
ರೆಡ್ ಸೀ ಬೀಚ್ ಅಥವಾ ಕೆಂಪು ಸಮುದ್ರವನ್ನು ನೋಡಬೇಕು ಎಂದರೆ ನೀವು ಚೀನಾಕ್ಕೆ ಹೋಗಬೇಕು. ಹೌದು ಚೀನಾದ ಪಂಜಿನ್‌ನಲ್ಲಿದೆ ಕೆಂಪು ಸಮುದ್ರ. ಇದನ್ನು ನೋಡುವುದೇ ಕಣ್ಣಿಗೆ ಒಂಥರಾ ಹಬ್ಬ. ಹಬ್ಬ ಎನ್ನುವುದಕ್ಕಿಂತ ಕಡು ಕೆಂಪು ಬಣ್ಣದ, ಕಣ್ಣು ಹಾಯಿಸಿದಷ್ಟು ದೂರಕ್ಕೆ ಬರೀ ಕೆಂಪು ಬಣ್ಣ ನೋಡಲು ಖುಷಿಯಾಗುತ್ತೆ. ಅಷ್ಟಕ್ಕೂ ಈ ಕೆಂಪು ಬಣ್ಣದ ರಹಸ್ಯ ಏನು?
ಧಾರ್ಮಿಕತೆ, ರಹಸ್ಯದ ಒಡಲು ಯಮುನೇತ್ರಿ ಯಾತ್ರೆ!
ಈ ರೆಡ್ ಸೀಗೆ ಕೆಂಪು ಬಣ್ಣ ಬರಲು ಕಾರಣ ಅಲ್ಲಿ ಬೆಳೆಯುವ ಸುಯೆಡ ಎಂಬ ಹುಲ್ಲು. ಈ ಹುಲ್ಲು ಸಾಗರದಂತೆ ಉದ್ದಕ್ಕೂ ಬೆಳೆದು ಚೀನಾ ನಗರಕ್ಕೊಂದು ವಿಭಿನ್ನ ಸೌಂದರ್ಯವನ್ನು ನೀಡಿದೆ. ಜೊತೆಗೆ ಇಲ್ಲಿಗೆ ವಲಸೆ ಬರುವ ಬೇರೆ ಬೇರೆ ಜಾತಿ ಪಕ್ಷಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.
ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!
ಶರತ್ಕಾಲ ಆರಂಭವಾದರೆ ಸಾಕು ಸುಮಾರು 26 ಕಿ.ಮೀ ದೂರದವರೆಗಿನ ತಾಣ ಕೆಂಪಾಗುತ್ತದೆ. ಅಂದರೆ ಕೆಂಪು ಹುಲ್ಲು ಬೆಳೆಯುತ್ತದೆ. ಈ ಅತ್ಯದ್ಭುತ ರೆಡ್ ಸೀ ಬೀಚ್ ಲಿಯವೊಹೆ ನದಿ ತಟದಲ್ಲಿದೆ. ಶರತ್ಕಾಲದಲ್ಲಿ ಈ ನದಿತೀರ ಪೂರ್ತಿಯಾಗಿ ಸೀಪ್ ವೀಡ್‌ನಿಂದಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಬೇಸಿಗೆ ಕಾಲದವರೆಗೆ ಇದು ಹೀಗೆ ಇರುತ್ತದೆ. ಬೇಸಿಗೆಯಲ್ಲಿ ಮತ್ತೆ ಹಸಿರು ಬಣ್ಣಕ್ಕೆ ಬದಲಾಗುತ್ತದೆ.
ಈ ತಾಣಕ್ಕೆ ಪ್ರತಿವರ್ಷ 236 ಪ್ರಭೇದದ ವಲಸೆ ಹಕ್ಕಿಗಳೂ ಬರುತ್ತವೆ. ಈ ಸುಂದರ ದೃಶ್ಯ ನೋಡಲು ರೆಡ್ ಸೀ ನಡುವೆ ಸೇತುವೆ ನಿರ್ಮಿಸಲಾಗಿದೆ. ಅಲ್ಲಿಂದ ನೀವು ಇದನ್ನು ಕಣ್ತುಂಬಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.