ ತಿನ್ನೋದು ಹೇಗೆ ಎಂಬುದು ಗೊತ್ತಿದೆ ಎಂದಾಯ್ತು.
ಈ ವಿಡಿಯೋವನ್ನು @AMAZlNGNATURE ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಮಂಗಗಳ ಪಾರ್ಟಿ ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. 1.4 ಮಿಲಿಯನ್ಸ್ ವೀವ್ಸ್ ಪಡೆದಿದೆ. 33 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 4 ಸಾವಿರಕ್ಕಿಂತ ಹೆಚ್ಚು ಬಾರಿ ವಿಡಿಯೋ ರೀಟ್ವಿಟ್ ಆಗಿದ್ದು, 300ಕ್ಕೂ ಹೆಚ್ಚು ಜನರು ಇದಕ್ಕೆ ಕಮೆಂಟ್ ಮಾಡಿದ್ದಾರೆ.
ಅನೇಕರು ತಮ್ಮ ಕಮೆಂಟ್ ಬಾಕ್ಸ್ ನಲ್ಲಿ ಮಂಗಗಳ ಕೆಲ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೋತಿಯ ಫೆವರೆಟ್ ಬಾಳೆ ಹಣ್ಣನ್ನು ಮಂಗಗಳಿಗೆ ನೀಡಿದ ಒಂದು ವಿಡಿಯೋವನ್ನು ನೀವು ಇಲ್ಲಿ ನೋಡಬಹುದು. ಬಾಳೆ ಹಣ್ಣಿನ ಬಾಕ್ಸ್ ಗೆ ಮಂಗಗಳು ಮುಗಿಬಿಳೋದು ನೋಡಿದ್ರೆ ಅಚ್ಚರಿಯಾಗುತ್ತೆ.
ಮಕ್ಕಳ ಪಾಲನೆ ಬಗ್ಗೆ ಅಭಿಷೇಕ್ ಬಚ್ಚನ್ ಕಿವಿ ಮಾತು, ಮಗಳು ಆರಾಧ್ಯ ನೋಡಿಕೊಳ್ಳೋದು ಯಾರು?
ಮಂಗ ಐಸ್ ಕ್ರೀಂ ತಿನ್ನುವ ವಿಧಾನವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅದು ಐಸ್ ಕ್ರೀಂ ವಾಸನೆ ತೆಗೆದುಕೊಂಡಿದ್ದು ಇಷ್ಟವಾಯ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅವರಿಗೆ ಸೆನ್ಸಿಟಿವಿಟಿ ಸಮಸ್ಯೆ ಇಲ್ವಾ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಅವರಿಗೆ ಫಿಜ್ಜಾ ನೀಡಿ ಎಂದು ಇನ್ನೊಬ್ಬರು ಸಲಹೆ ನೀಡಿದ್ರೆ ಜನರು ಕೂಡ ಐಸ್ ಕ್ರೀಂಗೆ ಇದೇ ರೀತಿ ಕ್ಯೂನಲ್ಲಿ ನಿಲ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.
Ice-cream party for monkeys pic.twitter.com/AedhdbAjOq
— Nature is Amazing ☘️ (@AMAZlNGNATURE)