ಗರ್ಭದಲ್ಲಿ ಗಾಳಕ್ಕೆ ಸಿಕ್ಕ ಮೀನಂತೆ ಮಗು ಮಿಸುಗಾಡುವುದೇಕೆ?

By Web DeskFirst Published Apr 22, 2019, 3:04 PM IST
Highlights

ಗರ್ಭದೊಳಗೆ ಜೀವವೊಂದು ಟಿಸಿಲಿಡೊಯುತ್ತಿದೆ ಎಂಬುವುದು ಗೊತ್ತಾದಗಲೇ ಏನೋ ಸಂಭ್ರಮ. ವರ್ಣಿಸಲು ಅಸಾಧ್ಯವಾದ ಸಂತೋಷ. ಅದರಲ್ಲಿಯೂ ಮೊದಲ ಬಾರಿ ಮಿಸುಕಾಡಿದಾಗ ಸಿಗೋ ಸಂತೋಷ ವರ್ಣಿಸಲಸದಳ. ಅಷ್ಟಕ್ಕೂ ಮಗುವೇಕೆ ಒದೆಯುತ್ತದೆ?

ಅಮ್ಮನಾಗುತ್ತಿರುವ ಹೆಣ್ಣಿಗೆ ಹೊಟ್ಟೆಯಲ್ಲಿರುವ ಜೀವದ ಬಗ್ಗೆ ಎಲ್ಲಿಲ್ಲದ ಕಾಳಜಿ. ಮೊದ ಮೊದಲು ಮಿಸುಗಾಡಲು ಆರಂಭಿಸಿದಾಗ ಸಂತೋಷದ ಜತೆ, ಏನೋ ಆತಂಕ. ಏನಾಯಿತೋ ಎಂಬ ಭಯ. ಅಷ್ಟಕ್ಕೂ ಮಗು ಗರ್ಭದೊಳಗೇ ಒದ್ದಾಡುವುದೇಕೆ?

ವೈಜ್ಞಾನಿಕ ವರದಿ ಪ್ರಕಾರ ತಾಯಿ ಹೊಟ್ಟೆಯೊಳಗೆ ಮಗು ಒದೆಯುವುದರಿಂದ ತನ್ನ ದೇಹದ  ಅಂಗಗಳ ಬಗ್ಗೆ ತಿಳಿದುಕೊಳ್ಳುತ್ತದೆ. ಇಂಥದ್ದೊಂದು ಸಂಶೋಧನೆಗೆ 19 ಗರ್ಭಿಣಿಯರನ್ನು ಬಳಸಿಕೊಳ್ಳಲಾಗಿತ್ತು. ಗರ್ಭದೊಳಗಿನ ಮಗುವಿನ ರ‍್ಯಾಪಿಡ್ ಬ್ರೈನ್ ಮೂವ್‌ಮೆಂಟ್ (ನಿದ್ರಾ) ವೇಳೆ ನರಗಳು ಮೆದುಳಿಗೆ ಸಂದೇಶ ನೀಡುತ್ತಿರುತ್ತದೆ. ಆಗ ಮಕ್ಕಳು ಕೈ-ಕಾಲು ಅಲುಗಾಡಿಸುತ್ತವೆ. 

ತಾಯ್ತನ ಫೀಲ್ ಮಾಡಿಕೊಳ್ಳಬೇಕಾ? 2ನೇ ಮಗುವಿನ ಬಗ್ಗೆ ಯೋಚಿಸಿ...!

ಮಕ್ಕಳು 10ನೇ ವಾರದಲ್ಲಿದ್ದಾಗ ತಾಯಂದಿರಿಗೆ ಈ ಮೂವ್‌ಮೆಂಟ್ಸ್ ಹೆಚ್ಚು ಅನುಭವಕ್ಕೆ ಬರುತ್ತದೆ. ಹೊಟ್ಟೆಗೆ ಹೆಚ್ಚು ಒದೆಯುತ್ತಿದರೆ, ಮಗು ಪೂರ್ತಿ ಬೆಳವಣೆಗೆಯಾಗಿದೆ ಎಂದರ್ಥ. ಹೆಚ್ಚು  ಬೆಳವಣಿಗೆಯಾದರೂ ಗರ್ಭದೊಳಗೆ ಜಾಗ ಸಾಲದೇ ಮಕ್ಕಳು ಹೆಚ್ಚು ಮಿಸುಕಾಡುತ್ತವೆ. ಅಲ್ಲದೇ ಅತಿ ಹೆಚ್ಚಾಗಿ ಕೈ- ಕಾಲು ಅಲುಗಾಡಿಸುವುದರಿಂದ ಮಕ್ಕಳ ಮೂಳೆ ಹಾಗೂ ಸ್ನಾಯುಗಳು ಗಟ್ಟಿಗೊಳ್ಳುತ್ತವೆ.

ಅಕಸ್ಮಾತ್ ದಿನಕ್ಕೆ ಕನಿಷ್ಠ ಐದಾರು ಸಾರಿ ಮಗುವಿನ ಮಿಸುಕಾಡುವಿಕೆ ಅನುಭವಕ್ಕೆ ಬಾರದೇ ಹೋದಲ್ಲಿ ವೈದ್ಯರ ಬಳಿ ಹೋಗುವುದು ಒಳಿತು.

click me!