ಮಾಡರ್ನ್‌ ದೇವದಾಸನ ವಿಫಲ ಪ್ರೇಮ ಪ್ರಸಂಗ!

By Web Desk  |  First Published Aug 8, 2019, 11:53 AM IST

ಕಾಲೇಜು ಲೈಫೇ ಒಂಥರಾ ಮಜಾ. ಕ್ಯಾಂಪಸ್‌ ಗೆಳೆಯರ ಬಳಗ ಒಂದೆಡೆಯಾದರೆ ಪ್ರಣಯ ಪಕ್ಷಿಗಳು ಆ ಕಟ್ಟೆಯಿಂದ ಈ ಕಟ್ಟೆಗೆ ಹೆಜ್ಜೆಹಾಕುತ್ತಾ ಮುನಿಸಿಕೊಳ್ಳುತ್ತಾ ಸ್ವಲ್ಪ ಕೀಟಲೆ ಮಾಡೋದನ್ನ ನೋಡೋದೆ ಖುಷಿ. 


ಗೆಳೆಯ ಗೆಳತಿಯರೆಂದರೆ ಸುಮ್ನೆನಾ, ಪ್ರೀತಿ ಹಕ್ಕಿಗಳಿಗಿಂತ ಒಂದು ಹೆಜ್ಜೆ ಮೇಲು, ನಮ್ದೇ ಕಾಲೇಜು, ನಮ್ದೇ ರೋಡ್‌ ಅನ್ನೋ ಹಾಗೆ ಯಾರನ್ನೂ ಲೆಕ್ಕಿಸದೆ ಹೋಗೋ ಖುಷಿ . ಅಚಾನಕ್‌ ಆಗಿ ಎದುರುಗಡೆ ಸಿಕ್ಕ ಅಧ್ಯಾಪಕರಲ್ಲಿ ಒಂದು ಸಣ್ಣ ಮುಗುಳ್ನಕ್ಕು ನಮ್ಮ ಸರದಿ ಮತ್ತೇ ಶುರುವಾಗುತ್ತಿತ್ತು. ಕಾಲೇಜಿನ ಕೊನೆಯ ಮೂರು ತಿಂಗಳಲ್ಲಿ ನಾನೊಂದು ಅಚ್ಚರಿ ಕಂಡೆ. ಪ್ರೀತಿ ಪ್ರೇಮ ಕಾಲೇಜು ದಿನಗಳಲ್ಲಿ ಮಾಮೂಲಿ ಒಂದು ವಾರ ಒಂದು ಜೊತೆಯಾದರೆ ಇನ್ನೊಂದು ಬಾರಿ ನೋಡುವಾಗ ಆ ಜೋಡಿ ಬೇರೆಯಾಗಿ ಇನ್ನೊಂದು ಜೋಡಿ ಜೊತೆ ಹೋಗೋದನ್ನ ಕಾಣುವುದು ಸಹಜ. ಆದರೆ ನಾ ಹೇಳಬೇಕೆನಿಸಿದ್ದು ಇದಲ್ಲ.

ಒಂದು ಹುಡುಗಿ ದಿನಾ 9.40 ಸಮಯಕ್ಕೆ ಕ್ಯಾಂಪಸ್‌ ತಲುಪಿ ಕ್ಯಾಂಟೀನ್‌ ಕಡೆಗೆ ಬರುತ್ತಿರುತ್ತಾಳೆ ಅದು ಅವಳ ದಿನಚರಿ. ಅಲ್ಲಿ ಒಂದು ವ್ಯಕ್ತಿ ಆಕೆಗೆ ಗೊತ್ತಿಲ್ಲದಂತೆ ಆಕೆಯನ್ನು ಗಮನಿಸುತ್ತಿರುತ್ತಾನೆ. ಆಕೆಯಲ್ಲಿ ಮಾತನಾಡಲು ಬಯಸುತ್ತಾನೆ. ಆದರೆ ಇದ್ಯಾವುದು ಆಕೆಗೆ ತಿಳಿದಿಲ್ಲ. ದಿನಗಳು ಕಳೆದು ತಿಂಗಳುಗಳುರುಳಿದವು. ಇದೆ ಪರಿ ಮುಂದುವರಿದು ಆಕೆಗೆ ಆತ ತನ್ನನ್ನೇ ನೋಡುತ್ತಿರುವುದೆಂದು ಹೇಗೋ ತಿಳಿದು ಬಿಡುತ್ತದೆ. ಆದರೆ ಆತ ಯಾರು, ಯಾವ ವಿಭಾಗವೆಂದು ತಿಳಿದಿಲ್ಲ. ಆದರೆ ಆಕೆ ಸ್ವಲ್ಪ ಜಾಣೆಯೋ ಏನೋ. ಆತ ಯಾರು, ಯಾವ ವಿಭಾಗವೆಂದು ತಿಳಿದುಕೊಂಡು ಸುಮ್ಮನಿರುತ್ತಾಳೆ. ಒಂದು ದಿನ ಬೆಳಗ್ಗೆ ಅದೇ ಕ್ಯಾಂಟೀನ್‌ಗೆ ಆಕೆ ಬಂದಿರುತ್ತಾಳೆ. ಆತನು ಬಂದಿದ್ದು ಅವಳೊಡನೆ ಮುಗುಳ್ನಕ್ಕಾಗ ಆಕೆಯ ಮುಖದಲ್ಲಿ ಕಿರು ನಗೆ ಮೂಡಿತು ಅದೇ ಮೊದಲ ಬಾರಿಗೆ ಆ ನಗು ನಾ ಕಂಡಿದ್ದು ಅವರಿಬ್ಬರ ಮಧ್ಯೆ.

Latest Videos

undefined

ಒಂದಿನ ಅಋೂನಿಗೆ ಆಕೆ ದ್ವಿತೀಯ ವರ್ಷದ ವಿದ್ಯಾರ್ಥಿನಿ ಎಂದು ಗೊತ್ತಾಯಿತು. ಇನ್ನು ತಡಮಾಡದೇ ಆಕೆಯ ಬಳಿ ಮಾತನಾಡಬೇಕೆಂದು ಯೋಚಿಸಿ ಅವಳಿಗಾಗಿ ಕಾಯುತ್ತಿರುತ್ತಾನೆ.ಪರಿಕ್ಷೆ ಮುಗಿಸಿ ಹೊರ ಬಂದ ಹುಡುಗಿ ಬಸ್ಸಿಗಾಗಿ ಹೋಗುತ್ತಿರುವಾಗ ಆತ ಮತ್ತು ಆತನ ಸ್ನೇಹಿತ ಅವಳ ಮುಂದೆಯೇ ಪಾಸಾಗಿ ಆಕೆ ನಿಲ್ಲಬೇಕಿದ್ದ ಬಸ್‌ಸ್ಟಾಂಡ್‌ ಬಳಿ ನಿಲ್ಲುತ್ತಾರೆ. ಏನೋ ಯಡವಟ್ಟಾಗಿದೆ ಎಂದು ಮನದಲ್ಲಿಯೇ ಭಾವಿಸಿದ ಹುಡುಗಿ ತನ್ನ ಪಾಡಿಗೆ ಬಸ್ಸಿಗಾಗಿ ಕಾಯುತ್ತಿದ್ದಳು. ಹಾಗೋ ಹೀಗೋ ಮನಸು ಮಾಡಿ ಆಕೆಯ ಬಳಿ ಬಂದು ಆತ ‘ಮೇಡಮ್‌ ನಿಮ್ಮ ನೋಟ್ಸ್‌ ಬೇಕಿತ್ತು ಸ್ವಲ್ಪ ಕೊಡ್ತಿರಾ’ ಅಂದೊಡನೆ ಆಕೆಗೆ ಎಲ್ಲಿಲ್ಲದ ನಗು. ಕಾರಣ ಇಷ್ಟೇ, ಆತ ಒಂದು ವಿಭಾಗದ ಅಧ್ಯಾಪಕನಾಗಿದ್ದ. 2 ತಿಂಗಳಿನಿಂದ ಮಾತಾಡೋಕೆ ತುಂಬಾ ಟ್ರೈ ಮಾಡಿದೀನಿ ಅಂದೊಡನೆ ಆಕೆಯ ಬಸ್ಸು ಬಂತು, ನಾಳೆ ಬರ್ತೀಯ ಅಂತ ಕೇಳ್ದಾಗ ಹು ಅಂದು ಬಸ್ಸು ಹತ್ತಿ ಹೊರಟು ಬಿಟ್ಟಳು.

ಆ ಲೆಕ್ಚರರ್‌ ಆಕೆಯನ್ನು ಹಿಂಬಾಲಿಸಲು ಕಾರಣ ಅವರ ಮಾಜಿ ಪ್ರಿಯತಮೆಯಂತೆ ಆ ಹುಡುಗಿಯು ಇದ್ದುದು. ಅವರು ಪ್ರೀತಿಸಿದ್ದ ಹುಡುಗಿ ಬೇರೊಬ್ಬನನ್ನು ಮದುವೆಯಾಗಬೆಕಾಯಿತು. ಪ್ರೀತಿ ಕಳೆದುಕೊಂಡ ಸಮಯದಲ್ಲಿ ಅವರ ಗೆಳತಿಯ ನಗು, ಕಣ್ಣುಗಳು ಈ ಹುಡುಗಿಯನ್ನು ಹೋಲುವಂತಿತ್ತು. ಹಾಗಾಗಿ ಪ್ರೀತಿ ಚಿಗುರಿತ್ತು. ಆದರೆ ಕಾಲ ಮಿಂಚಿಹೋಗಿತ್ತು. ಅವನು ಅಂದುಕೊಂಡ ಪ್ರೀತಿ ಸಿಗಲಿಲ್ಲ. ಅದೇ ಅವರ ಕೊನೆಯ ಭೇಟಿ ಆಗಿತ್ತು. ಅವನ ಒದ್ದಾಟ ಹಾಗೇ ಉಳಿದುಹೋಯಿತು.

--  ವಿಜಿತ ಬಂಟ್ವಾಳ, ಪತ್ರಿಕೋದ್ಯಮ ವಿಭಾಗ

     ಮಂಗಳೂರು ವಿವಿ

 

click me!