ತೆಲಂಗಾಣದಲ್ಲಿ ಟೈಫಾಯ್ಡ್‌ ಹೆಚ್ಚಳಕ್ಕೆ ಕಾರಣವಾಗ್ತಿದೆ ಪಾನಿಪುರಿ !

By Suvarna News  |  First Published Jul 13, 2022, 2:30 PM IST

ಸಿಹಿ-ಹುಳಿ ರುಚಿಯ ಪಾನಿಪುರಿ ಅಂದರೆ ಎಲ್ಲರಿಗೂ ಇಷ್ಟ. ಪಾನಿಪುರಿ ದೇಶದ ಅತ್ಯಂತ ನೆಚ್ಚಿನ ಬೀದಿ ತಿಂಡಿಗಳಲ್ಲಿ ಒಂದಾಗಿದೆ. ಆದ್ರೆ ತೆಲಂಗಾಣದಲ್ಲಿ ಪಾನಿಪುರಿ ಸೇವನೆಯಿಂದಲೇ ಟೈಫಾಯ್ಡ್ ಪ್ರಕರಣಗಳು ಹೆಚ್ಚಾಗಿದೆಯಂತೆ.


ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಟೈಫಾಯ್ಡ್‌ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ಪಾನಿಪುರಿ ಕಾರಣ ಎಂದು ತೆಲಂಗಾಣದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಮಾತನಾಡಿ, ಟೈಫಾಯ್ಡ್‌ನ್ನು ಪಾನಿಪುರಿ ಕಾಯಿಲೆ ಎಂದು ಕರೆಯಬಹುದು. ಯಾಕೆಂದ್ರೆ ಪಾನಿಪುರಿ ಸೇವನೆಯಿಂದ ಜನರು ಹೆಚ್ಚು ಟೈಫಾಯ್ಡ್‌ ಕಾಯಿಲೆಗೆ ತುತ್ತಾಗಿರೋದು ತಿಳಿದುಬಂದಿದೆ. ಹೀಗಾಗಿ ಜನರು ಕಾಲೋಚಿತ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಳೆಗಾಲದಲ್ಲಿ ಬೀದಿ ಬದಿ ಆಹಾರವನ್ನು ತಿನ್ನುವುದನ್ನು ತಪ್ಪಿಸಬೇಕು ಎಂದು ಸೂಚಿಸಿದ್ದಾರೆ.  

ಪಾನಿಪುರಿ  ಪುಟ್ಟ ಮಕ್ಕಳಿಂದ (Children) ಹಿಡಿದು ಹಿರಿಯರ ವರೆಗೆ ಎಲ್ಲರ ನೆಚ್ಚಿನ ಆಹಾರವಾಗಿದೆ. ಹೊತ್ತಿನ ಪರಿವೆಯಿಲ್ಲದೆ ಜನರು ಹೋಗಿ ಇದನ್ನು ಸೇವಿಸುತ್ತಾರೆ. ಆದರೆ ನಿಮಗೆ ಪಾನಿ ಪುರಿ 10ರಿಂದ 15 ರೂ.ಗೆ ಸಿಗಬಹುದು ಆದರೆ ನಾಳೆ 5,000-10,000 ರೂ. ಖರ್ಚು ಮಾಡಬೇಕಾಗಿ ಬರಬಹುದು ಎಂದು ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ತಿಳಿಸಿದರು. ಮಾರಾಟಗಾರರು ನೈರ್ಮಲ್ಯದ ಬಗ್ಗೆಯೂ ವಿಶೇಷ ಗಮನ ಹರಿಸಬೇಕು ಮತ್ತು ಸುರಕ್ಷಿತ ಕುಡಿಯುವ ನೀರಿನ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Tap to resize

Latest Videos

ಮಲೇರಿಯಾ ಜ್ವರ ಬಂದಾಗ ಎಂಥಾ ಆಹಾರ ಸೇವಿಸುವುದು ಸೂಕ್ತ ?

ಪಾನಿಪುರಿಯಿಂದ ಹೆಚ್ಚಿದ ಟೈಫಾಯ್ಡ್ ಪ್ರಕರಣ
ತೆಲಂಗಾಣದಲ್ಲಿ ಈ ವರ್ಷ ಹೆಚ್ಚು ಟೈಫಾಯ್ಡ್‌  (Typhoid) ಪ್ರಕರಣಗಳು ವರದಿಯಾಗುತ್ತಿವೆ ಎಂದು ರಾವ್ ತಿಳಿಸಿದರು. ಮೇ ತಿಂಗಳಲ್ಲಿ, 2,700 ಪ್ರಕರಣಗಳು ವರದಿಯಾಗಿದ್ದು, ಜೂನ್‌ನಲ್ಲಿ ಈ ಸಂಖ್ಯೆ 2,752ರಷ್ಟಿದೆ. ಕಲುಷಿತ ಆಹಾರ (Food), ನೀರು ಮತ್ತು ಸೊಳ್ಳೆಗಳು ಮಲೇರಿಯಾ, ತೀವ್ರವಾದ ಅತಿಸಾರ ರೋಗಗಳು ಮತ್ತು ವೈರಲ್ ಜ್ವರಗಳು ಸೇರಿದಂತೆ ಋತುಮಾನದ ಕಾಯಿಲೆಗಳಿಗೆ ಮುಖ್ಯ ಕಾರಣವೆಂದು ಗುರುತಿಸಲಾಗಿದೆ, ಇದು ಕಳೆದ ಕೆಲವು ವಾರಗಳಲ್ಲಿ ವರದಿಯಾಗಿರುವುದಾಗಿ ತಿಳಿದುಬಂದಿದೆ. ಈ ತಿಂಗಳೊಂದರಲ್ಲೇ ರಾಜ್ಯಾದ್ಯಂತ 6,000 ಅತಿಸಾರ ಪ್ರಕರಣಗಳು ದಾಖಲಾಗಿವೆ. 

ಡೆಂಗ್ಯೂ ಪ್ರಕರಣ ಹೆಚ್ಚಳ
ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,184 ಡೆಂಗ್ಯೂ ಪ್ರಕರಣಗಳು (Dengue cases) ವರದಿಯಾಗಿವೆ. ಹೈದರಾಬಾದ್ ಒಂದರಲ್ಲೇ 516 ಪ್ರಕರಣಗಳು ದಾಖಲಾಗಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಜೂನ್‌ನಲ್ಲಿ 563 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ, ಈ ತಿಂಗಳ ಮೊದಲ 10 ದಿನಗಳಲ್ಲಿ 222 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲೂ ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿವೆ. ಲಾರ್ವಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸೊಳ್ಳೆಗಳ ಹಾವಳಿಯನ್ನು ನಿರ್ಮೂಲನೆ ಮಾಡಲು ಪ್ರತಿ ಶುಕ್ರವಾರವನ್ನು ಒಣ ದಿನವನ್ನಾಗಿ ಆಚರಿಸುವಂತೆ ಅವರು ಜನರನ್ನು ಒತ್ತಾಯಿಸಿದರು.

ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ

ಕೋವಿಡ್‌ ಬಗ್ಗೆ ಎಚ್ಚರಿಕೆಯಿರಲಿ
ಕಳೆದ ಆರು ವಾರಗಳಲ್ಲಿ ಕೋವಿಡ್ (Covid) ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಜನರು ಭಯಪಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ಸ್ಥಳೀಯ ಹಂತವನ್ನು ಪ್ರವೇಶಿಸಿದೆ ಮತ್ತು ಸಾಮಾನ್ಯ ಶೀತ ಮತ್ತು ಜ್ವರದ ಲಕ್ಷಣಗಳು ಕಂಡುಬರುತ್ತವೆ ಹೀಗಾಗಿ ಜನರು ಹೆಚ್ಚು ತಾಜಾ ಆಹಾರ ಹಾಗೂ ಕುಡಿಯುವ ನೀರನ್ನು ಕುದಿಸಿ ಕುಡಿಯುವಂತೆ ಸಲಹೆ ನೀಡಲಾಗಿದೆ. ಯಾರಿಗಾದರೂ ಕೋವಿಡ್ ತರಹದ ಲಕ್ಷಣಗಳು ಕಂಡುಬಂದರೆ, ಅವರು ಐದು ದಿನಗಳ ಕಾಲ ಸ್ವತಃ ಕ್ವಾರಂಟೈನ್ ಮಾಡಬೇಕು ಎಂದು ಅವರು ಹೇಳಿದರು.

ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ ಕೋವಿಡ್ ಪರೀಕ್ಷೆಯ ಅಗತ್ಯವಿಲ್ಲ. ಉಸಿರಾಟದ ತೊಂದರೆ ಇರುವ ಕೋವಿಡ್ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕರು ತಿಳಿಸಿದ್ದಾರೆ. ಅನಗತ್ಯವಾಗಿ ಪ್ಲೇಟ್ಲೆಟ್ ವರ್ಗಾವಣೆ ಮಾಡದಂತೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.

click me!