ಉಪ್ಪು ಖಾರ ಹೆಚ್ಚು ಕಮ್ಮಿ ಹಾಕಿದಾಗ ಮಾತ್ರ ಅಡುಗೆ ರುಚಿ ಕೆಡುವುದಲ್ಲ. ಕೆಲವೊಂದನ್ನು ನಿಯಮವನ್ನು ತಪ್ಪಾಗಿ ಪಾಲಿಸುವುದರಿಂದಲೂ ಅಡುಗೆ ತನ್ನ ರುಚಿ ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಹೆಂಗಸರು ಮಾಡೋ ತಪ್ಪೇನು?
ಅಡುಗೆ ರುಚಿಯಾಗಿ ಬರಲು ನಾವು ಬಳಸುವ ಪದಾರ್ಥ ಅಥವಾ ರೆಸಿಪಿವೊಂದೇ ಕಾರಣವಲ್ಲ. ನಾವು ಪಾಲಿಸುವ ಕೆಲವು ಅಡುಗೆ ನಿಯಮಗಳೂ ಮುಖ್ಯ. ತಿಳಿಯದೇ ಕೆಲವು ಆಹಾರ ಪದಾರ್ಥಗಳನ್ನು ಹೇಗೆ ಹೇಗೋ ಸ್ಟೋರ್ ಮಾಡಿದರೂ, ಅಡುಗೆ ರುಚಿ ಕೆಡುತ್ತದೆ. ಆಹಾರ ಪದಾರ್ಥಗಳನ್ನು ಹೇಗೆ ಸ್ಟೋರ್ ಮಾಡಬೇಕು. ಇಲ್ಲಿವೆ ಟಿಪ್ಸ್...
ತುಂಬಾ ಬಿಸಿಯಿರುವ ಆಹಾರವನ್ನು ಫ್ರಿಡ್ಜ್‌ನಲ್ಲಿಡಬಾರದು.
ಅಡುಗೆ ಪಾತ್ರೆ ತುಂಬಾ ತರಕಾರಿ ತುಂಬಿರಬಾರದು. ಇದರಿಂದ ಕೈ ಆಡಲಿಕ್ಕೂ ಕಷ್ಟವಾಗಿ, ತರಕಾರಿ ಸರಿಯಾಗಿ ಬೇಯುವುದಿಲ್ಲ.
ನಾನ್ ಸ್ಟಿಕ್ ಪ್ಯಾನ್ ಸದಾ ಕಡಿಮೆ ಉರಿಯಲ್ಲಿಯೇ ಇಡಬೇಕು. ಇಲ್ಲವಾದರೆ ಅದರಲ್ಲಿ ಬಿಡುಗಡೆಯಾಗುವ ರಾಸಾಯನಿಕ ಅಂಶ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಚಿಕನ್, ಮಟನ್ ಆಥವಾ ಯಾವುದೇ ಮಾಂಸಹಾರಿ ಆಹಾರವನ್ನು ಉಪ್ಪು ಹಾಗೂ ಅರಿಶಿಣದಿಂದ ತೊಳೆಯಬೇಕು. ಇಲ್ಲವಾದರೆ ಅದರ ಮೇಲಿರುವ ಕಾಣದ ಕೆಟ್ಟ ಅಂಶಗಳು ಉಳಿದುಬಿಡುತ್ತದೆ.
ಬಾಣಲೆಗೆ ಎಣ್ಣೆ ಹಾಕಿದ ತಕ್ಷಣವೇ ಒಗ್ಗರಣೆ ಸಾಮಾನು ಹಾಕಬಾರದು. ಎಣ್ಣೆ ಕಾಯಲು ಬಿಡಬೇಕು. ಹೀಗೆ ಮಾಡಿದರೆ ಅಡುಗೆ ರುಚಿಸುವುದಿಲ್ಲ. ಎಣ್ಣೆ ಕಾದ ನಂತರ ಪದಾರ್ಥ ಹಾಕಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.