ಗೋಣಿ ಚೀಲದಲ್ಲಿ ಕುರ್ತಾ ಚಮತ್ಕಾರ, ಈತ ಉರ್ಫಿ ಜಾವೇದ್ ಪುರುಷ ಅವತಾರ ಎಂದ ನೆಟಿಜೆನ್ಸ್!

Published : Apr 12, 2024, 04:45 PM IST
ಗೋಣಿ ಚೀಲದಲ್ಲಿ ಕುರ್ತಾ ಚಮತ್ಕಾರ, ಈತ ಉರ್ಫಿ ಜಾವೇದ್ ಪುರುಷ ಅವತಾರ ಎಂದ ನೆಟಿಜೆನ್ಸ್!

ಸಾರಾಂಶ

ವಿನೂತನ, ಭಿನ್ನವಾಗಿದ್ದರೆ ಸಾಕು ಅದು ಫ್ಯಾಶನ್ ಎನಿಸಿಕೊಳ್ಳುತ್ತದೆ. ಈಗಾಗಲೇ ಉರ್ಫಿ ಊಹೆಗೂ ನಿಲುಕ ಫ್ಯಾಶನ್ ಉಡುಗೆಗಳ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಇಲ್ಲೊಬ್ಬ ಬಿಸಾಡಿದ ಗೋಣಿ ಚೀಲದಲ್ಲಿ ಕುರ್ತಾ ಹೊಲಿದು ಧರಿಸಿದ್ದಾನೆ. ಈತ ಉರ್ಫಿಯ ಪುರುಷ ಅವತಾರ ಎಂದು ನೆಟ್ಟಿಗರು ಕರೆದಿದ್ದಾರೆ.  

ಮಾರುಕಟ್ಟೆಗೆ ಹೊಸ ಹೊಸ ಫ್ಯಾಶನ್ ಡ್ರೆಸ್‌ಗಳು ಪ್ರತಿ ದಿನ ಬಿಡುಗಡೆಯಾಗುತ್ತಿದೆ. ಇನ್ನು ಫ್ಯಾಶನ್ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ರೂಪದರ್ಶಿಯರು ಖ್ಯಾತ ಬ್ಯಾಂಡೆಡ್ ಉಡುಪಗಳ ಪ್ರದರ್ಶನ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಜನಪ್ರಿತೆಯ ತಂದುಕೊಡುತ್ತಾರೆ. ಈ ಫ್ಯಾಶನ್ ಜಗತ್ತನ್ನೇ ಬೆಚ್ಚಿ ಬೀಳಿಸಿದ ಖ್ಯಾತಿ ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್‌ಗೆ ಇದೆ. ಈಕೆಯ ಊಹೆಗೂ ನಿಲುಕದ ಫ್ಯಾಶನ್ ಸೆನ್ಸ್ ಹಾಗೂ ಬೋಲ್ಡ್ ಲುಕ್‌ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದೀಗ ಉರ್ಫಿ ಜಾವೇದ್‌ಗೆ ಸ್ಪರ್ಧೆ ನೀಡಲು ಪುರುಷ ಅವಾತರದಲ್ಲಿ ಫ್ಯಾಶನ್ ಫ್ರೀಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಈತ ಬಿಸಾಡಿದ ಗೋಣಿ ಚೀಲದಲ್ಲಿ ಕುರ್ತಾ ಹೊಲಿದು ಧರಿಸಿದ್ದಾನೆ. ಗೋಣಿ ಕುರ್ತಾ ಎಂದೇ ಖ್ಯಾತಿಯಾಗಿರುವ ಈಡ್ರೆಸ್ ಭಾರಿ ವೈರಲ್ ಆಗಿದೆ.

ಅಕ್ಕಿ ಸೇರಿದಂತೆ ಇತರ ಸಮಾಗ್ರಿಗಳ ಗೋಣಿ ಚೀಲದಲ್ಲಿ ಸುಂದರ ಕುರ್ತಾ ರೆಡಿಯಾಗಿದೆ. ಇದೀಗ ಈ ಗೋಣಿ ಕುರ್ತಾ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಕಾರಣ ಇದು ಇಕೋ ಫ್ಲೆಂಡ್ಲಿ ಕುರ್ತಾ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈತನ ಕ್ರಿಯಾತ್ಮಕ ಕೌಶಲ್ಯ, ಪರಿಸರ ಸ್ನೇಹಿ ಕುರ್ತಾವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇದು ಬೇಸಿಗೆ ಕಾಲಕ್ಕಲ್ಲ, ಚಳಿಗಾಲಕ್ಕೆ ಹೇಳಿ ಮಾಡಿಸಿದ ಕುರ್ತಾ ಎಂದು ಹಲವರು ಹೇಳಿದ್ದಾರೆ.

ಬಿಸಿಲ ಬೇಗೆಗೆ ಉರ್ಫಿಯ ಹೊಸ ಫ್ಯಾಶನ್, ವೈರಲ್ ಆಯ್ತು ಸಮ್ಮರ್ ಫ್ಯಾನ್ ಡ್ರೆಸ್ !

ಕೆಲ ದಿನಗಳ  ಹಿಂದೆ ಈ ಗೋಣಿ ಕುರ್ತಾ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಬರೋಬ್ಬರಿ 53 ಮಿಲಿಯನ್ ವೀಕ್ಷಣೆ ಪಡೆದಿದೆ. ಈತ ಉರ್ಫಿಯ ಪುರುಷ ಅವತಾರ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಉರ್ಫಿಯಿಂದ ಪ್ರೇರತನಾಗಿ ಈತ ಕೂಡ ಫ್ಯಾಶನ್ ಜಗತ್ತಿಗೆ ಕಾಲಿಟ್ಟಿದ್ದಾನೆ. ಆದರೆ ಮೊದಲ ಪ್ರಯತ್ನದಲ್ಲೇ ಉರ್ಫಿಯನ್ನು ಮೀರಿಸಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.

ಈ ಗೋಣಿ ಕುರ್ತಾವನ್ನು ಯಾರಾದರು ಸೆಲೆಬ್ರೆಟಿಗಳು ಪ್ರಮೋಶನ್ ಮಾಡಲಿ, ಒಂದು ಬಾರಿ ಧರಿಸಿದರೆ ಸಾಕು ಅಥವಾ ಹರಿದಾಡುತ್ತಿರುವ ವಿಡಿಯೋಗೆ ಕಮೆಂಟ್ ಮಾಡಿದರೆ ಸಾಕು, ಮರುದಿನ ಶಾಪಿಂಗ್ ಮಾಲ್‌ಗಳಲ್ಲಿ ದುಬಾರಿಗೆ ಬೆಲೆಗೆ ಈ ಕುರ್ತಾ ಲಭ್ಯವಾಗುವದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

 

 

ಫ್ಯಾಶನ್ ಜಗತ್ತಿನಲ್ಲಿ ಹೊಸ ಹೊಸ ವಿನ್ಯಾಸದ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಡುವುದು ಸಾಮಾನ್ಯ. ಆದರೆ ಬಿಸಾಡಿದ ಗೋಣಿಯಿಂದ ಇಕೋ ಫ್ರೆಂಡ್ಲಿ ಕುರ್ತಾ ರೆಡಿ ಮಾಡಿ ಈ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದಾನೆ. ಈತನ ಕ್ರಿಯೆಟಿವಿಟಿಯನ್ನು ಬ್ರಾಂಡೆಡ್ ಫ್ಯಾಶನ್ ಸಂಸ್ಥೆಗಳು ಬಳಸಿಕೊಂಡರೆ ಲಾಭವೇ ಹೆಚ್ಚು ಎಂದು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡಿದ್ದಾರೆ.

ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಂದದೊಂದಿಗೆ ನಿಮ್ಮ ಶೋಭೆಯನ್ನು ಹೆಚ್ಚಿಸೋ ₹500ಗೆ ಸಿಗೋ ಮಂಗಳಸೂತ್ರದ ಕಾಂಬೊ ಸೆಟ್