ಫೀಲ್ ಫ್ರೀ: ಮಹಿಳೆಯರೂ ಹಸ್ತ ಮೈಥುನ ಮಾಡ್ತಾರಾ?

By Suvarna NewsFirst Published Jan 20, 2020, 12:46 PM IST
Highlights

ಹುಡುಗಿಯರು ಹಸ್ತಮೈಥುನ ಮಾಡ್ಕೊಳ್ಳೋದು ತಪ್ಪಾ? ನಾನೊಬ್ಬಳು ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು. ಎರಡು ವರ್ಷದಿಂದ ಹಸ್ತ ಮೈಥುನ ಮಾಡುತ್ತಿದ್ದೇನೆ. ಗೆಳತಿಯರ ಮಾತು ಕೇಳಿ ನನ್ನೊಳಗೆ ಅಪರಾಧಿ ಪ್ರಜ್ಞೆ ಮೂಡುತ್ತಿದೆ.

ಪ್ರಶ್ನೆ : ನನಗೀಗ ಇಪ್ಪತ್ತಮೂರು ವರ್ಷ ವಯಸ್ಸು, ಹುಡುಗಿ. ನಮ್ಮದು ಸಂಪ್ರದಾಯಸ್ಥ ಕುಟುಂಬ. ಮನೆಯಲ್ಲಿ ಆಚರಣೆಗಳು ಹೆಚ್ಚು. ಅದರಲ್ಲೂ ಹೆಣ್ಣು ಮಕ್ಕಳ ಬಗ್ಗೆ ಬಹಳ ಕಟ್ಟುನಿಟ್ಟು. ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲ. ನನಗೆ ಲವರ್ ಆಗ್ಲೀ ಬಾಯ್ ಫ್ರೆಂಡ್ ಆಗಲೀ ಇಲ್ಲ. ಗೆಳೆತಿಯರು ಕೆಲವರಿದ್ದಾರೆ. ಇತ್ತೀಚೆಗೆ ಅವರು ಹಸ್ತ ಮೈಥುನದ ಬಗ್ಗೆ ಮಾತನಾಡುತ್ತಿದ್ದರು. ಅದು ಕೆಟ್ಟ ಅಸಹ್ಯ, ಹಾಗೆಲ್ಲ ಮಾಡಲೇ ಬಾರದು ಅಂತ ಹೇಳ್ತಾ ಇದ್ದರು. ಅವರು ಮಾತಾಡುತ್ತಿದ್ದದ್ದು ಗಂಡಸರ ಹಸ್ತಮೈಥುನ ಬಗ್ಗೆ. ಆದರೆ ನನಗೆ ಅವತ್ತಿಂದ ಭಯ ಶುರುವಾಗಿದೆ. ನಾನು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ದಿನಾ ಅಲ್ಲದಿದ್ದರೂ ಎರಡು ದಿನಕ್ಕೊಮ್ಮೆ ಮಾಡಿಕೊಳ್ಳುವ ಅಭ್ಯಾಸ. ಇದರಿಂದ ಖುಷಿಯಾಗುತ್ತದೆ. ನನ್ನ ಸ್ಟ್ರೆಸ್ ಗಳೆಲ್ಲ ಕಡಿಮೆಯಾಗಿ ಮನಸ್ಸಿಗೆ ಹಿತವಾದ ಫೀಲ್ ಸಿಗುತ್ತಿದೆ. ಆದರೆ ಈ ವಿಷಯ ಅಪ್ಪಿತಪ್ಪಿಯೂ ಯಾರ ಬಳಿಯೂ ಬಾಯಿ ಬಿಟ್ಟಿಲ್ಲ. ಗೆಳತಿಯರ ಮಾತು ಕೇಳಿದ ಮೇಲೆ ನನಗೆ ಭಯ ಶುರುವಾಗಿದೆ. ನನ್ನೊಳಗೇ ಅಪರಾಧಿ ಪ್ರಜ್ಞೆ ಶುರುವಾಗಿದೆ. ಇದರಿಂದ ಹೊರಬರೋದು ಸಾಧ್ಯವಾಗುತ್ತಿಲ್ಲ. ದಯಮಾಡಿ ಹೇಳಿ, ನಮ್ಮಲ್ಲಿ ಬೇರೆ ಮಹಿಳೆಯರು ಹಸ್ತಮೈಥುನ ಮಾಡುತ್ತಾರಾ? ನಾನೀಗ ಮಾಡುತ್ತಿರುವುದು ತಪ್ಪಾ? ಹಾಗಿದ್ದರೆ ಇದರಿಂದ ಹೊರಬರುವುದು ಹೇಗೆ?

ವೀರ್ಯ ಸ್ಖಲನವಾದರೆ ತೊಂದರೆ ಇಲ್ಲವೇ?

ಉತ್ತರ - ನಿಮ್ಮ ಗೊಂದಲಗಳನ್ನು ಇಲ್ಲಾದರೂ ಮುಕ್ತವಾಗಿ ತೆರೆದಿಟ್ಟೀದ್ದೀರಲ್ಲಾ, ಅದು ಒಳ್ಳೆಯ ಬೆಳವಣಿಗೆ. ಎಷ್ಟೋ ಜನರಿಗೆ ನಿಮ್ಮ ಹಾಗೆ ಲೈಂಗಿಕತೆ ಬಗ್ಗೆ ಗೊಂದಲಗಳಿರುತ್ತವೆ. ಮನೆಯಲ್ಲಿ ಆ ಬಗ್ಗೆ ಮಾತಾಡುವ ವಾತಾವರಣ ಇರಲ್ಲ. ಗೆಳತಿಯರಲ್ಲಿ ಹೇಳಿದರೆ ಅವರು ಬೇರೆ ಯಾರ ಬಳಿಯಾದರೂ ಹೇಳಬಹುದು ಅನ್ನುವ ಆತಂಕ. ಇರಲಿ ಈಗ ನಿಮ್ಮ ಪ್ರಶ್ನೆಗೆ ಬರೋಣ. ಹಸ್ತಮೈಥುನ ಅನ್ನುವುದು ಗಂಡು ಹೆಣ್ಣಿನ ಲೈಂಗಿಕತೆಗೆ ಪರ್ಯಾಯವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಅಂದರೆ ಸಂಗಾತಿ ಜೊತೆಯಲ್ಲಿ ಇಲ್ಲದವರು ಲೈಂಗಿಕತೆ ಕೆರಳಿದಾಗ ಹಸ್ತಮೈಥುನದಂಥಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇಷ್ಟು ಹೇಳಿದಾಗ ನಿಮಗೆ ಅರ್ಥ ಆಗಿರಬಹುದು, ಇದು ಅಪರಾಧ ಅಲ್ಲ ಅಂತ. ನಿಮ್ಮ ಇನ್ನೊಂದು ಪ್ರಶ್ನೆ ನಮ್ಮಲ್ಲಿ ಬೇರೆ ಮಹಿಳೆಯರೂ ಹಸ್ತಮೈಥುನ ಮಾಡಿಕೊಳ್ಳುತ್ತಾರಾ ಅಂತ. ಲೈಂಗಿಕ ಬಯಕೆ ಗಂಡಿಗೆ ಮಾತ್ರ ಸೀಮಿತ ಅಲ್ಲವಲ್ಲಾ, ಅವನಷ್ಟೇ ಅವಳಿಗೂ ಲೈಂಗಿಕಾಸಕ್ತಿ ಇರುತ್ತದೆ, ಲೈಂಗಿಕಾಸಕ್ತಿ ಹುಡುಗನಿಗೆ ಹೆಚ್ಚೋ ಹುಡುಗಿಗೆ ಹೆಚ್ಚೋ ಅಂತ ಮೌಲ್ಯಮಾಪನ ಮಾಡೋದಂತೂ ಸಾಧ್ಯ ಇಲ್ಲವಲ್ಲ. ಹಾಗಿರುವಾಗ ಜಗತ್ತಿನ ಎಲ್ಲ ಕಡೆಯೂ ಮಹಿಳೆಯರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಅವಳು ಪೂರಕ ವಾತಾವರಣ ಇಲ್ಲದ ಕಾರಣ ಇದನ್ನು ಮುಕ್ತವಾಗಿ ಹೇಳಿಕೊಳ್ಳಲು ಆಗುತ್ತಿಲ್ಲ. ನೀವು ಈಗ ಮಾಡುತ್ತಿರುವುದು ತಪ್ಪಲ್ಲ. ಇದರಿಂದ ಮನಸ್ಸಿಗೆ ಖುಷಿ ಸಿಗೋದರ ಜೊತೆಗೆ ಒತ್ತಡ ನಿವಾರಣೆ ಆಗುವುದು ಹೌದು ಎಂಬುದು ವೈಜ್ಞಾನಿಕವಾಗಿಯೂ ಧೃಢಪಟ್ಟಿದೆ. ಈ ಅಭ್ಯಾಸದಿಂದ ಕೆಲವೊಂದು ಸಮಸ್ಯೆಗಳೂ ಆಗುತ್ತವೆ. ಹಸ್ತಮೈಥುನದಲ್ಲಿ ಖುಷಿ ಕಂಡ ನಿಮಗೆ ಮದುವೆಯಾದ ಮೇಲೆ ಸಂಗಾತಿಯ ಜೊತೆಗೆ ಮಾಡುವ ಲೈಂಗಿಕತೆಯಲ್ಲಿ ಖುಷಿ ಸಿಗದೇ ಹೋಗಬಹುದು, ಆಗ ಇದರಿಂದ ನಿಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹಾಗಾದ ಕಾರಣ ಹಸ್ತಮೈಥುನ ಮಾಡಿದರೂ ಅದನ್ನು ಚಟವಾಗಿಸಿಕೊಳ್ಳಬೇಡಿ. ಈಗಾಗಲೇ ಚಟವಾಗಿದ್ದರೆ ಅದರಿಂದ ಹೊರಬರಲು ಪ್ರಯತ್ನಿಸಿ.

ವಾರಕ್ಕೊಮ್ಮೆ ಸೆಕ್ಸ್ ಮಾಡೋರಿಗೆ ಮೆನೋಪಾಸ್ ದೂರ

 

ಪ್ರಶ್ನೆ : ನಾನು ಇತ್ತೀಚೆಗೆ ಪೋರ್ನ್ ವೀಡಿಯೋ ನೋಡಿದೆ. ಅದರಲ್ಲಿ ಅವರು ನಿಮಿಷಗಟ್ಟಲೆ ಬೇರೆ ಬೇರೆ ಭಂಗಿಯಲ್ಲಿ ಸೆಕ್ಸ್ ಮಾಡುತ್ತಿರುತ್ತಾರೆ. ಅದನ್ನು ಕಂಡಾಗ ನಾವು ಮಾಡುತ್ತಿರುವ ಲೈಂಗಿಕತೆ ಬಗ್ಗೆ ಅನುಮಾನ ಬರಲು ಶುರುವಾಗಿದೆ. ನಮಗೆ ಅಷ್ಟು ಹೊತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗೋದು ಸಾಧ್ಯವಾಗಲ್ಲ. ಬೇಗ ವೀರ್ಯ ಹೊರಬರುತ್ತೆ. ಲೈಂಗಿಕತೆಯನ್ನು ಬಹಳ ಕಾಲ ಮಾಡಲು ಏನಾದರೂ ಔಷಧಗಳಿವೆಯೇ?
 

ನೀವು ನೋಡಿದ ಪೋರ್ನ್ ನಲ್ಲಿ ಸೆಕ್ಸ್ ನ ವೈಭವೀಕರಣ ಇದೆ. ಅದು ರಿಯಲ್ ಅಲ್ಲ ಅನ್ನೋದು ಗೊತ್ತಿರಲಿ. ಮುನ್ನಲಿವಿನಲ್ಲಿ ಜಾಸ್ತಿ ಹೊತ್ತು ತೊಡಗಿಸಿಕೊಳ್ಳೋದು, ಲೈಂಗಿಕ ಕ್ರಿಯೆ ಒಮ್ಮೆಲೇ ಮಾಡುವ ಬದಲು ಆಗಾಗ ಬ್ರೇಕ್ ಕೊಟ್ಟು ಮಾಡುವುದು ಇತ್ಯಾದಿಗಳಿಂದ ಲೈಂಗಿಕ ಕ್ರಿಯೆ ಕ್ಷಿಪ್ರವಾಗಿ ಆಗೋದನ್ನು ತಡೆಯಬಹುದು. ಆದರೆ ಪೋರ್ನ್ ವೀಡಿಯೋದಲ್ಲಿ ಕಂಡ ಲೈಂಗಿಕ ದೃಶ್ಯಗಳಲ್ಲಿ ವೈಭವೀಕರಣವೇ ಹೆಚ್ಚು, ವಾಸ್ತವ ಕಡಿಮೆ ಅನ್ನೋದು ಗೊತ್ತಿರಲಿ.

click me!