
ವರ್ಕ್‌ಔಟ್ ಎಂದ ಮೇಲೆ ಬೆವರು, ಕೊಳೆ ಸಾಮಾನ್ಯ. ಅವುಗಳ ನಿರ್ವಹಣೆಗೆ ಉತ್ತಮ ಇನ್ನರ್‌ವೇರ್ ಬಳಕೆ ಬಗ್ಗೆ ಸ್ವಲ್ಪ ಗಮನ ಕೊಡಲೇಬೇಕು. ಅಷ್ಟೇ ಅಲ್ಲ, ಕಸರತ್ತು ನಡೆಸುವಾಗ ದೇಹದ ಖಾಸಗಿ ಭಾಗಗಳತ್ತ ಯಾರ ಗಮನವೂ ಹೋಗದಂತೆ ನೋಡಿಕೊಳ್ಳವಲ್ಲಿಯೂ ಇನ್ನರ್‌ವೇರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು ಬಟ್ಟೆಯು ಸ್ಮೂತ್ ಹಾಗೂ ಸ್ಟ್ರೆಚೇಬಲ್ ಅಲ್ಲದಿದ್ದರೆ, ವರ್ಕ್‌ಔಟ್ ಸಂದರ್ಭದಲ್ಲಿ ಕೈಕಾಲು ಆಡಿಸಲು ತಡೆ ಬಂದಂತೆ ಆಗುತ್ತದೆ. ಹಾಗಿದ್ದರೆ ವರ್ಕ್‌ಔಟ್‌ಗೆ ಎಂಥಾ ಇನ್ನರ್‌ವೇರ್ ಧರಿಸಬೇಕು?
ಯುವತಿಯರಿಗೆ
- ಸ್ಪೋರ್ಟ್ಸ್ ಬ್ರಾ ಧರಿಸಿರಲೇ ಬೇಕು. ಇದರಿಂದ ಬೌನ್ಸ್ ತಪ್ಪಿಸಬಹುದು. ಜೊತೆಗೆ ಎದೆ ನೋವು ಹಾಗೂ ಟಿಶ್ಯೂಗೆ ಅಪಾಯವಾಗದಂತೆ ಇದು ನೋಡಿಕೊಳ್ಳುತ್ತದೆ.
- ಸ್ಪೋರ್ಟ್ಸ್ ಬ್ರಾಗಳಲ್ಲಿ ಕಡಿಮೆಯಿಂದ ಹೆಚ್ಚು ಸಪೋರ್ಟ್ ನೀಡುವಂಥವು ಸಿಗುತ್ತವೆ. ನೀವು ಮಾಡುವ ವರ್ಕ್‌ಔಟ್‌ಗೆ ಅನುಗುಣವಾಗಿ ಸಪೋರ್ಟಿಂಗ್ ಬ್ರೇಸಿಯರ್ಸ್ ಕೊಂಡುಕೊಳ್ಳಿ.
- ಅಂಡರ್‌ವೇರ್ ಹೆಚ್ಚು ಸ್ಟ್ರೆಚೇಬಲ್ ಆಗಿದ್ದು, ಬೆವರನ್ನು ಹೀರುವಂಥ ಮೆಟೀರಿಯಲ್ ಆಗಿರಲಿ. ರನ್ನಿಂಗ್, ಟ್ರೇನಿಂಗ್ ಹಾಗೂ ವರ್ಕ್‌ಔಟ್‌ಗಾಗಿಯೇ ವಿಶೇಷ ಅಂಡರ್‌ವೇರ್‌ಗಳು ದೊರೆಯುತ್ತವೆ. ಇವನ್ನು ಆ್ಯಕ್ಟಿವ್ ಇನ್ನರ್‌ವೇರ್ ಎನ್ನುತ್ತಾರೆ. ಇವುಗಳಲ್ಲಿ ಗಾಳಿಯಾಡಬಲ್ಲಂಥ ಬಟ್ಟೆ ಬಳಸಿರುತ್ತಾರೆ. ಹಾಗೂ ಹೊರಗಿನ ಲೈನಿಂಗ್ ಪ್ಯಾಂಟ್‌ನ ಮೇಲಿಂದ ಕಾಣದಂತೆ ತೆಳುವಾಗಿರುತ್ತದೆ.
ಯುವಕರಿಗೆ
- ಜಿಮ್‌ನಲ್ಲಿರುವಾಗ ಸಪೋರ್ಟ್ ಮಾಡುವಂಥ ಇನ್ನರ್‌ವೇರ್ ಧರಿಸಬೇಕು. ಯುವಕರಿಗೆ ಸರಿ ಹೊಂದುವಂಥ ವರ್ಕ್‌ಔಟ್ ಇನ್ನರ್‌ವೇರ್ ಎಂದರೆ ಸ್ವಿಮ್ಮರ್ಸ್. ಒಗೆಯಲೂ ಸುಲಭ, ಬೇಗ ಒಣಗುತ್ತದೆ ಹಾಗೂ ಹೆಚ್ಚು ಸಡಿಲವೂ ಅಲ್ಲದೆ, ಹೆಚ್ಚು ಬಿಗಿತವೂ ಅಲ್ಲದೆ ಸರಿಯಾಗಿರುತ್ತದೆ.
- ಕಾಂಟರ್ ಪೌಚ್ ಇರುವಂಥ ವರ್ಕ್‌ಔಟ್ ಬ್ರೀಫ್‌ಗಳನ್ನೂ ಟ್ರೈ ಮಾಡಬಹುದು. ಇವನ್ನು ಒದ್ದೆಯನ್ನು ಹೀರಿಕೊಳ್ಳುವಂತೆ ಹಾಗೂ ಸ್ಟ್ರೆಚೇಬಲ್ ಆಗಿರುವಂತೆ ತಯಾರಿಸಲಾಗಿರುತ್ತದೆ.
- ಮಾರುಕಟ್ಟೆಯಲ್ಲಿ ಹೊಸತಾಗಿರುವ ಆ್ಯಕ್ಟಿವ್ ಇನ್ನರ್‌ವೇರ್‌ಗಳನ್ನು ಕೂಡಾ ಬಳಸಿ ನೋಡಿ.
ಆರೋಗ್ಯ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇಷ್ಟೆಲ್ಲ ಸರಿಯಾದ ಇನ್ನರ್‌ವೇರ್ ಬಳಕೆಯ ಹೊರತಾಗಿಯೂ, ವರ್ಕ್‌ಔಟ್ ಆಗುತ್ತಿದ್ದಂತೆ ಅವನ್ನು ಬದಲಿಸುವುದು ಹಾಗೂ ಸ್ನಾನ ಮಾಡುವುದು ಮುಖ್ಯ. ಏಕೆಂದರೆ, ಹೆಚ್ಚು ಹೊತ್ತು ಬೆವರಿನ ಬಟ್ಟೆ ಧರಿಸಿದಷ್ಟೂ ದೇಹ ಪಿಎಚ್ ಬ್ಯಾಲೆನ್ಸ್ ಕಳೆದುಕೊಳ್ಳುತ್ತದೆ. ಅಲ್ಲದೆ, ದೇಹದಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಬೆಳವಣಿಗೆಗೆ ಕೂಡಾ ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.