ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದೊಂದಿಗೆ ಹಿಡಿದು ಅನೇಕ ರೀತಿಯಲ್ಲಿ, ಅನೇಕ ಅಡುಗೆಗೆ ಬೆಲ್ಲವನ್ನು ಬಳಸಲಾಗುತ್ತದೆ. ಅತ್ಯಧಿಕ ಕಬ್ಬಣಾಂಶ ಇರೋ ಇದನ್ನು ಮತ್ತೇಕೆ ಬಳಸಬೇಕು?
ಕಬ್ಬಿಣಾಂಶ ಹೆಚ್ಚಿರುವ ರುಚಿಕರವಾದ, ಸಿಹಿ ತಿಂಡಿಗೆ ಬಳಸುವ ಬೆಲ್ಲ ಆರೋಗ್ಯಕಾರಿ. ಸಕ್ಕರೆ ಬದಲಾಗಿ ಆಹಾರದಲ್ಲಿ ಇದನ್ನು ಹೆಚ್ಚು ಬಳಸಿದರೆ, ಆರೋಗ್ಯಕ್ಕೆ ಒಳಿತು. ಆದರೆ ಇದರಿಂದ ಸೌಂದರ್ಯವೂ ಹೆಚ್ಚುತ್ತೆ ಅನ್ನೋದು ಗೊತ್ತಾ?
ಪಿಂಪಲ್ ನಿವಾರಣೆ : ಪ್ರತಿದಿನ ಒಂದು ತುಂಡು ಬೆಲ್ಲ ತಪ್ಪದೇ ತಿನ್ನಿ. ಇದರಿಂದ ಮೊಡವೆ ನಿವಾರಣೆಯಾಗುತ್ತದೆ. ಕಲೆ ನಿವಾರಣೆಯಾಗಿ ಸ್ಕಿನ್ ಹೊಳೆಯುತ್ತದೆ.
ರಿಂಕಲ್ ನಿವಾರಣೆ : ಬೆಲ್ಲದಲ್ಲಿರುವ ಕೆಲವು ಅಂಶಗಳು ವಯಸ್ಸಾಗುವಿಕೆಯ ಲಕ್ಷಣವನ್ನು ನಿವಾರಿಸುತ್ತದೆ. ಜೊತೆಗೆ ಮುಖದಲ್ಲಿ ಸುಕ್ಕು ಉಂಟಾಗುವುದನ್ನು ತಡೆಯುತ್ತದೆ.
ಸಿಲ್ಕಿ ಕೂದಲಿಗೂ ಮದ್ದು: ಮೃದುವಾದ ಸುಂದರ ಕೂದಲು ನಿಮ್ಮದಾಗಲೂ ಬೆಲ್ಲವನ್ನು ಪುಡಿ ಮಾಡಿ ಬೌಲ್‌ಗೆ ಹಾಕಿ ಅದಕ್ಕೆ ಮುಲ್ತಾನಿ ಮಿಟ್ಟಿ, ಮತ್ತು ನೀರು ಬೆರೆಸಿ ಕೂದಲಿಗೆ ಹಚ್ಚಿ. ಹತ್ತು ನಿಮಿಷದಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
ತ್ವಚೆ ಸಾಫ್ಟ್ ಆಗುತ್ತದೆ: ಬೆಲ್ಲದಲ್ಲಿ ಗ್ಲಿಕೊಲಿಕ್ ಆ್ಯಸಿಡ್ ಇದೆ. ಇದು ಸ್ಕಿನ್ ಸಾಫ್ಟ್ ಮಾಡುತ್ತದೆ. ಅದಕ್ಕಾಗಿ ಎರಡು ಚಮಚ ಜೇನು, ನಿಂಬೆ ರಸ ಮತ್ತು ಬೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಸ್ಕಿನ್ ಗೆ ಹಚ್ಚಿ ಇದರಿಂದ ಸ್ಕಿನ್ ಮೃದುವಾಗುತ್ತದೆ.