12 ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಬೇಕೆಂದು ಆಸೆ ಪಟ್ಟವನಿಗೆ 'ನಾಯಿ ಪಾಡು' ಸಾಕಾಯ್ತಂತೆ!

Published : Aug 15, 2023, 01:37 PM ISTUpdated : Aug 15, 2023, 02:25 PM IST
12 ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಬೇಕೆಂದು ಆಸೆ ಪಟ್ಟವನಿಗೆ 'ನಾಯಿ ಪಾಡು' ಸಾಕಾಯ್ತಂತೆ!

ಸಾರಾಂಶ

ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಎಲ್ಲರನ್ನೂ ನಿಬ್ಬೆರಗೊಳಿಸುವ ಮನುಷ್ಯ ಕೆಲವೊಮ್ಮೆ ಅಷ್ಟೇ ವಿಚಿತ್ರವಾಗಿ ಆಡುತ್ತಾನೆ. ಇತ್ತೀಚಿಗಷ್ಟೇ ಜಪಾನಿನ ವ್ಯಕ್ತಿಯೊಬ್ಬ ಪ್ರಾಣಿಯಂತೆ ಬದುಕುವ ಆಸೆಯಲ್ಲಿ ನಾಯಿಯಂತೆ ಬದಲಾಗಿದ್ದ. ಈಗ ಮತ್ತೆ ಮನುಷ್ಯನಾಗೋ ಆಸೆಯಂತೆ

ಮನುಷ್ಯ ಬುದ್ಧಿವಂತನೋ, ದಡ್ಡನೋ ಸ್ಪಷ್ಟವಾಗಿ ಹೇಳುವುದು ಕಷ್ಟ. ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಎಲ್ಲರನ್ನೂ ನಿಬ್ಬೆರಗೊಳಿಸುವ ಮನುಷ್ಯ ಕೆಲವೊಮ್ಮೆ ಅಷ್ಟೇ ವಿಚಿತ್ರವಾಗಿ ಆಡುತ್ತಾನೆ. ಇತ್ತೀಚಿಗಷ್ಟೇ ಜಪಾನಿನ ವ್ಯಕ್ತಿಯೊಬ್ಬ ಪ್ರಾಣಿಯಂತೆ ಬದುಕುವ ಆಸೆಯಲ್ಲಿ ನಾಯಿಯಂತೆ ಬದಲಾಗಿದ್ದ. ಟೊಕೊ ಎಂಬ ಜಪಾನಿನ ವ್ಯಕ್ತಿ 12 ಲಕ್ಷ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ಪರಿವರ್ತನೆಯಾಗಿದ್ದ. ಕಳೆದ ವರ್ಷವೇ ನಾನು ನಾಯಿ ಆಗುವ ಇಚ್ಛೆ ಹೊಂದಿದ್ದೇನೆ ಎಂದು ಟೊಕೊ ಹೇಳಿದ್ದ. ಟೊಕೊ ತನ್ನ ನೈಜ ಮುಖವನ್ನು ತೋರಿಸಿಲ್ಲ. ನಾಯಿಯಾಗುವ ನನ್ನ ಆಸೆ ನನ್ನ ಕುಟುಂಬಸ್ಥರು ಹಾಗೂ ಆಪ್ತರಿಗೆ ವಿಚಿತ್ರವಾಗಿದೆ. ಆದ್ರೆ ನನಗೆ ಇದು ಇಷ್ಟವೆಂದು ಟೊಕೊ ಹೇಳಿದ್ದ. ಆರಂಭದಲ್ಲಿ ಟೊಕೊವನ್ನು ಜನರು ಒಪ್ಪಿಕೊಂಡಿರಲಿಲ್ಲ. ನಂತರ ಮೆಚ್ಚಿಕೊಂಡಿದ್ದಾರೆ.

ಸದ್ಯ ಇದೇ ಟೊಕೊ ನಾಯಿಯಾಗಿದ್ದು ಸಾಕಾಯಿತು ಇದರಿಂದ ಬೇಸತ್ತಿರುವುದಾಗಿ ಹೇಳಿದ್ದಾನೆ. ಕಳೆದ ತಿಂಗಳು ಟೊಕೊ ನಾಯಿ (Dog)ಯಾದ ವೀಡಿಯೊಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. 'ನಾನು ಪ್ರಾಣಿ (Animal)ಯಾಗಲು ಬಯಸುತ್ತೇನೆ' ಎಂಬ ಯೂಟ್ಯೂಬ್ ಚಾನೆಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಕೊ ಅವರು ನಾಯಿಯ ಪಾತ್ರವನ್ನು ಸ್ವೀಕರಿಸಿದ ತಮ್ಮ ಅನುಭವಗಳನ್ನು (Experience) ವಿವರಿಸಿದ್ದಾರೆ. 

ತೋಳ ಆಗೋದೇ ಈತನ ಬಾಲ್ಯದ ಕನಸು: 20 ಲಕ್ಷ ರೂ. ಖರ್ಚು ಮಾಡಿ ಹೇಗೆ ಕಾಣ್ತಾನೆ ನೋಡಿ..! 

ನಾಯಿಯನ್ನು ನೋಡಿ ಜನರ ಪ್ರತಿಕ್ರಿಯೆಗೆ ವ್ಯಕ್ತಿ ಕಂಗಾಲು
ಆರಂಭದಲ್ಲಿ ನಾನು ಜನರಿಂದ ಇಷ್ಟು ದೊಡ್ಡ ಪ್ರತಿಕ್ರಿಯೆ (Response)ಯನ್ನು ನಿರೀಕ್ಷಿಸಿರಲಿಲ್ಲ. ಆದರೆ ಜನರು ಖುಷಿಯಿಂದ ಪ್ರತಿಕ್ರಿಯಿಸಿದ್ದು ಅನಿರೀಕ್ಷಿತವಾಗಿತ್ತು. ತುಂಬಾ ಚಕಿತಗೊಳ್ಳುವಂತೆ ಮಾಡಿತು ಎಂದು ಟೊಕೊ ಹೇಳಿದ್ದಾರೆ. ಕುಟುಂಬದ ಪ್ರತಿಕ್ರಿಯೆಯ ಬಗ್ಗೆ ಕಳವಳವನ್ನು ತಿಳಿಸುತ್ತಾ ಟೊಕೊ, ಕುಟುಂಬ ಸದಸ್ಯರು (Family members) ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಈ ವಿಷಯವನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರು' ಎಂದು ತಿಳಿಸಿದರು.ಇತ್ತೀಚಿಗೆ 50,000 ಸದಸ್ಯರನ್ನು ತಲುಪಿದ ಟೊಕೊ ಅವರ ಯೂಟ್ಯೂಬ್ ಚಾನೆಲ್, ಅವರ ಆನ್‌ಲೈನ್ ಖ್ಯಾತಿಯ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಟೊಕೊ ಈ ಮಾಹಿತಿಯನ್ನು ಗೌಪ್ಯವಾಗಿ ಇಟ್ಟುಕೊಂಡು ಚಾನಲ್‌ನಿಂದ ತಮ್ಮ ಗಳಿಕೆಯನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಆನ್‌ಲೈನ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರೂ ಟೊಕೊ ನಾಯಿಯಾಗಿದಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. 'ನಾನು ಪ್ರಾಣಿಗಳನ್ನು ಪ್ರೀತಿಸುತ್ತೇನೆ. ಹೀಗಾಗಿ ನಾಯಿಯಂತೆ ನಟಿಸುವುದನ್ನು ಇಷ್ಟಪಡುತ್ತೇನೆ' ಎಂದು ಅವರು ಹೇಳಿದರು. 'ಇದು ನನ್ನ ಹವ್ಯಾಸ, ಹಾಗಾಗಿ ನಾನು ಅದನ್ನು ಮಾಡುತ್ತಲೇ ಇರುತ್ತೇನೆ. ಇದು ನನಗೆ ಸಂತೋಷವನ್ನು ನೀಡುತ್ತದೆ ಮತ್ತು ಇದು ಇತರ ಜನರನ್ನು ಸಂತೋಷಪಡಿಸುತ್ತದೆ' ಎಂದರು. 

ಡೈನೊಸಾರ್‌ಗೂ ಮೊದಲೇ ಭೂಮಿಯ ಮೇಲಿದ್ದ ದೈತ್ಯ ಜೀವಿ ಇದು!

ಯೂಟ್ಯೂಬ್‌ನಲ್ಲಿ ನಾಯಿಪಾಡಿನ ಜೀವನದ ಬಗ್ಗೆ ವಿವರ
ಟೊಕೊ, ‘ನಾಯಿಗಳು ಮತ್ತು ಜನರ ಪ್ರತಿಕ್ರಿಯೆಗಳು’ ಎಂಬ ಶೀರ್ಷಿಕೆಯ ಯೂಟ್ಯೂಬ್‌ನಲ್ಲಿ ನಾಯಿಯಾಗಿದ್ದ ತಮ್ಮ ಜೀವನದ ಅನುಭವವನ್ನು  ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ನಾಯಿ ವೇಷದಲ್ಲಿ ಪಾರ್ಕ್‌ನಲ್ಲಿ ಅಡ್ಡಾಡುವುದನ್ನು ನೋಡಬಹುದು. ನಾಯಿಯನ್ನು ನೋಡಿ ಕೆಲವೊಬ್ಬರು ಪ್ರೀತಿ ಮಾಡಿದರೆ, ಇನ್ನು ಕೆಲವರು ತುಂಬಾ ಕೆಟ್ಟದಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಟೊಕೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ. 

ಒಟ್ನಲ್ಲಿ ಶ್ವಾನವಾಗಬೇಕೆಂದು ಆಸೆ ಪಟ್ಟವನಿಗೆ ಈ ನಾಯಿ ಪಾಡು ಸಾಕಪ್ಪಾ ಸಾಕು ಅನಿಸಿದೆ. ಜಗತ್ತಿನಲ್ಲಿ ಹೊತ್ತಿನ ಊಟ ಮಾಡೋಕು ದುಡ್ಡಿಲ್ಲದೆ ಅದೆಷ್ಟೋ ಮಂದಿ ನರಳುತ್ತಿದ್ದಾರೆ. ಹೀಗಾಗಿ ಉತ್ತಮ ಮನುಷ್ಯನಾಗೋದು ಬಿಟ್ಟು ನಾಯಿಯಾಗಬೇಕೆಂಬ ಆಸೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡುವ ಇಂಥವರನ್ನು ನೋಡಿದ್ರೆ ಇವ್ರಿಗೆ ತಲೆಗೆ ಕೆಟ್ಟಿದ್ಯಾ, ಇಲ್ಲಾ ನಾವೇ ಸರಿಯಿಲ್ವಾ ಅಂತ ಕನ್‌ಫ್ಯೂಸ್ ಆಗ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ದಿನಾಂಕದಂದು ಹುಟ್ಟಿದ ಹುಡುಗೀರು ಸಣ್ಣ ವಿಷ್ಯಕ್ಕೂ ತಲೆಕೆಡಿಸಿಕೊಳ್ತಾರೆ: ಇವ್ರ ಲವ್ ಸ್ಟೋರಿ ಕಷ್ಟ!
ಮಧುರ ಚುಂಬನಂ ದಂತ ಭಗ್ನಂ: ಲಿಫ್ಟ್‌ನಲ್ಲಿ ಅಜ್ಜಿಗೆ ಅಜ್ಜ ಕಿಸ್ ಕೊಡುವಾಗ ನಡದೇ ಹೋಯ್ತು ಘನಘೋರ ದುರಂತ