
ಸ್ಯಾನಿಟರಿ ಪ್ಯಾಡ್‌ಗಳನ್ನು ದೇಹದ ಬಹಳ ಸೆನ್ಸಿಟಿವ್ ಸ್ಥಳದಲ್ಲಿ ಬಳಸುತ್ತೇವೆ. ಆದರೆ, ಅವು ಎಕ್ಸ್‌ಪೈರ್ ಆಗುತ್ತವೆ ಎಂಬುದು ತಿಳಿದಿಲ್ಲದೆ, ಸುಮ್ಮನೇ ಪೇಪರ್‌ನಲ್ಲಿ ಸುತ್ತಿ ಕೊಟ್ಟದ್ದನ್ನು ತಂದು, ಹಳಸಿದ ಮೇಲೆ ಬಳಸಿದರೆ ಬಹಳಷ್ಟು ಅಪಾಯಗಳಿವೆ. ಏನು ಸ್ಯಾನಿಟರಿ ಪ್ಯಾಡ್‌ಗಳೂ ಎಕ್ಸ್‌ಪೈರಿ ಆಗ್ತಾವಾ ಎಂದು ಹಲವರಿಗೆ ಆಶ್ಚರ್ಯ ಆಗಬಹುದು.
ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ
ಹೌದು ಎನ್ನುತ್ತಾರೆ ಡಾಕ್ಟರ್ಸ್. ಸಾಮಾನ್ಯವಾಗಿ ಮ್ಯಾನುಫ್ಯಾಕ್ಚರ್ ಆದ ಐದು ವರ್ಷಗಳ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಬಳಸಲು ಯೋಗ್ಯವಲ್ಲ ಎನ್ನುತ್ತಾರೆ ವೈದ್ಯರು.
ಮನೆಯ ಅಡುಗೆಕೋಣೆಯಲ್ಲಿ ಎಲ್ಲೋ ಮೂಲೆಯಲ್ಲಿ ಕುಳಿತು, ಅಲ್ಲೇ ಮೂರ್ನಾಲ್ಕು ವರ್ಷ ಸವೆಸಿ ಹೊರಬಂದ ಟೀ ಬ್ಯಾಗ್‌ಗಳು ಹೇಗೆ ಚುಕ್ಕೆ ಚುಕ್ಕೆಯಾಗಿ ಹಾಳಾಗಿರುತ್ತವೆಯೋ ಅಂತೆಯೇ ಫಂಗಸ್ ಪ್ಯಾಡ್‌ಗಳ ಮೇಲೆ ಕೂಡಾ ಬೆಳೆಯಬಹುದು. ಇವು ಹಲವು ಬಾರಿ ಚುಕ್ಕೆಯಂಥ ಕಲೆಗಳಾಗದೆ ಕಣ್ಣಿಗೆ ಗೋಚರವಾಗದೆ ಹೋಗಬಹುದು. ಇದೇನನ್ನೂ ಗಮನಿಸದೆ, ಇಂಥ ಪ್ಯಾಡ್‌ಗಳನ್ನು ಬಳಸಿದಾಗ ಫಂಗಲ್ ಇನ್ಫೆಕ್ಷನ್‌ನಿಂದಾಗಿ ಹಲವಾರು ಇತರೆ ಆರೋಗ್ಯ ಸಮಸ್ಯೆಗಳು ಬರಬಹುದು.
ಮೆನ್‌ಸ್ಟ್ರುವಲ್ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?
ಇನ್ನೂ ಹಲವು ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಎರಡು ವರ್ಷಕ್ಕೇ ಎಕ್ಸ್‌ಪೈರ್ ಆಗಬಹುದು. ಆದರೆ ಮೆಡಿಸಿನಲ್ ಸಿರಿಂಜ್‌ಗಳಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ಸ್ಟೆರೈಲ್ ಮಾಡಿಡಲು ಬರುವುದಿಲ್ಲ. ಹೀಗಾಗಿ, ಪ್ರತಿ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕೊಳ್ಳುವಾಗ ಎಕ್ಸ್‌ಪೈರಿ ಡೇಟ್ ನೋಡುವುದು ಅಗತ್ಯ. ಒಂದು ವೇಳೆ ಎಕ್ಸ್‌ಪೈರಿ ಡೇಟ್ ಇಲ್ಲದಿದ್ದಲ್ಲಿ, ಮ್ಯಾನುಫ್ಯಾಕ್ಚರ್ ಡೇಟ್ ನೋಡಿ, 2 ವರ್ಷಕ್ಕಿಂತ ಹಳೆಯದಾಗಿದ್ದರೆ ಖರೀದಿಸದಿರುವುದು ಒಳಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.