ಅತ್ಯಂತ ಅಪಾಯಕಾರಿ ಹಾವು ನಾಗರಹಾವು. ಹೆಚ್ಚು ವಿಷವನ್ನು ಹೊಂದಿರುವ ನಾಗರ ಹಾವಿನ ಜೊತೆ ತಮಾಷೆ ಮಾಡಲು ಹೋಗ್ಬೇಡಿ. ಸೂಕ್ತ ತರಬೇತಿ ಪಡೆದವರು ಮಾತ್ರ ಅದ್ರ ರಕ್ಷಣೆಗೆ ಮುಂದಾಗ್ಬೇಕು. ಈಗ ನಾಗರಹಾವಿನ ಒಂದು ವಿಡಿಯೋ ವೈರಲ್ ಆಗಿದ್ದು, ಜನರು ಹುಬ್ಬೇರಿಸುವಂತೆ ಮಾಡಿದೆ.
ನಾಗರ ಪಂಚಮಿ ಬಂದಾಗ ಹಾವಿನ ಹುತ್ತಕ್ಕೆ ಹಾಲು ಹಾಕಿ, ಪೂಜೆ ಮಾಡಿ ಬರುವ ಬರುವ ಜನರು ನಿಜವಾದ ಹಾವು ಬಂದ್ರೆ ಎದ್ನೋ ಬಿದ್ನೋ ಅಂತಾ ಓಡ್ತಾರೆ. ಹಾವಿಗೆ ನಾನು ಹೆದರಲ್ಲ ಎನ್ನುವವರು ಕೆಲವೇ ಕೆಲವು ಮಂದಿ. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೋಕೆ ಜನರು ಅಪಾಯಕಾರಿ ಸಾಹಸಕ್ಕೆ ಕೈ ಹಾಕ್ತಿದ್ದಾರೆ. ಹಾವನ್ನು ಕೈನಲ್ಲಿ ಹಿಡಿದು ಅನೇಕರು ಸಾಹಸ ಮಾಡ್ತಿದ್ದಾರೆ. ಮತ್ತೆ ಕೆಲವರು ನಿಜವಾಗ್ಲೂ ಹಾವು ಹಾಗೂ ಜನಸಾಮಾನ್ಯರ ನೆರವಿಗೆ ಬರ್ತಿದ್ದಾರೆ. ಹಾವು ಹಿಡಿಯುವ, ಹಾವುಗಳನ್ನು ರಕ್ಷಿಸುವ ಅನೇಕ ಕಾರ್ಯಕರ್ತರನ್ನು ನಾವು ಕಾಣ್ಬಹುದು.
ಈಗ ಸಾಮಾಜಿಕ ಜಾಲತಾಣದಲ್ಲಿ ಬಾಯಾರಿದ ಕಿಂಗ್ ಕೋಬ್ರಾ (King Cobra ) ಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿದ ವಿಡಿಯೋ (Video) ವೈರಲ್ ಆಗಿದೆ. ಸಾಕು ಪ್ರಾಣಿಗಳಿಗೆ ನಾವು ನೀರುಣಿಸ್ತೇವೆ. ಹಾಗಂತ ಕಿಂಗ್ ಕೋಬ್ರಾಗೆ ನೀರು ಕೊಡಿ ಅಂದ್ರೆ ನಮ್ಮ ಹತ್ತಿರ ಸಾಧ್ಯವಿಲ್ಲ. ಆದ್ರೆ ಕಿಂಗ್ ಕೋಬ್ರಾಗೆ ಬಾಟಲಿಯಲ್ಲಿ ನೀರು ಕುಡಿಸುವ ಸಾಹಸವನ್ನು ವ್ಯಕ್ತಿಯೊಬ್ಬರು ಮಾಡಿದ್ದಾರೆ. ತಮಿಳುನಾಡಿನ ಕಡಲೂರು ಜಿಲ್ಲೆಯ ವನ್ಯಜೀವಿ ಕಾರ್ಯಕರ್ತರೊಬ್ಬರು ಈ ಸಾಹಸ ಮಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಾಗರಹಾವು ಸಂತೋಷದಿಂದ ನೀರು ಕುಡಿಯುತ್ತಿದೆ. ಕಾರ್ಯಕರ್ತರು ನೀರು ಹಾಕ್ತಿದ್ದಾರೆ.
ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!
ಕಿಂಗ್ ಕೋಬ್ರಾಗಳು ಸಾಮಾನ್ಯವಾಗಿ ತುಂಬಾ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುತ್ತವೆ. ನೀವು ಅವರಿಗೆ ಒಳ್ಳೆಯದನ್ನು ಮಾಡಲು ಹೋದರೂ ಅವು ನಿಮ್ಮನ್ನು ಕಚ್ಚುವ ಸಾಧ್ಯತೆಯಿರುತ್ತದೆ. ಆದ್ರೆ ಈ ವ್ಯಕ್ತಿಯ ಧೈರ್ಯ ಮೆಚ್ಚಲೇಬೇಕು. ಒಂದು ಕೈನಲ್ಲಿ ಹಾವಿನ ಬಾಲ ಹಿಡಿದಿರುವ ವ್ಯಕ್ತಿ, ಇನ್ನೊಂದು ಕೈನಲ್ಲಿ ಹಾವಿಗೆ ನೀರು ಕುಡಿಸ್ತಿದ್ದಾನೆ. ನಾಗರ ಹಾವು ಬಾಟಲಿಯಿಂದ ನೀರನ್ನು ಗುಟುಕಿಸುತ್ತಿದೆ.
ಎಲ್ಲಿ ವೈರಲ್ ಆಗಿದೆ ವಿಡಿಯೋ ? : $h!v@ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಾಗರಹಾವಿಗೆ ಶಕ್ತಿ ನೀಡಲು ಬಾಟಲಿಯಲ್ಲಿ ನೀರು ನೀಡ್ತಿರುವ ವ್ಯಕ್ತಿ ಎಂದು ಶೀರ್ಷಿಕೆ ಹಾಕಲಾಗಿದೆ. ಇನ್ನೂ ಮನುಷ್ಯತ್ವ ಜೀವಂತವಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಅಪಾಯಕಾರಿ ಕೆಲಸವಾಗಿದ್ದು, ಎಲ್ಲರೂ ಈ ಸಾಹಸಕ್ಕೆ ಕೈ ಹಾಕ್ಬಾರದು ಎಂದು ಕಮೆಂಟ್ ಮಾಡಿದ್ದಾರೆ.
ಹಾವಿನ ಜೊತೆ ಆಟ ಸುಲಭವಲ್ಲ, ಸಾವನ್ನು ವೆಲ್‌ಕಮ್ ಮಾಡಿಕೊಳ್ಳಬೇಡಿ!
ನಾಗರ ಹಾವು ಎಷ್ಟು ಅಪಾಯಕಾರಿ? : ಹಾವುಗಳ ಜಾತಿಗಳಲ್ಲಿ ನಾಗರ ಹಾವು ಅತ್ಯಂತ ವಿಷಕಾರಿ ಹಾವು ಎಂದು ಪರಿಗಣಿಸಲಾಗಿದೆ. ಕಿಂಗ್ ಕೋಬ್ರಾ ತನ್ನ ದೇಹದ ಮೂರನೇ ಒಂದು ಭಾಗವನ್ನು ನೆಲದಿಂದ ಮೇಲಕ್ಕೆ ಎತ್ತುತ್ತದೆ. ಇದರ ಉದ್ದ ಸುಮಾರು 13 ರಿಂದ 18 ಅಡಿ ಇರುತ್ತದೆ. ನಾಗರಹಾವು ಕಚ್ಚಿದಾಗ ಅದು ಹೆಚ್ಚಿನ ಪ್ರಮಾಣದ ನ್ಯೂರೋಟಾಕ್ಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಅದರ ವಿಷದ 10 ಭಾಗವು 20 ಜನರನ್ನು ಕೊಲ್ಲುವಷ್ಟು ಸಾಮರ್ಥ್ಯ ಹೊಂದಿರುತ್ತದೆ. ನಾಗರಹಾವು ಕಚ್ಚಿದ ವ್ಯಕ್ತಿ ಬದುಕುಳಿಯುವುದು ಬಹಳ ಅಪರೂಪ. ಕಿಂಗ್ ಕೋಬ್ರಾ ಹಲ್ಲುಗಳು 0.5 ಇಂಚುಗಳಷ್ಟು ಉದ್ದವಿರುತ್ತವೆ. ಉಳಿದ ಹಾವಿಗಿಂತ ನಾಗರ ಹಾವಿನ ದೃಷ್ಟಿ ಹೆಚ್ಚು ಉತ್ತಮವಾಗಿದೆ. ಸುಮಾರು 330 ಅಡಿ ದೂರದಲ್ಲಿ ನಡೆಯುವ ವ್ಯಕ್ತಿಯನ್ನು ಅದು ಪತ್ತೆ ಹಚ್ಚುತ್ತದೆ. ಅನೇಕ ಸಣ್ಣ ಹಾವುಗಳಿಗಿಂತ ಹೆಚ್ಚು ಜಾಗರೂಕವಾಗಿದೆ. ನಾಗರಹಾವು ಆತ್ಮರಕ್ಷಣೆಗಾಗಿ ಅಥವಾ ತಮ್ಮ ಮೊಟ್ಟೆಗಳನ್ನು ರಕ್ಷಿಸಲು ದಾಳಿ ಮಾಡುತ್ತವೆ. ಭಾರತದಿಂದ ಇಂಡೋನೇಷ್ಯಾದವರೆಗೆ ಇದರ ವ್ಯಾಪ್ತಿ ಇದೆ. ಪ್ರತಿ ವರ್ಷ ಐದಕ್ಕಿಂತಲೂ ಹೆಚ್ಚು ಮಂದಿ ನಾಗರ ಹಾವು ಕಚ್ಚಿ ಸಾವನ್ನಪ್ಪುತ್ತಾರೆ.
Man gives water to cobra straight from bottle to revive it, video goes viral pic.twitter.com/K0JUateWqp
— $h!v@ (@Shivakumar50)