
ಜೀವನದಲ್ಲಿ ಏನು ಬೇಕು ಅಂತಾ ಕೇಳಿದ್ರೆ ಬಹುತೇಕ ಮಂದಿ ಹಣ, ಕೋಟ್ಯಾಂತರ ರೂಪಾಯಿ ಎನ್ನುತ್ತಾರೆ. ಹಣದ ಅವಶ್ಯಕತೆ ಈಗಿನ ದಿನಗಳಲ್ಲಿ ಹೆಚ್ಚಿದೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ಹಣ ಅಗತ್ಯ ಎನ್ನುವಂತಾಗಿದೆ. ಸಾಕಷ್ಟು ಹಣ ಸಂಪಾದನೆ ಮಾಡಲು, ಕೋಟ್ಯಾಧಿಪತಿ ಯಾಗಲು ಎಲ್ಲರೂ ಬಯಸ್ತಾರೆ. ಹಾಗೆ ಅದಕ್ಕೆ ತಕ್ಕಂತೆ ಕೆಲಸ ಕೂಡ ಮಾಡುತ್ತಾರೆ. ಆದ್ರೆ ಎಲ್ಲರೂ ಕೋಟ್ಯಾಧಿಪತಿಯಾಗಲು ಸಾಧ್ಯವಿಲ್ಲ. ಪ್ರಯತ್ನಿಸಿದ ಕೆಲವೇ ಕೆಲವು ಮಂದಿ ಮಾತ್ರ ಕೋಟ್ಯಾಂತರ ರೂಪಾಯಿ ಹಣ ಗಳಿಸ್ತಾರೆ. ಅವರಂತೆ ನಾವು ಪ್ರಯತ್ನಪಟ್ಟಿದ್ದೇವೆ, ಆದ್ರೆ ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ನೀವು ಹೇಳ್ಬಹುದು. ಕೋಟ್ಯಾಧಿಪತಿಯಾಗುವ ಕನಸು ಕಂಡು, ಅದಕ್ಕೆ ಸಾಕಷ್ಟು ಪರಿಶ್ರಮ ಪಟ್ಟರೆ ಮಾತ್ರ ಸಾಲದು, ಕೆಲವೊಂದು ಸ್ವಭಾವ ಹಾಗೂ ಹವ್ಯಾಸಗಳು ಕೂಡ ಮಹತ್ವ ಪಡೆಯುತ್ತವೆ. ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗ್ಬೇಕೆಂದ್ರೆ ಕೆಲವು ಸ್ವಭಾವ ಹಾಗೂ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇಂದು ಕೋಟ್ಯಾಧಿಪತಿಯಾಗಲು ಏನು ಬೇಕು ಎಂಬುದನ್ನು ಹೇಳ್ತೇವೆ.
ಕೋಟ್ಯಾಧಿಪತಿ ವ್ಯಕ್ತಿಯಲ್ಲಿರುತ್ತೆ ಈ ಅಂಶ : ಪ್ರಪಂಚದ ಬಹುತೇಕ ಕೋಟ್ಯಾಧಿಪತಿಯರಲ್ಲಿ ಕಂಡುಬರುವ ಇಂತಹ ಅಭ್ಯಾಸಗಳನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ನಾವೂ ಕೂಡ ಮಿಲಿಯನೇರ್ ಆಗ್ಬಹುದು.
1. ಸಮಯಕ್ಕೆ ಹೆಚ್ಚಿನ ಆದ್ಯತೆ : ಯಶಸ್ವಿ ಕೋಟ್ಯಾಧಿಪತಿ, ಸಮಯ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಪ್ರತಿ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಾರೆ ಮತ್ತು ಕೆಲಸವನ್ನು ಮುಂದೂಡುವ ತಪ್ಪನ್ನು ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದ್ರಿಂದ ಗುರಿಯನ್ನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತದೆ.
ಯೋಗದೊಂದಿಗೆ ಸಂಗೀತ: ದೇಹ, ಮನಸ್ಸನ್ನು ಹಗುರಗೊಳಿಸೋ ಕಸರತ್ತು!
2. ಶಿಸ್ತು : ಶಿಸ್ತನ್ನು ಯಶಸ್ಸಿನ ಕೀಲಿ ಎಂದು ಪರಿಗಣಿಸಲಾಗುತ್ತದೆ. ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಶಿಸ್ತು ಅತ್ಯಗತ್ಯ. ಶಿಸ್ತು ತನ್ನ ಮೇಲೆ ನಿಯಂತ್ರಣ ಹೊಂದಲು ನೆರವಾಗುತ್ತದೆ. ಒಬ್ಬ ಯಶಸ್ವಿ ಮಿಲಿಯನೇರ್ ತನ್ನ ಜೀವನದಲ್ಲಿ ಶಿಸ್ತನ್ನು ಪಾಲಿಸುತ್ತಾನೆ. ದೀರ್ಘಾವಧಿಯ ಹೂಡಿಕೆ ಮತ್ತು ವ್ಯವಹಾರ ಯಶಸ್ವಿಯಾಗಲು ಶಿಸ್ತು ಅಗತ್ಯವೆಂದು ಪರಿಗಣಿಸುತ್ತಾರೆ.
3. ಸ್ಪಷ್ಟ ಗುರಿ : ಸಾಧನೆಗೆ ಗುರಿ ಮುಖ್ಯ. ದಿನಕ್ಕೊಂದು ಗುರಿ ಬದಲಾಗ್ತಿದ್ದರೆ ಸಾಧನೆ ಸಾಧ್ಯವಿಲ್ಲ. ಕೋಟ್ಯಾಧಿಪತಿಗಳ ಗುರಿ ಯಾವಾಗ್ಲೂ ಸ್ಪಷ್ಟವಾಗಿರುತ್ತದೆ. ಗುರಿಯಿಲ್ಲದೆ ಕೆಲಸ ಮಾಡುವುದು ಕತ್ತಲೆಯಲ್ಲಿ ಬಾಣ ಬಿಟ್ಟಂತೆ. ಒಬ್ಬ ಯಶಸ್ವಿ ಮಿಲಿಯನೇರ್ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ.
4. ಹಣದಿಂದ ಹಣ ಮಾಡುವ ಕಲೆ : ಕೋಟ್ಯಾಧಿಪತಿಯಾದ ವ್ಯಕ್ತಿಗೆ ಹಣದಿಂದ ಹಣ ಮಾಡುವ ಕಲೆ ತಿಳಿದಿರುತ್ತದೆ. ಹಣವನ್ನು ಹೇಗೆ ಉಳಿಸಬೇಕು ಹಾಗೆ ಎಲ್ಲ ಹೂಡಿಕೆ ಮಾಡಬೇಕೆಂಬುದು ಗೊತ್ತಿರುತ್ತದೆ. ಅಪಾಯ ಬಂದಾಗ ಹೆದರುವುದಿಲ್ಲ.
5. ಅತೃಪ್ತಿ: ಕೋಟ್ಯಾಧಿಪತಿಗಳು ಯಶಸ್ಸಿನಿಂದ ತೃಪ್ತರಾಗುವುದಿಲ್ಲ. ಮತ್ತೆ ಹೊಸ ಗುರಿ ಹಾಕಿಕೊಳ್ತಾರೆ. ಸಾಮಾನ್ಯವಾಗಿ ಗುರಿ ತಲುಪಿದ ನಂತ್ರ ಸಾಮಾನ್ಯರು ತೃಪ್ತರಾಗ್ತಾರೆ. ಇಷ್ಟು ಸಾಕು ಎಂಬ ಭಾವನೆಗೆ ಬರ್ತಾರೆ. ಆದ್ರೆ ಕೋಟ್ಯಾಧಿಪತಿಗಳಿಗೆ ಈ ಸ್ವಭಾವ ಇರುವುದಿಲ್ಲ. ಇದೇ ಅವರ ಯಶಸ್ಸಿನ ಗುಟ್ಟು. ಇದರಿಂದಾಗಿ ಅವರು ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಮಾಡಲು ಸಾಧ್ಯವಾಗುತ್ತದೆ.
ಫ್ಲೈಟ್ ಟಿಕೆಟ್ ಬುಕ್ ಮಾಡುವಾಗ ಈ ಟ್ರಿಕ್ ಯೂಸ್ ಮಾಡಿ, ಚೀಪರ್ ಆಗುತ್ತೆ
6. ಸ್ವಯಂ ಪ್ರೇರಣೆ: ಯಶಸ್ವಿ ವ್ಯಕ್ತಿ ಮತ್ತು ವಿಫಲ ವ್ಯಕ್ತಿಯ ನಡುವೆ ಸಾಮಾನ್ಯ ವ್ಯತ್ಯಾಸವಿದೆ. ವಿಫಲ ವ್ಯಕ್ತಿಗೆ ಯಾವಾಗಲೂ ಪ್ರೇರಣೆ ಬೇಕು. ಆದರೆ ಯಶಸ್ವಿ ವ್ಯಕ್ತಿ ತನ್ನಿಂದ ಪ್ರೇರಿತನಾಗಿರುತ್ತಾನೆ. ಅವರ ಗುರಿ ಸ್ಪಷ್ಟವಾಗಿರುವುದರಿಂದ ಅವರು ತಮ್ಮನ್ನು ತಾವು ಪ್ರೇರೇಪಿಸಿಕೊಳ್ಳಲು ಸಮರ್ಥರಾಗಿರುತ್ತಾರೆ.
7. ಕಲಿಕೆಗೆ ಸದಾ ಸಿದ್ಧ: ಯಶಸ್ವಿ ಮಿಲಿಯನೇರ್ ಯಾವಾಗಲೂ ಕಲಿಯಲು ಸಿದ್ಧನಾಗಿರುತ್ತಾನೆ. ಯಾರೂ ಸಂಪೂರ್ಣವಾಗಿ ಪರಿಪೂರ್ಣರಾಗಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿರುತ್ತದೆ. ಹಾಗಾಗಿ ಪ್ರತಿ ದಿನ ಹೊಸ ಕಲಿಕೆಗೆ ಪ್ರಾಮುಖ್ಯತೆ ನೀಡ್ತಾರೆ. ನಿರಂತರ ಅಭ್ಯಾಸದಲ್ಲಿ ತೊಡಗುತ್ತಾರೆ. ಹೊಸ ಹೊಸ ಪುಸ್ತಕಗಳನ್ನು ಓದುವ ಹವ್ಯಾಸವನ್ನೂ ಇವರು ಹೊಂದಿರುತ್ತಾರೆ.
8. ಪ್ರತಿ ದಿನ ವ್ಯಾಯಾಮ (Exercise): ಯಶಸ್ಸಿಗೆ ಮನಸ್ಸಿನ ಶಾಂತಿ ಬಹಳ ಮುಖ್ಯ. ನೆಮ್ಮದಿಯಿದ್ದರೆ ಗುರಿ ಸಾಧನೆ ಸುಲಭ. ಹಾಗಾಗಿ ಅವರು ಪ್ರತಿ ದಿನ ವ್ಯಾಯಾಮಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡ್ತಾರೆ. ಯಶಸ್ವಿ ಜನರು ತಾಳ್ಮೆಯಿಂದಿರುತ್ತಾರೆ.
9. ತಾಳ್ಮೆ : ಯಶಸ್ವಿ ಕೋಟ್ಯಾಧಿಪತಿಗಳು ಸಮಸ್ಯೆಗಳು ಬಂದಾಗ ಚಿಂತಿಸುವುದಿಲ್ಲ. ತಾಳ್ಮೆಯಿಂದ ಕೆಲಸ ಮಾಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.