ದಪ್ಪಗಿರುವವರೆ ಚಿಂತಿಸಬೇಡಿ : ಇಲ್ಲಿದೆ ಶುಭ ಸುದ್ದಿಗಳು

Published : Oct 16, 2016, 04:00 PM ISTUpdated : Apr 11, 2018, 01:00 PM IST
ದಪ್ಪಗಿರುವವರೆ ಚಿಂತಿಸಬೇಡಿ : ಇಲ್ಲಿದೆ ಶುಭ ಸುದ್ದಿಗಳು

ಸಾರಾಂಶ

ತಾವು ಹೆಚ್ಚು ತಿಂದರೆ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ತಾವು ಇನ್ನಷ್ಟು ದಪ್ಪಗಾಗುತ್ತೇವೆ ಎನ್ನುವ ಆತಂಕವಿದೆ.

ಹೆಚ್ಚು ದಪ್ಪಗಿರುವವರು, ಬೊಜ್ಜಿರುವವರಿಗೆ ಆಹಾರದ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ತಾವು ಹೆಚ್ಚು ತಿಂದರೆ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ತಾವು ಇನ್ನಷ್ಟು ದಪ್ಪಗಾಗುತ್ತೇವೆ ಎನ್ನುವ ಆತಂಕವಿದೆ. ಆದರೆ ಕೆಳಗಿನ ತಪ್ಪು ಕಲ್ಪನೆಗಳ ಬಗ್ಗೆ ದಪ್ಪಗಿರುವವರು ಚಿಂತಿಸುವ ಅಗತ್ಯವಿಲ್ಲ.
1) ರಾತ್ರಿ 8 ಗಂಟೆಯ ನಂತರ ತಿನ್ನಬಾರದು : ನಾವು ಸೇವಿಸುವ ಆಹಾರ ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಒಂದೇ ರೀತಿಯಲ್ಲಿ ಜೀರ್ಣವಾಗಿ ಕ್ಯಾಲೊರಿಗಳನ್ನು ಬಳಸುತ್ತದೆ.
2) ಆಗಾಗ ಸ್ವಲ್ಪ ಆಹಾರ ಸೇವನೆ : ಜೀರ್ಣವಾಗುತ್ತದೆ ಎಂದು ಕಡಿಮೆ ಆಹಾರ ಸೇವಿಸುವುದು ನೆರವಾಗದು. ಕೆಲವು ಪದಾರ್ಥಗಳು ಬೇಗ ಜೀರ್ಣವಾಗುತ್ತವೆ. ಇನ್ನು ಕೆಲ ವೇಳೆ ತೆಗೆದುಕೊಳ್ಳುತ್ತೇವೆ.
3) ಕಾಫಿ ಕುಡಿದರೆ ತೂಕ ಕಡಿಮೆ : ಕಾಫಿಯಲ್ಲಿರುವ ಕೆಫಿನ್ ಹಸಿವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಎಂಬುದು ಸುಳ್ಳು. ತೂಕ ಇಳಿಯುವ ಬದಲು ವಿವಿಧ ಒತ್ತಡಗಳು ಹೆಚ್ಚುತ್ತವೆ.
4) ಹೆಚ್ಚು ಕ್ಯಾಲೋರಿ ಅಪಾಯ: ಕೊಬ್ಬಿನ ಪ್ರತಿ ಗ್ರಾಂ'ನಲ್ಲಿ 9 ಕ್ಯಾಲೋರಿಗಳು ಸಿಗುತ್ತವೆ. ಇದು ಅಪಾಯಕಾರಿಯಲ್ಲ ದೇಹಕ್ಕೆ ಶೇ.20-30ರಷ್ಟು ಕ್ಯಾಲೋರಿ ಕೊಬ್ಬಿನಿಂದಲೇ ಬರಬೇಕು. ಇಲ್ಲವಾದರೆ ಅಪಾಯ.
5) ಫಾಸ್ಟ್ ಫುಡ್'ನಲ್ಲಿ ಕೊಬ್ಬು ಕಡಿಮೆ: ಚೀಸ್ ಇರುವ ಬರ್ಗರ್, ಸ್ಯಾಂಡ್'ವಿಜ್ 1800ಕ್ಕೂ ಹೆಚ್ಚು ಕ್ಯಾಲೋರಿ ಹೊಂದಿರುತ್ತದೆ. ಇವು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲದಲ್ಲಿ ಪ್ರತಿದಿನ ಎಳ್ಳು ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?
ಬೆಂಗಳೂರಿನ ಹೆಸರಿಗೆ ಅಮೆರಿಕಾದಲ್ಲಿ 'ಕೀರ್ತಿ' ತಂದ ಅನೂಯಾ ಸ್ವಾಮಿ.. ಯಾರು ಈ 'ಪಂಕಜ'..?!