Viral News: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆ ಪಕ್ಕ ಕುಳಿತ್ರೆ ಜೈಲು!

By Suvarna NewsFirst Published Apr 13, 2024, 3:06 PM IST
Highlights

ಕೋರ್ಟ್ ವ್ಯಕ್ತಿಯೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿದೆ. ಆತ ಯಾವುದೇ ಕಾರಣಕ್ಕೂ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಅಕ್ಕಪಕ್ಕ ಕುಳಿತುಕೊಳ್ಳುವಂತಿಲ್ಲ. ಒಂದ್ವೇಳೆ ನಿಯಮ ಮೀರಿದ್ರೆ ಮತ್ತೆ ಆತನಿಗೆ ಜೈಲೂಟ ಗ್ಯಾರಂಟಿ. 

ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವು ಅಚ್ಚರಿ ಮೂಡಿಸಿದ್ರೆ ಮತ್ತೆ ಕೆಲವು ನೆಮ್ಮದಿ ನೀಡುತ್ತವೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳಿಗೆ ಮಕ್ಕಳನ್ನು ಕರೆದೊಯ್ಯಲು ಶಾಲೆಗೆ ಬರದಂತೆ ಸೂಚನೆ ನೀಡಲಾಗಿತ್ತು. ಆಕೆ ಅಶ್ಲೀಲ ವೆಬ್ ಸೈಟ್ ನಲ್ಲಿ ಖಾತೆ ಹೊಂದಿದ್ದಲ್ಲದೆ ಆ ವೆಬ್ ಸೈಟ್ ಜಾಹೀರಾತನ್ನು ಕಾರಿನ ಮೇಲೆ ಹಾಕಿದ್ದಳು. ಇದನ್ನು ನೋಡಿದ ಶಾಲೆ ಆಡಳಿತ ಮಂಡಳಿ ಆಕೆಯ ಮೇಲೆ ನಿಷೇಧ ಹೇರಿದೆ. ಉರ್ಫಿ ಜಾವೇದ್ ರಂತೆ ಡ್ರೆಸ್ ಮಾಡ್ಕೊಂಡು ಶಾಪಿಂಗ್ ಮಾಡ್ತಿದ್ದ ಯುವತಿಗೆ ಸೂಪರ್ ಮಾರ್ಕೆಟ್ ಬ್ಯಾನ್ ಮಾಡಿದ ಸುದ್ದಿಯೂ ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು. ಈಗ ಮತ್ತೊಂದು ಸುದ್ದಿ ಇದೆ. ಇಲ್ಲಿ ವ್ಯಕ್ತಿಯೊಬ್ಬನಿಗೆ ಕೋರ್ಟ್ ನಿಷೇಧ ಹೇರಿದೆ. ಆತ ಇನ್ನು ಐದು ವರ್ಷಗಳ ಕಾಲ ರೈಲು, ಬಸ್ಸು ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆ ಪಕ್ಕದಲ್ಲಿ ಕುಳಿತುಕೊಳ್ಬಾರದು. ಕುಳಿತ್ರೆ ಆತನಿಗೆ ಜೈಲು ಶಿಕ್ಷೆಯಾಗಲಿದೆ.

ಸಾರ್ವಜನಿಕ (Public) ಪ್ರದೇಶದಲ್ಲಿ ಹಾಗೂ ಸಾರಿಗೆಯಲ್ಲಿ ಮಹಿಳೆ (Woman) ಯರ ಮೇಲೆ ದೌರ್ಜನ್ಯ ನಡೆಯುತ್ತಿರುತ್ತದೆ. ಮಹಿಳೆ ಪಕ್ಕದಲ್ಲಿ ಬಂದು ನಿಲ್ಲುವ ಪುರುಷರು, ಅನುಚಿತವಾಗಿ ವರ್ತಿಸುತ್ತಾರೆ. ಅಸಹ್ಯ ಮಾತು, ಸ್ಪರ್ಶ (Touch) ದಿಂದ ಮಹಿಳೆಯರಿಗೆ ಹಿಂಸೆ (Violence) ನೀಡುತ್ತಾರೆ. ಅದನ್ನು ಕೆಲವರು ಸಹಿಸಿಕೊಳ್ಳುವುದಲ್ಲದೆ, ಅದನ್ನು ನೋಡಿದ ಜನರು ಕೂಡ ಬಾಯಿ ಬಿಡೋದಿಲ್ಲ. ಇನ್ನು ಕೆಲವರು ಯಾವುದೇ ಭಯವಿಲ್ಲದೆ ಅದನ್ನು ವಿರೋಧಿಸುತ್ತಾರೆ. ಈ ವ್ಯಕ್ತಿ ವರ್ತನೆಯನ್ನು ಕೂಡ ಮಹಿಳೆಯರು ವಿರೋಧಿಸಿದ್ದಾರೆ. ಹಾಗಾಗಿ ಈತನಿಗೆ ನಿಷೇಧ ಹೇರಲು ಸಾಧ್ಯವಾಗಿದೆ. 

ಗೌರಿ ಖಾನ್ ಜತೆ ಬೆಂಗಳೂರಿಗೆ ಬಂದಿದ್ದ ಶಾರುಖ್ ಖಾನ್ ಹಳೆಯ ಫೋಟೋ 'ಚಮತ್ಕಾರ' ಮಾಡ್ತಿದೆ ನೋಡ್ರೀ!

ಮಹಿಳೆ ಜೊತೆ ಪ್ರಯಾಣ ನಿಷೇಧ : ಬ್ರಿಟನ್‌ನ ಬರ್ಮಿಂಗ್ಹ್ಯಾಮ್ ನಗರದ ನಿವಾಸಿ 34 ವರ್ಷದ ಕ್ರಿಸ್ಟಾಪ್ಸ್ ಬರ್ಜಿನ್ಸ್ ನಿಷೇಧಿತ ವ್ಯಕ್ತಿ. ಆತ ಕಳೆದ ವರ್ಷ ಜೂನ್ ನಲ್ಲಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಈ ವೇಳೆ ಮಹಿಳೆಯ ಬಳಿ ಕುಳಿತಿದ್ದ ಕ್ರಿಸ್ಟಾಪ್ಸ್ ಬರ್ಜಿನ್ಸ್, ಅನುಚಿತವಾಗಿ ವರ್ತಿಸಿದ್ದಾನೆ. ಹೆಡ್ ಫೋನ್ ಹಾಕಿದ್ದ ಮಹಿಳೆಯರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಅದನ್ನು ನಿರಾಕರಿಸಿದ ಮಹಿಳೆಯರಿಗೆ ಕೆಟ್ಟ ಕಮೆಂಟ್ ಮಾಡಿದ್ದಾನೆ. ಆತ ಶೌಚಾಲಯಕ್ಕೆ ಹೋದಾಗ ಎಲ್ಲ ಮಹಿಳೆಯರು ಆ ಬೋಗಿ ಖಾಲಿ ಮಾಡಿದ್ದಾರೆ. ಅಲ್ಲದೆ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಏಳು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅಷ್ಟೇ ಅಲ್ಲ ಒಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಇನ್ನು ಐದು ವರ್ಷ ರೈಲು, ಬಸ್ ಅಥವಾ ಇನ್ನಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಆತ ಮಹಿಳೆಯರ ಪಕ್ಕ ಕುಳಿತುಕೊಳ್ಳುವಂತಿಲ್ಲ. ಮಹಿಳೆಯರನ್ನು ಮಾತನಾಡಿಸುವಂತಿಲ್ಲ. ಮಹಿಳೆ ಜೊತೆ ಕೆಟ್ಟದಾಗಿ ನಡೆದುಕೊಂಡ್ರೆ ಆತನಿಗೆ ಮತ್ತೆ ಜೈಲು ಶಿಕ್ಷೆಯಾಗಲಿದೆ. ಕೋರ್ಟ್ ಈ ಕೃತ್ಯವನ್ನು ಖಂಡಿಸಿದ್ದಲ್ಲದೆ 30 ಸಾವಿರ ರೂಪಾಯಿ ದಂಡ ವಿಧಿಸಿದೆ. 

ಕೋರ್ಟ್ ತೀರ್ಪು ಬರ್ತಿದ್ದಂತೆ ಮಹಿಳೆಯರು ಖುಷಿಯಾಗಿದ್ದಾರೆ. ಅಟ್ಲೀಸ್ಟ್ ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ನೀಡ್ತಿದ್ದ ಒಬ್ಬ ವ್ಯಕ್ತಿ ಆದ್ರೂ ನಮ್ಮ ದಾರಿಯಿಂದ ದೂರವಾಗಿದ್ದಾನೆಂದು ಸಂತಸಗೊಂಡಿದ್ದಾರೆ. 

ಈ ರಾಶಿ ಹುಡುಗಿಯರು ಹೆಂಡತಿಯಾದರೆ,ಪುರುಷರಿಗೆ ಪ್ರತಿದಿನವೂ ಹಬ್ಬವೇ..

ಲೈಂಗಿಕ ಕಿರುಕುಳ ಮತ್ತು ಅನಗತ್ಯ ಲೈಂಗಿಕ ನಡವಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದವರಿಗೆ ನಾವು ಶಿಕ್ಷೆ ಕೊಡಿಸುತ್ತೇವೆ. ಅವರನ್ನು ಹಾಗೆ ಬಿಡಲು ಸಾಧ್ಯವೇ ಇಲ್ಲ ಎಂದು ಆಡಳಿತ ಹೇಳಿದ್ದಲ್ಲದೆ ಇಂಥ ಘಟನೆಗಳು ಕಂಡು ಬಂದಲ್ಲಿ ತಕ್ಷಣ ನಮ್ಮ ದೂರು ನೀಡುವಂತೆ ಜನರಿಗೆ ಸೂಚನೆ ನೀಡಿದೆ.  

click me!