ಜೀವನದಲ್ಲಿ ಮೊದಲ ಪ್ರೀತಿಗೆ ಯಾವಾಗಲೂ ವಿಶೇಷ ಸ್ಥಾನವಿರುತ್ತದೆ. ಜೀವನದಲ್ಲಿ ಆ ನಂತರ ಅದೆಷ್ಟೇ ಬಾರಿ ಪ್ರೀತಿಯಾದರೂ ಫಸ್ಟ್ ಲವ್‌ನ ಥ್ರಿಲ್ ಇರುವುದಿಲ್ಲ. ಅದು ಅಕ್ಷರಶಃ ನಿಜ ಎಂಬುದನ್ನು ಇಲ್ಲೊಬ್ಬ ವ್ಯಕ್ತಿ ಸಾಬೀತುಪಡಿಸಿದ್ದಾನೆ. ಆದರೆ ಆತನ ಹುಚ್ಚು ಪ್ರೀತಿ ಹೆಂಡ್ತಿಯನ್ನು ಕಂಗೆಡಿಸುತ್ತಿದೆ.
ಎಲ್ಲರಿಗೂ ಮೊದಲ ಮಾತು, ಮೊದಲ ಭೇಟಿ, ಮೊದಲ ಪ್ರೀತಿ ಸದಾ ನೆನಪಿನಲ್ಲಿರುತ್ತದೆ. ಇದನ್ನು ಮರೆಯೋದು ಅಷ್ಟು ಸುಲಭವಲ್ಲ.ಮೊದಲ ಹೆಜ್ಜೆ, ಮೊದಲ ಮಳೆಯಂತೆಯೇ ಮೊದಲ ಪ್ರೀತಿ (Love)ಗೆ ಎಲ್ಲರ ಜೀವನದಲ್ಲೂ ಮಹತ್ತರ ಸ್ಥಾನವಿದೆ. ಮೊತ್ತ ಮೊದಲ ಬಾರಿಗೆ ಇಷ್ಟಪಟ್ಟವರು ಜೀವನಪೂರ್ತಿ ಜೊತೆಗಿರಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಆದರೆ ಎಲ್ಲರ ಪ್ರೀತಿ ಸಕ್ಸಸ್ ಆಗುವುದಿಲ್ಲ. ಎಷ್ಟೋ ಬಾರಿ ಮೊದಲ ಪ್ರೀತಿಯೇ ಫೈಲ್ಯೂರ್ ಆಗುತ್ತದೆ. ಅನಿವಾರ್ಯವಾಗಿ ಲವರ್‌ನ್ನು ಬಿಟ್ಟು ಬೇರೊಬ್ಬಳ ಜೊತೆ ಜೀವನ ನಡೆಸಬೇಕಾಗುತ್ತದೆ. ಹೀಗೆ ಜೀವನ ನಡೆಸುವುದು ತುಂಬಾ ಕಷ್ಟ. ಖಂಡಿತವಾಗಿಯೂ ಆಗಾಗ ಗರ್ಲ್‌ಫ್ರೆಂಡ್, ಆಕೆಯ ಜೊತೆ ಕಳೆದ ಕ್ಷಣಗಳ ನೆನಪು ಕಾಡದೇ ಇರದು.
ಮಾಜಿ ಗೆಳತಿಯನ್ನು ಮಿಸ್ ಮಾಡಿಕೊಳ್ತಿದ್ದೇನೆ ಎಂದ ಪತಿರಾಯ
ಹೀಗೆ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿಯೀಗ ತನ್ನ ಮಗುವಿಗೆ ಆಕೆಯದ್ದೇ ಹೆಸರಿಡುತ್ತೇನೆ ಎಂದು ಹಠ ಹಿಡಿದು ಕುಳಿತಿದ್ದಾನೆ. ರೆಡ್ಡಿಟ್‌ನಲ್ಲಿ ಈ ಕುರಿತಾದ ಸ್ಟೋರಿಯೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಗರ್ಭಿಣಿ ಹೆಂಡತಿಯ ಬಳಿ ಹುಟ್ಟಲಿರುವ ಮಗುವಿಗೆ ಮಾಜಿ ಗೆಳತಿಯ ಹೆಸರನ್ನು ತಮ್ಮ ಮಗುವಿಗೆ ಹೆಸರಿಸುವಂತೆ ಸೂಚಿಸಿದನು. ಯಾಕೆಂದರೆ ನಾನು ಅವಳನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇನೆ. ಹೀಗಾಗಿ ಮಗುವಿಗೆ ಅವಳದ್ದೇ ಹೆಸರಿಡುವುದು ಸೂಕ್ತ ಎಂದು ನಾನು ನಂಬುತ್ತೇನೆ ಎಂದು ವ್ಯಕ್ತಿ ತಿಳಿಸಿದ್ದಾನೆ.
ಎಕ್ಸ್ ಮೇಲೆ ಸಿಕ್ಕಾಪಟ್ಟೆ ಸಿಟ್ಟಿದ್ಯಾ ? ಈ ಝೂನಲ್ಲಿ ಮಾಜಿ ಪ್ರೇಯಸಿ ಹೆಸರನ್ನು ಜಿರಳೆಗಿಡ್ಬೋದು!
ಹುಟ್ಟೋ ಮಗುವಿಗೆ ಮಾಜಿ ಗೆಳತಿಯ ಹೆಸರಿಡಲು ವ್ಯಕ್ತಿಯ ಪಟ್ಟು
ರೆಡ್ಡಿಟ್‌ನಲ್ಲಿ ವ್ಯಕ್ತಿ ಈ ಕೆಳಗೆ ಹೇಳಿದಂತೆ ಪೋಸ್ಟ್ ಮಾಡಿದ್ದಾನೆ. 'ಖುಷಿಯ ವಿಚಾರವೆಂದರೆ ನಮಗೆ ಮಗುವಾಗುತ್ತಿದೆ. ಆದರೆ ಮಗುವಿನ ಲಿಂಗ ನಮಗೆ ತಿಳಿದಿಲ್ಲ, ಆದರೆ ನಾವು ಮಗುವಿನ ಹೆಸರುಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದ್ದೇವೆ. ಒಂದೆರಡು ರಾತ್ರಿಗಳ ಹಿಂದೆ ನಾವು ಹೆಸರುಗಳನ್ನು ಸೂಚಿಸುತ್ತಿದ್ದೆವು. ನನ್ನ ಹೆಂಡತಿಯನ್ನು ಭೇಟಿಯಾಗುವ ಮೊದಲು ನಾನು ಸುಮಾರು 6 ವರ್ಷಗಳ ಕಾಲ ಗೆಳತಿಯನ್ನು ಹೊಂದಿದ್ದೆ. ದುರದೃಷ್ಟವಶಾತ್, ಅವಳು ತೀರಿಕೊಂಡಳು ಮತ್ತು ನಾನು ಸಂಪೂರ್ಣವಾಗಿ ಹತಾಶನಾದೆ. ಅದರ ಬಗ್ಗೆ ಯೋಚಿಸುವುದು ಇನ್ನೂ ನೋವಿನ ಸಂಗತಿಯಾಗಿದೆ ಮತ್ತು ನಾನು ಯಾವಾಗಲೂ ಅವಳ ನೆನಪಿಗಾಗಿ ಮಗುವಿಗೆ ಹೆಸರಿಸುವುದನ್ನು ಕಲ್ಪಿಸಿಕೊಂಡಿದ್ದೇನೆ. ನಾನು ಸಹ ಆ ಹೆಸರನ್ನು(ನ್ಯಾನ್ಸಿ) ಪ್ರೀತಿಸುತ್ತೇನೆ )' ಎಂದು ಪೋಸ್ಟ್ ಮಾಡಲಾಗಿದೆ.
'ನಾನು ನನ್ನ ಹೆಂಡತಿಗೆ ಸಲಹೆಯನ್ನು ನೀಡಿದಾಗ ಅವಳು ಖುಷಿ ಪಡಲ್ಲಿಲ್ಲ. ಬದಲಿಗೆ ಮಾಜಿ ಪ್ರೇಯಸಿಯ ಹೆಸರನ್ನು ಮಗಳಿಗಿಡುವುದು ಸೂಕ್ತವಲ್ಲವೆಂದು ಹೇಳಿದಳು' ಎಂದು ವ್ಯಕ್ತಿ ಹೇಳಿದ್ದಾರೆ. 'ನನ್ನ ಹೆಂಡತಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಿಲ್ಲ ಮತ್ತು ಪ್ರಾಮಾಣಿಕವಾಗಿ ಇದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಿದೆ. ಮಾಜಿ ಪ್ರೇಯಸಿಯ ಹೆಸರನ್ನು ಮಗುವಿಗೆ ಇಡುವುದು ಯಾಕೆ ಬೇಡ ಎಂದು ನನಗೆ ತಿಳಿದಿಲ್ಲ. ಅವಳು ಅಸುರಕ್ಷಿತಳಾಗಿದ್ದಾಳೆಯೇ ಅಥವಾ ಗರ್ಭಾವಸ್ಥೆಯು ಅವಳಿಗೆ ಒತ್ತಡವನ್ನುಂಟುಮಾಡುತ್ತಿದೆಯೇ ಎಂದು ಗೊತ್ತಾಗುತ್ತಿಲ್ಲ. ಆದರೆ ನನಗೆ ಇದರಲ್ಲಿ ಯಾವುದೇ ತೊಂದರೆ ಕಾಣಿಸುತ್ತಿಲ್ಲ' ಎಂದು ವ್ಯಕ್ತಿ ಹೇಳಿದ್ದಾನೆ. ನೆಟ್ಟಿಗರು ಈ ಪೋಸ್ಟ್‌ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಜೊತೆಗಿನ ಫೋಟೋ ಸೇಲ್ ಮಾಡಿ 1.3 ಕೋಟಿ ಗಳಿಸಿದ ಮಾಜಿ ಗರ್ಲ್‌ಫ್ರೆಂಡ್ !