
ಮಳೆಗೆ ಶೂಗಳು ಪೂರ್ತಿ ನೆನೆದು ಹಾಳಾಗುವುದು, ಅದರಿಂದ ಕೆಟ್ಟ ವಾಸನೆ ಬರುವುದು ಸಾಮಾನ್ಯ. ಆದರೆ ಇವುಗಳನ್ನು ಒಣಗಿಸಲು ಹೇರ್ ಡ್ರೈಯರ್ ಅಥವಾ ತೀಕ್ಷ್ಣ ಬಿಸಿಲು ಬಳಸಿದರೆ ಶೂಗಳ ಆಕಾರವೇ ಕೆಡಬಹುದು. ಹಾಗಿದ್ದರೆ ಶೂಗಳನ್ನು ಸುರಕ್ಷಿತವಾಗಿ ಒಣಗಿಸುವುದು ಹೇಗೆ?
ಒಣಗಿದ ದಿನಪತ್ರಿಕೆಯ ಕಾಗದಗಳನ್ನು ಉಂಡೆ ಮಾಡಿ ಶೂಗಳ ಒಳಗೆ ಹಗುರವಾಗಿ ತುಂಬಿಸಿ. ಇದು ಒಳಗಿನ ತೇವಾಂಶವನ್ನು ಬೇಗನೆ ಹೀರಿಕೊಳ್ಳುತ್ತದೆ. ಕಾಗದ ಒದ್ದೆಯಾದಂತೆಲ್ಲಾ ಬದಲಾಯಿಸುತ್ತಿರಿ.
How To Dry Wet Shoes In Rainy Season: ಶೂಗಳನ್ನು ಫ್ಯಾನ್‌ನ ನೇರ ಗಾಳಿಗೆ ಇಡುವುದರಿಂದ ಯಾವುದೇ ಹಾನಿಯಿಲ್ಲದೆ ಅವು ಬೇಗನೆ ಒಣಗುತ್ತವೆ. ಗಾಳಿ ಒಳಗಿನವರೆಗೂ ಆಡಲು ಲೇಸ್‌ಗಳನ್ನು ಸಡಿಲಗೊಳಿಸಿ.
ಮನೆಗೆ ಬಂದ ತಕ್ಷಣ ಶೂ ಒಳಗಿನ ಇನ್ಸೋಲ್ (ಪ್ಯಾಡ್) ಮತ್ತು ಲೇಸ್‌ಗಳನ್ನು ಬಿಚ್ಚಿ ಪ್ರತ್ಯೇಕವಾಗಿ ಒಣಗಿ ಹಾಕಿ. ಇದರಿಂದ ಬ್ಯಾಡ್ ಸ್ಮೆಲ್ ಬರುವುದಿಲ್ಲ.
ಹೊಸ ಶೂ ಬಾಕ್ಸ್‌ಗಳಲ್ಲಿ ಸಿಗುವ ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಎಸೆಯದೆ ಶೂ ಒಳಗಿಟ್ಟು ರಾತ್ರಿಯಿಡೀ ಬಿಡಿ. ಇದು ಲೆದರ್ ಶೂಗಳಿಗೆ ಅತ್ಯಂತ ಸುರಕ್ಷಿತ ವಿಧಾನ.
ಶೂಗಳು ಸ್ವಲ್ಪ ಒಣಗಿದ ನಂತರ, ಒಳಗಡೆ ಸ್ವಲ್ಪ ಬೇಕಿಂಗ್ ಸೋಡಾ ಪುಡಿ ಉದುರಿಸಿ. ಇದು ತೇವಾಂಶದೊಂದಿಗೆ ಬ್ಯಾಕ್ಟೀರಿಯಾಗಳಿಂದ ಬರುವ ವಾಸನೆಯನ್ನು ನೈಸರ್ಗಿಕವಾಗಿ ಹೀರಿಕೊಳ್ಳುತ್ತದೆ.
ಒದ್ದೆ ಶೂಗಳನ್ನು ಹತ್ತಿರದಲ್ಲಿ ಹೀಟರ್ ಇಟ್ಟು ಅಥವಾ ಹೇರ್ ಡ್ರೈಯರ್‌ನ ಅತಿ ಹೆಚ್ಚಿನ ಹೀಟ್‌ನಲ್ಲಿ ಒಣಗಿಸಬೇಡಿ. ಇದರಿಂದ ಶೂಗಳು ಕುಗ್ಗುತ್ತವೆ ಮತ್ತು ಗ್ಲೂ ಬಿಟ್ಟುಕೊಳ್ಳುತ್ತದೆ.
ಮಳೆಗಾಲದಲ್ಲಿ ದಿನವೂ ಒಂದೇ ಶೂ ಬಳಸುವ ಬದಲು, ಎರಡು ಜೋಡಿಗಳನ್ನು ದಿನಬಿಟ್ಟು ದಿನ ಬಳಸಿ. ಇದರಿಂದ ಒಂದು ಜೋಡಿಗೆ ಒಣಗಲು ಪೂರ್ತಿ ಸಮಯ ಸಿಗುತ್ತದೆ.
ಈ ಸರಳ ಉಪಾಯಗಳಿಂದ ಮಳೆಗಾಲದಲ್ಲೂ ನಿಮ್ಮ ಶೂಗಳು ಸದಾ ಫ್ರೆಶ್ ಆಗಿರುತ್ತವೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.