
ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಮೊಟ್ಟೆ ಸಸ್ಯಾಹಾರಿಯೋ, ಮಾಂಸಹಾರಿಯೋ ಎಂಬುವ ವಾದವಿದ್ದು, ಸಸ್ಯಾಹಾರಿಗಳೂ ಮೊಟ್ಟೆಯನ್ನು ತಿನ್ನುತ್ತಾರೆ. ಅವರವರ ಇಷ್ಟದಂತೆ ಬಿಳಿ ಭಾಗ ಅಥವಾ ಹಳದಿ ಭಾಗವನ್ನು ಆರಿಸಿಕೊಳ್ಳುತ್ತಾರೆ.
ಕ್ಯಾಲ್ಷಿಯಂ, ಮಿಟಮಿನ್, ಪ್ರೊಟೀನ್ಸ್ ಇರುವ ಈ ಮೊಟ್ಟೆಯಿಂದ ಹೃದಯಕ್ಕೂ ತೊಂದರೆಯಾಗಬಹುದು. ಹಾಗಾದರೆ ಮೊಟ್ಟೆ ತಿನ್ನುವವರ ಗತಿ??
JAMA ಜರ್ನಲ್ ನಡೆಸಿದ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 300 ಗ್ರಾಂ ಕೊಲೆಸ್ಟ್ರಾಲ್ ಇರುವ ಆಹಾರ ಸೇವಿಸಬೇಕು. ಇಲ್ಲವಾದರೆ ಹೃದಯ ಸಂಬಂಧಿ ಕಾಯಿಲೆ ಕಾಡಬಹುದು. ಒಂದು ಮೊಟ್ಟೆ ತಿಂದರೆ ಅದರಲ್ಲಿ ದೇಹಕ್ಕೆ ಬೇಕಾದಷ್ಟು ಕೊಬ್ಬಿನಾಂಶವೂ ಇರುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮೊಟ್ಟೆಯ ಬಿಳಿ ಭಾಗ ಬೆಸ್ಟೋ, ಹಳದಿಯೋ?
ಬಾಯಲ್ಡ್ ಅಥವಾ ಫ್ರೈಡ್ ಎಗ್‌ನಲ್ಲಿ ಯಾವುದೊಳ್ಳೆಯದು? ಬಾಯಲ್ಡ್‌ನಲ್ಲಿ ತುಸು ಫ್ಯಾಟ್ ಅಂಶ ಕಡಿಮೆ. ಅಂದರೆ ಮೊಟ್ಟೆ ಆರೋಗ್ಯಕ್ಕೆ ಒಳಿತು. ಅದರಲ್ಲಿಯೂ ದಿನಕ್ಕೊಂದು ತಿಂದರೆ ಸಾಕು. ಆದರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ ಈ ಸಂಶೋಧನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.