ಚಳಿಗಾಲದಲ್ಲಿ ಮಂಡಿನೋವು ತಡೆಯೋದು ಹೇಗೆ?

By Web DeskFirst Published Jan 8, 2018, 9:16 PM IST
Highlights

ಬೇಸಿಗೆಯಲ್ಲಿ ತಲೆ ನೋವು ಬೆಂಬಿಡದೇ ಕಾಡಿದರೆ, ಚಳಿಗಾಲದಲ್ಲಿ ಅಲ್ಲಿ-ಇಲ್ಲಿ ನೋವು ಕಾಮನ್. ಮಳೆಗಾದಲ್ಲಿಯೇ ಕಾಡುವ ರೋಗಗಳೇನೂ ಕಡಿಮೆ ಇಲ್ಲ. ಆದರೆ, ಚಳಿಗಾಲದಲ್ಲಿ ಮಂಡಿ ನೋವು ಕಾಡುವುದು ಭ್ರಮೆಯೇ?

ಮಂಡಿ ನೋವು ಚಳಿಗಾಲದಲ್ಲಿ ಹೆಚ್ಚಾಗುತ್ತೆ ಅನ್ನೋದು ನಿಜನಾ ಅಥವಾ ಭ್ರಮೆಯಾ?

ಇದು ಭ್ರಮೆ ಏನಲ್ಲ, ನಿಜವೇ. ಚಳಿಗಾಲದಲ್ಲಿ ಮಂಡಿನೋವು ಅಂತಲ್ಲ, ಎಲ್ಲ ಜಾಯಿಂಟ್‌ಗಳಲ್ಲೂ ನೋವು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಸಂದುಗಳಲ್ಲಿ ಬಿಗಿತ ಕಾಣಿಸಿಕೊಳ್ಳೋದು ಇದೆ. ಇದಕ್ಕೆ ಕಾರಣ ಚಳಿ ಹೆಚ್ಚಾದಂತೆ ನಮ್ಮ ರಕ್ತ ಪರಿಚಲನೆ ಕಡಿಮೆಯಾಗುತ್ತೆ. ನಾವು ಬೆಚ್ಚನೆಯ ಉಡುಪು ಹಾಕದೇ ಹಾಗೇ ಚಳಿಗೆ ಓಡಾಡಿದರೆ ಮೂಳೆಗಳಲ್ಲಿ ಬಿಗಿತ ಕಾಣಿಸಿಕೊಳ್ಳೋದು, ಜಾಯಿಂಟ್ಸ್‌ನಲ್ಲಿ ನೋವು ಬರೋದು, ಕೈ ಕಾಲು ಅಲ್ಲಾಡಿಸಲು ಕಷ್ಟ ಆಗೋದು ಕಷ್ಟವಾಗುತ್ತೆ. ಥಂಡಿ, ತಣ್ಣೀರ ಸ್ನಾನ,ಫ್ಯಾನ್, ಹೆಚ್ಚು ಎ.ಸಿ ಮೊದಲಾದ ಸನ್ನಿವೇಶಗಳಲ್ಲಿ ಪೆರಿಫೆರಲ್ ಸರ್ಕ್ಯುಲೇಶನ್  ಕಡಿಮೆಯಾದಾಗ ಕೈ ಬೆರಳು, ಕಾಲ್ಬೆರಳ ತುದಿ ಮೊದಲಾದೆಡೆ ರಕ್ತಪರಿಚಲನೆ ಕಡಿಮೆಯಾಗಿರುತ್ತದೆ.

ಮುಟ್ಟಿನ ನೋವಿಗೆ ಇಲ್ಲಿದೆ ಮದ್ದು

ಈ ಸಮಸ್ಯೆಗೆ ಮನೆಯಲ್ಲೇ ಮಾಡುವ ಪರಿಹಾರಗಳಿವೆಯಾ?

ಖಂಡಿತಾ. ಬೆಚ್ಚನೆಯ ಉಡುಪು ಧರಿಸಿ, ಸ್ವೆಟರ್, ಮಫ್ಲರ್ ಬಳಸೋದು. ರಾತ್ರಿ ಮಲಗುವಾಗ ಕಿವಿಗಳನ್ನು ಕವರ್ ಮಾಡಿಕೊಂಡು ಮಲಗೋದು, ಹೊರಹೋಗುವಾಗಲೂ ಮೈ ಬೆಚ್ಚಗಿರುವಂತೆ ನೋಡಿಕೊಳ್ಳೋದು, ಮನೆಯೊಳಗೂ ಚಪ್ಪಲಿ ಹಾಕೋದು ರೂಢಿಸಿಕೊಳ್ಳಿ. ಯಾಕೆಂದರೆ ನೆಲದ ಥಂಡಿಯನ್ನು ದೇಹ ಹೀರಿಕೊಂಡು ಸಮಸ್ಯೆ ಉಲ್ಬಣಿಸಬಹುದು. ಟಿ.ವಿ ನೋಡುವಾಗ, ಸುಮ್ಮನೆ ಕೂತಿರುವಾಗ ಕಾಲಡಿಗೆ ರಗ್ ಥರ ಬೆಚ್ಚನೆಯ ಬಟ್ಟೆ ಹಾಕಬೇಕು. ಹೀಗಿಟ್ಟುಕೊಂಡರೆ ಚಳಿಗಾಲದಲ್ಲಿ ಸಂದುಗಳ ನೋವನ್ನು ಕಡಿಮೆ ಮಾಡಬಹುದು. ಚಳಿಗಾಲದಲ್ಲಿ ಮಂಡಿನೋವು ಬರದಂತೆ

ಮುಂಜಾಗ್ರತೆ ತಗೆದುಕೊಳ್ಳೋದು ಸಾಧ್ಯವಾ?

ಲೈಫ್‌ಸ್ಟೈಲ್‌ನಲ್ಲೇ ಬದಲಾವಣೆ ಮಾಡಿಕೊಳ್ಳಿ. ಫ್ರಿಜ್'ನಲ್ಲಿರುವ ಐಟಂ, ತಣ್ಣೀರು, ತಣ್ಣನೆಯ ಜ್ಯೂಸ್, ಸಾಫ್ಟ್ ಡ್ರಿಂಕ್ಸ್ ಬಳಸಬೇಡಿ. ಬೆಚ್ಚಗಿರುವ ತಿಂಡಿ ತಿನ್ನಿ. ದಿನದಲ್ಲಿ ಅರ್ಧ ಗಂಟೆ ಬ್ರಿಸ್ಕ್‌ವಾಕ್ ಕಡ್ಡಾಯ. ಇದರಿಂದ ದೇಹ ಬೆಚ್ಚಗಿರುತ್ತೆ, ರಕ್ತ ಪರಿಚಲನೆಯೂ ಚೆನ್ನಾಗಿರುತ್ತೆ. ಆಗ ನೋವು, ಬಿಗಿತದಂಥ ಸಮಸ್ಯೆ ಬರಲ್ಲ.

ಕಂಪ್ಯೂಟರ್ ನೋಡಿ ಕಾಡುವ ಕತ್ತು ನೋವಿಗೆ ಇಲ್ಲಿವೆ ಪರಿಹಾರ

ಚಳಿಗಾಲದಲ್ಲಿ ಮಾಮೂಲಿಗಿಂತ ಹೆಚ್ಚು ವರ್ಕೌಟ್ ಅಥವಾ ವ್ಯಾಯಾಮ ಮಾಡ್ಬೇಕಾ?

ಹಾಗೇನಿಲ್ಲ. ನಿತ್ಯ ಮಾಡುವ ವ್ಯಾಯಾಮವೇ ಸಾಕಾಗುತ್ತೆ. ಮೈಯನ್ನು ಬೆಚ್ಚಗಿಟ್ಟುಕೊಳ್ಳೋದು, ಮೈಯಲ್ಲಿ ಬೆವರು ಬರೋದು ಮುಖ್ಯ.

click me!