ಪಿರಿಯಡ್ಸ್ ವೇಳೆ ಕಾಡೋ ಸ್ತನ ನೋವಿಗೆ ಚಿಂತೆ ಬೇಡ...

By Web DeskFirst Published Jan 7, 2019, 3:49 PM IST
Highlights

ಪಿರಿಯಡ್ಸ್ ಬಗ್ಗೆ ಹೆಮ್ಮೆ ಪಡಬೇಕಾದ ಹೆಣ್ಣು ಕೆಲವೊಮ್ಮೆ ನೋವು ಅನುಭವಿಸುತ್ತಾಳೆ. ಆದರೆ, ಅದೊಂದು ಮಿತಯಲ್ಲಿದ್ದರೆ ಓಕೆ. ವಿಪರೀತ ನೋವು ಕಾಡಿದರೆ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಪಿರಿಯಡ್ಸ್ ಎಂದ ಕೂಡಲೇ ಅದೆಲ್ಲಾ ಸಾಮಾನ್ಯ ತಾನೇ ಎಲ್ಲರಿಗೂ ಒಂದೇ ರೀತಿ ಆಗೋಗಿಲ್ಲ. ಕೆಲವೊಂದು ಸೂಕ್ಷ್ಮ ಅಂಶಗಳ ಬಗ್ಗೆ ಎಲ್ಲರೂ ಅರಿತು ಕೊಂಡಿರುವುದು ಮುಖ್ಯ.

  • ಯಾರು ಹೆಚ್ಚು ಹೆಚ್ಚು ವ್ಯಾಯಾಮ ಅಥವಾ ದೈಹಿಕ ಶ್ರಮ ಹಾಕುತ್ತಾರೋ ಅವರ ಋತುಸ್ರಾವ ಬೇಗ ನಿಲ್ಲುವ ಸಾಧ್ಯತೆ ಇರುತ್ತದೆ. ಮಹಿಳಾ ಕ್ರೀಡಾಪಟುಗಳು ಹಾಗೂ ಕೆಲವು ಡ್ಯಾನ್ಸರ್‌‌ಗಳು ಹೆಚ್ಚೆಚ್ಚು ಕಠಿಣ ವ್ಯಾಯಾಮ ಮಾಡುವುದರಿಂದ ಋತುಸ್ರಾವ ಬೇಗ ನಿಲ್ಲಬಹುದು.
  • ಪಿರಿಯಡ್ಸ್ ವೇಳೆ ಬಹಳಷ್ಟು ಮಹಿಳೆಯರಿಗೆ ಸ್ತನಗಳ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಾಗುವುದರಿಂದ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ, ಅತೀವ ನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
  • ಆಹಾರ ಸೇವಿಸದ ಮಹಿಳೆಯರೂ ಋತುಸ್ರಾವದ ಸಮಸ್ಯೆ ಎದುರಿಸುತ್ತಾರೆ. ಜೊತೆಗೆ ಹೊಟ್ಟೆ ನೋವೂ ಕಾಮನ್.
  • ಯಾವುದೇ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆ ಇದ್ದರೆ, ಪಿರಿಯಡ್ಸ್‌ ವೇಳೆ ಹೆಚ್ಚು ಸೊಂಟನೋವು ಕಾಣಿಸಿಕೊಳ್ಳುತ್ತದೆ.
  • ಥೈರಾಯ್ಡ್‌ ಸಮಸ್ಯೆ, ಅತಿಯಾದ ಬೊಜ್ಜು, ಗರ್ಭನಿರೋಧಕ ಮಾತ್ರೆಗಳ ಸೇವನೆ, ಹಾರ್ಮೋನ್‌ ಅಸಮತೋಲನ ಹಾಗೂ ಮತ್ತಿತರ ದೈಹಿಕ ಸಮಸ್ಯೆಗಳಿಂದಲೂ ಋತುಚಕ್ರದಲ್ಲಿ ಏರುಪೇರಾಗುತ್ತದೆ.
click me!