ಬಾಲಿವುಡ್, ಹಾಲಿವುಡ್ ಚಿತ್ರಗಳನ್ನು ನೋಡಿ ಬೋಲ್ಡ್ ಆಗುವ ಯುವ ಮನಸ್ಸುಗಳಿಗೆ ಕೆಲವೊಂದು ಹುಚ್ಚು ಆಸೆಗಳಿರುತ್ತವೆ. ಕೆಲವು ಆಸೆಗಳನ್ನು ಈಡೇರಿಸಿಕೊಳ್ಳುವಾಗ ಮುಂಜಾಗ್ರತಾ ಕ್ರಮಗಳೂ ಅಗತ್ಯ. ಅದರಲ್ಲಿಯೂ ಹೆಚ್ಚು ಸಮಸ್ಯೆ ಎದುರಿಸುವ ಹೆಣ್ಣು ಹುಷಾರಾಗಿರಬೇಕು.
ಕಳೆದ ವರ್ಷ ಬಾಲಿವುಡ್‌ನ ಅತಿಲೋಕ ಸುಂದರಿ ದುಬೈ ಹೊಟೇಲ್‌ನ ಬಾತ್‌ಟಬ್‌ನಲ್ಲಿ ಅನುಮಾನಸ್ಪಾದವಾಗಿ ಕೊನೆಯುಸಿರೆಳೆದರು. ಆಗ, ಬಾತ್ ಟಬ್ ಸಾವಿನ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಅದರಲ್ಲಿಯೂ ಅಮೆರಿಕದಲ್ಲಿ ಇಂಥ ಸಾವು ಆಗಾಗ ಸಂಭವಿಸುತ್ತವೆ ಎಂಬೊಂದು ವರದಿ ಪ್ರಕಟವಾಗಿತ್ತು.
ಬೆಚ್ಚಗಿನ ನೀರು, ಕೂತರೆ ಜರ್ರ ಎಂದು ಜಾರುವ ಬಾತ್ ಟಬ್, ಮೈಗಂಟಿದ ಸೋಪ್ ಫೋಮ್ ಎಲ್ಲವೂ ಜೀವನವನ್ನು ಹೆಚ್ಚು ರೊಮ್ಯಾಂಟಿಕ್ ಆಗಿ ಮಾಡುತ್ತದೆ. ಆದರೆ, ಇವೆಲ್ಲ ತೆರೆ ಮೇಲೆ ಕಂಡಷ್ಟು ನಿಜ ಜೀವನದಲ್ಲಿ ಅಪ್ಲೈ ಮಾಡ್ಲಿಕ್ಕಾಗೋಲ್ಲ. ಅಕಸ್ಮಾತ್ ಇಂಥ ಸಾಹಸಕ್ಕೆ ಕೈ ಹಾಕುವುದಾದರೆ ಕೆಲವು ಮುಂಜಾಗ್ರತಾ ಕ್ರಮಗಳು ಅತ್ಯಗತ್ಯ.
ಅವನ ಕಣ್ಣಿಗೆ ಬಿದ್ದ ಇವಳು, ಮನಸ್ಸಿನಲ್ಲಿ ನಿಲ್ಲದ ತಳಮಳ!