ಮಲೈಕಾ ಅರೋರಾ ಫಿಟ್ ನೆಸ್ ಗೆ ಮತ್ತೊಂದು ಹೆಸರು. ದೈಹಿಕ ಸೌಂದರ್ಯ ಹಾಗೂ ತ್ವಚೆಯ ಸೌಂದರ್ಯ ಎರಡನ್ನೂ ಉಳಿಸಿಕೊಂಡು ೪೯ ವರ್ಷವಾಗಿದ್ದರೂ ಬಾಲಿವುಡ್ ನಲ್ಲಿ ತಮ್ಮ ಬೇಡಿಕೆ ಉಳಿಸಿಕೊಂಡಿರುವ ಅಪರೂಪದ ನಟಿ. ಇದೀಗ ಅವರು ತಮ್ಮ ಫಿಟ್ ನೆಸ್ ಗುಟ್ಟನ್ನು ಹಂಚಿಕೊಂಡಿದ್ದಾರೆ.
ಮಲೈಕಾ ಅರೋರಾ…. ವಯಸ್ಸು 49. ನೋಡಿದರೆ ಇಷ್ಟೆಲ್ಲ ವಯಸ್ಸಾಗಿದೆ ಎಂದೇ ಗೊತ್ತಾಗದ ಮೈಮಾಟ. ಮುಖದಲ್ಲೂ ವಯಸ್ಸಾಗಿರುವ ಕುರುಹಿಲ್ಲ. ಹೀಗಾಗಿ, ಇಂದಿಗೂ ಸಿನಿಪ್ರಿಯರ ಎದೆಯಲ್ಲಿ ಮಿಂಚು ಹರಿಸುತ್ತಾರೆ. ಮಲೈಕಾ ಅನೇಕರಿಗೆ ಫಿಟ್ ನೆಸ್ ಮಾಡೆಲ್ ಕೂಡ ಹೌದು. ವಯಸ್ಸಾದರೂ ಒಂದಿನಿತೂ ಮುಕ್ಕಾಗದ ಸೌಂದರ್ಯ ಹೊಂದಿರುವುದು ಸುಲಭವೇನೂ ಅಲ್ಲ. ಅದಕ್ಕೆ ಒಂದಿಷ್ಟು ತಪಸ್ಸಿನಂತಹ ನಿರಂತರ ಆರೈಕೆ ಮತ್ತು ಮಾನಸಿಕ ಆರೋಗ್ಯವೂ ಬೇಕಾಗುತ್ತದೆ. ಅದನ್ನು ಕಾಯ್ದುಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಕೆಲವರಿಗೆ ದೈಹಿಕ ಸೌಂದರ್ಯ ಆನುವಂಶೀಯವಾಗಿಯೇ ಬಂದಿರುತ್ತದೆ. ಏನೇ ಮಾಡಿದರೂ ತೂಕ ಹೆಚ್ಚಳವಾಗದ ಪ್ರಕೃತಿ ಹೊಂದಿರುತ್ತಾರೆ. ಆದರೂ, ಫಿಟ್ ನೆಸ್ ಕಾಯ್ದುಕೊಳ್ಳಲು, ತ್ವಚೆಯ ಚರ್ಮ ಆರೋಗ್ಯಕರವಾಗಿ ಇರಿಸಿಕೊಳ್ಳಲು ಮಾತ್ರ ಅವರು ಶ್ರಮ ವಹಿಸಲೇಬೇಕಾಗುತ್ತದೆ. ಹಾಗೆಯೇ ಮಲೈಕಾ ಕೂಡ ಇಷ್ಟು ವಯಸ್ಸಾಗಿದ್ದರೂ ತಮ್ಮ ಫಿಟ್ ನೆಸ್ ಹಾಗೂ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಂಡು ಬರುತ್ತಿರುವುದು ಸಾಕಷ್ಟು ಜನರಿಗೆ ಸ್ಫೂರ್ತಿದಾಯಕ.
ಇದೀಗ, ಮಲೈಕಾ ಅರೋರಾ (Malaika Arora) ತಮ್ಮ ಫಿಟ್ ನೆಸ್ (Fitness) ಮತ್ತು ತ್ವಚೆಯ (Skin) ಆರೋಗ್ಯದ (Health) ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಅವರು ಹೇಳಿಕೊಂಡಿದ್ದಾರೆ. ಅವರ ಆರೋಗ್ಯದ ಗುಟ್ಟು ಇದೀಗ ಖುಲ್ಲಾ ಆಗಿದೆ. “ದಿನವೂ ಬೆಳಗ್ಗೆ ಬಿಸಿನೀರು (Warm Water), ಲಿಂಬೆರಸ (Lemon) ಹಾಗೂ ಜೇನುತುಪ್ಪವನ್ನು (Honey) ಬೆರೆಸಿ ಸೇವಿಸುವುದೊಂದಿಗೆ ದಿನಚರಿ ಆರಂಭಿಸುತ್ತೇನೆʼ ಎಂದವರು ಹೇಳಿದ್ದಾರೆ. “ಇದು ಎಂದಿನಿಂದಲೂ ಬಳಕೆಯಲ್ಲಿರುವ ಪದ್ಧತಿಯಾಗಿದ್ದು, ನಮ್ಮ ದೇಹದಿಂದ ವಿಷಕಾರಿ (Toxic) ಅಂಶವನ್ನು ಹೊರದೂಡಲು ಸಹಕಾರಿಯಾಗಿದೆ. ಹಾಗೂ ದೀರ್ಘಾವಧಿಯಲ್ಲಿ ನಮ್ಮ ತೂಕವನ್ನು (Weight) ನಿಯಂತ್ರಿಸಲು ಕಾರಣವಾಗುತ್ತದೆʼ ಎಂದೂ ಬರೆದುಕೊಂಡಿದ್ದಾರೆ.
ರೊಮ್ಯಾಂಟಿಕ್ ಪೋಟೋ ಶೇರ್ ಮಾಡಿ 'ನನ್ನವಳು' ಎಂದ ಅರ್ಜುನ್; ಮಲೈಕಾ ರಿಯಾಕ್ಷನ್ ಹೀಗಿತ್ತು
ನೀರು (Water) ನಮ್ಮ ದೇಹಕ್ಕೆ ಅತ್ಯಗತ್ಯ. ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಸಹ ಅಷ್ಟೇ ಅಗತ್ಯ. ದಿನವೂ ಬೆಳಗ್ಗೆ ಬಿಸಿನೀರಿನೊಂದಿಗೆ ಜೇನುತುಪ್ಪ ಸೇವನೆ ಮಾಡಿದಾಗ ದೇಹದಿಂದ ವಿಷಕಾರಿ ಅಂಶ ಹೊರಹೋಗಲು ಸಹಾಯಕವಾಗುತ್ತದೆ. ಈ ಬಗ್ಗೆ ಹಲವು ತಜ್ಞರ ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರಾದರೂ ಈ ವಿಧಾನ ಜನಪ್ರಿಯವಾಗಿರುವುದು ನಿಜ. ಇದೀಗ ಮಲೈಕಾ ಕೂಡ ಇದನ್ನೇ ಬಳಕೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ದೇಹದಲ್ಲಿ ಶೇಖರವಾಗುವ ಹೆಚ್ಚುವರಿ ಕೊಬ್ಬು (Fat) ಕರಗುತ್ತದೆ. ಈ ಕಾಂಬಿನೇಷನ್ ಕೊಬ್ಬನ್ನು ಕರಗಿಸಿ, ವಿಘಟನೆ ಆಗುವಂತೆ ಮಾಡಿ ದೇಹಕ್ಕೆ ಶಕ್ತಿ ದೊರೆಯುವಂತೆ ಮಾಡುತ್ತದೆ. ಲಿಂಬೆಯಲ್ಲಿ ವಿಟಮಿನ್ ಸಿ ಆಂಟಿಆಕ್ಸಿಡಂಟ್ಸ್ ಇದೆ. ಇದು ಸಹ ದೇಹವನ್ನು ಶುದ್ಧೀಕರಿಸುತ್ತದೆ. ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿ ಇದೆ.
ಇದೊಂದೇ ಅಲ್ಲ, ಮಲೈಕಾ ಅರೋರಾ ದಿನವೂ ಯೋಗಾಭ್ಯಾಸ (Yoga) ಮಾಡುತ್ತಾರೆ. ಅವರು ಯೋಗಾಭ್ಯಾಸದಲ್ಲಿ ನಿರತರಾಗಿರುವ ಭಂಗಿಗಳು ಆಗಾಗ ಪ್ರಕಟವಾಗುತ್ತಿರುತ್ತವೆ. ಅವರೇ ಹಿಂದೊಮ್ಮೆ ಹೇಳಿಕೊಂಡಿರುವಂತೆ, ಅವರು ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಇಷ್ಟಪಡುವವರಿಗೆ ಅವರು ಹೇಳುವ ಕಿವಿಮಾತು ಎಂದರೆ, ಬದ್ಧತೆಯಿಂದ (Commitment) ಇರಿ ಎಂದು. ತೂಕ ಇಳಿಸಿಕೊಳ್ಳುವುದು ಏಕಾಏಕಿ ಸಾಧ್ಯವಾಗುವುದಿಲ್ಲ. ಅದಕ್ಕೆ ನಿರಂತರ ಬದ್ಧತೆ ಹಾಗೂ ಶ್ರಮ ಎರಡೂ ಅಗತ್ಯ. ಗುರಿ ಕೇಂದ್ರೀಕೃತವಾಗಿದ್ದು, ಸತತವಾಗಿ ಪ್ರಯತ್ನಿಸಬೇಕು. ಹಾಗಾದರೆ ಮಾತ್ರ ನಿಮ್ಮ ಗುರಿ ತಲುಪಬಹುದು ಎಂದು ಹೊಸಬರಿಗೆ ಹೇಳುತ್ತಾರೆ.
Weight Loss : ಬೇಗ ಸಣ್ಣಗಾಗ್ಬೇಕೆಂದ್ರೆ ಈ ಸಿಂಪಲ್ ರೂಲ್ಸ್ ಫಾಲೋ ಮಾಡಿ
ಹೆಚ್ಚು ನೀರು ಕುಡೀರಿ
ತ್ವಚೆಯ ಬಗೆಗೂ ಅವರ ಕಾಳಜಿ ಮೆಚ್ಚುವಂಥದ್ದು. ಚರ್ಮದ ಆರೋಗ್ಯ ಚೆನ್ನಾಗಿರಬೇಕೆಂದು ದಿನವೂ ಹೆಚ್ಚು ನೀರು ಕುಡಿಯುತ್ತಾರೆ. ಹಾಗೆಯೇ ದಿನವೂ ರಾತ್ರಿ ಮಲಗುವ ಸಮಯದಲ್ಲಿ ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆಯನ್ನು (Castor Oil) ಸವರಿಕೊಳ್ಳುತ್ತಾರೆ.
ಮಲೈಕಾ ಇನ್ನೊಂದು ಗುಟ್ಟೆಂದರೆ ಈಜುವುದು (Swimming). ಶೂಟಿಂಗ್ ಗೆ ಎಲ್ಲೆಂದರಲ್ಲಿ ಓಡಾಡುತ್ತಿರುವಾಗ ನಿಯಮಿತವಾಗಿ ವ್ಯಾಯಾಮ (Exercise) ಮಾಡಲು ಸಾಧ್ಯವಾಗದೆ ಇರಬಹುದು. ಅಂತಹ ಸಮಯದಲ್ಲಿ ಈಜುವುದು ಅವರಿಗೆ ಭಾರೀ ಇಷ್ಟ. ಇದರಿಂದ ದೇಹದ ಒತ್ತಡ (Stress) ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.