ಪ್ರತಿಯೊಂದು ಬೀಗಕ್ಕೂ ಒಂದು ಕೀ ಇದ್ದೇ ಇರುತ್ತದೆ. ಕೆಲವೊಮ್ಮೆ ಕೀ ಕಳೆದುಹೋದಾಗ ಜನರು ಬೀಗವನ್ನು ತೆರೆಯಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ವಿಫಲರಾಗುತ್ತಾರೆ. ಅವರಿಗೆ ಬೀಗ ಒಡೆಯುವುದು ಬಿಟ್ಟು ಬೇರೆ ದಾರಿ ತೋರುವುದಿಲ್ಲ. ಆಗ ಬೀಗ ಮುರಿಯುವುದೊಂದೇ ನಿಮ್ಮ ಆಯ್ಕೆಯಾಗಿದ್ದರೆ ನೀವು ಹಾಗೆ ಮಾಡುವ ಬದಲು ಕೆಲವು ಸುಲಭ ಸಲಹೆಗಳ ಸಹಾಯದಿಂದ ಬಾಗಿಲಿನ ಬೀಗವನ್ನು ತೆರೆಯಬಹುದು. ಹೌದು, ಇಂದು ನಾವು ನಿಮಗೆ ಅಂತಹ ಕೆಲವು ಸಲಹೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಇವುಗಳ ಸಹಾಯದಿಂದ ನೀವು ಮುಚ್ಚಿದ ಬಾಗಿಲನ್ನು ಸುಲಭವಾಗಿ ತೆರೆಯಬಹುದು. ನಿಮ್ಮ ಮನೆಯ ಬೀಗದ ಕೀಲಿಗಳು ಕಳೆದುಹೋದರೆ ಮಾತ್ರ ಅದನ್ನು ತೆರೆಯಲು ಈ ಸಲಹೆಗಳನ್ನು ಬಳಸಬೇಕು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸಲಹೆಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ.
ಗ್ಲಿಸರಿನ್ ಸಹಾಯದಿಂದ ತೆರೆಯಿರಿ
ದಿ ಸೋಶಿಯಲ್ ಜಂಕ್ಷನ್ ಎಂಬ ಇನ್‌ಸ್ಟಾಗ್ರಾಮ್ ಪೇಜ್ ಈ ಒಂದು ಟ್ರಿಕ್ ಅನ್ನು ಹಂಚಿಕೊಂಡಿದೆ. ಇದಕ್ಕಾಗಿ, ಮೊದಲು ನೀವು ಮೆಡಿಕಲ್ ಶಾಪ್‌ಗೆ ಹೋಗಿ. ಅಲ್ಲಿಂದ ಪೊಟ್ಯಾಶಿಯಂ ಪರ್ಮಾಂಗನೇಟ್ ತರಬೇಕು. ಇದು ಔಷಧೀಯ ಸ್ಫಟಿಕದಿಂದ ತಯಾರಿಸಿದ ಕಪ್ಪು ಉಪ್ಪಾಗಿದ್ದು, ಇದನ್ನು ಔಷಧವಾಗಿ ಬಳಸಲಾಗುತ್ತದೆ. ಇದರ ಜೊತೆಗೆ ನೀವು ಗ್ಲಿಸರಿನ್ ಅನ್ನು ಸಹ ಖರೀದಿಸಬೇಕಾಗುತ್ತದೆ. ಈಗ ಒಂದು ಚಿಟಿಕೆ ಪೊಟ್ಯಾಸಿಯಮ್ ಪರ್ಮಾಂಗನೇಟ್ ತೆಗೆದುಕೊಂಡು ಬೀಗದ ಕೀ ಸ್ಲಾಟ್‌ನಲ್ಲಿರುವ ರಂಧ್ರದಲ್ಲಿ ತುಂಬಿಸಿ. ಇದರ ನಂತರ, ಅದೇ ರಂಧ್ರದಲ್ಲಿ ಎರಡರಿಂದ ನಾಲ್ಕು ಹನಿ ಗ್ಲಿಸರಿನ್ ಹಾಕಿ. ನೀವು ಹೀಗೆ ಮಾಡಿದ ತಕ್ಷಣ, ಬೀಗದ ರಂಧ್ರದಿಂದ ಹೊಗೆ ಹೊರಬರಲು ಪ್ರಾರಂಭಿಸುತ್ತದೆ. ಇದಾದ ನಂತರ ಬೀಗವು ಒಂದು ಎಳೆತದೊಂದಿಗೆ ಸ್ವಯಂಚಾಲಿತವಾಗಿ ತೆರೆಯುತ್ತದೆ.
ಕೀಲಿಗಳಿಲ್ಲದೆ ಬೀಗವನ್ನು ತೆರೆಯಲು ವಿವಿಧ ಮಾರ್ಗಗಳು
* ಪಿನ್ ಸಹಾಯದಿಂದ ಕೂಡ ಲಾಕ್ ಓಪನ್
ನಾಯಕನು ನಾಯಕಿಯ ಕೂದಲಿನ ಬನ್‌ನಲ್ಲಿರುವ ಪಿನ್‌ನಿಂದ ಬಾಗಿಲಿನ ಬೀಗವನ್ನು ತೆರೆಯುವುದನ್ನು ನೀವು ಹೆಚ್ಚಾಗಿ ಚಲನಚಿತ್ರಗಳಲ್ಲಿ ನೋಡಿರಬೇಕು. ನೀವು ನೋಡಿದ್ದರೆ ಇದು ಒಳ್ಳೆಯ ಐಡಿಯಾನೆ. ಈಗ ಈ ಹೇರ್ ಪಿನ್ ಅನ್ನು ತೊಂಬತ್ತು ಡಿಗ್ರಿ ಬಗ್ಗಿಸಿ. ಈಗ ಈ ಬಾಗಿದ ಪಿನ್ ಅನ್ನು ಲಾಕ್‌ನಲ್ಲಿರುವ ಕೀ ಹೋಲ್‌ಗೆ ಸೇರಿಸಿ ಮತ್ತು ಪಿನ್ ಅನ್ನು ಕೆಳಗಿನಿಂದ ಮೇಲಕ್ಕೆ ಎತ್ತಿ. ಇದಾದ ನಂತರ, ಪಿನ್ ಅನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎತ್ತುತ್ತಲೇ ಇರಿ. ಇದರೊಂದಿಗೆ, ನಾಬ್ ಲಾಕ್‌ನಲ್ಲಿರುವ ರಾಡ್ ತನ್ನ ಸ್ಥಳದಿಂದ ಚಲಿಸುತ್ತದೆ ಮತ್ತು ಲಾಕ್ ತೆರೆಯುತ್ತದೆ. ಈ ಹ್ಯಾಕ್ ಲಾಕ್ ತೆರೆಯುವಲ್ಲಿ ಮಾತ್ರವಲ್ಲದೆ ಲಾಕ್ ಸಿಲುಕಿಕೊಂಡರೂ ಸಹ ಪರಿಣಾಮಕಾರಿಯಾಗಿದೆ.
* ಬೀಗ ತೆರೆಯಲು ಚಾಕು ಬಳಸಿ
ಹಲವು ಬಾರಿ ಮನೆಯಲ್ಲಿರುವ ಕಬೋರ್ಡ್‌ನ ಬೀಗ ಲಾಕ್ ಆಗುತ್ತದೆ ಅಥವಾ ಸಿಲುಕಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಇಟ್ಟಿರುವ ಚಾಕು ಸಹ ಉಪಯುಕ್ತವಾಗಬಹುದು. ಇದಕ್ಕಾಗಿ, ನಿಮ್ಮ ಮನೆಯಲ್ಲಿ ಒಂದು ಸಣ್ಣ ಚಾಕು ಇರಬೇಕು, ಅದು ಬೀರುವಿನ ಬೀಗದ ಕೀಲಿ ರಂಧ್ರದ ಮೂಲಕ ಸುಲಭವಾಗಿ ಪ್ರವೇಶಿಸುತ್ತದೆ. ಚಾಕುವನ್ನು ಕೀಹೋಲ್‌ಗೆ ಎಚ್ಚರಿಕೆಯಿಂದ ಸೇರಿಸಿ ಮತ್ತು ಅದು ಲಾಕ್‌ನ ಹಿಂಭಾಗವನ್ನು ಮುಟ್ಟುವವರೆಗೆ ತಿರುಗಿಸಿ. ಈಗ ಈ ಚಾಕುವನ್ನು ಕೀಲಿಯಂತೆ ತಿರುಗಿಸಲು ಪ್ರಯತ್ನಿಸಿ. ಎರಡು ಅಥವಾ ಮೂರು ಬಾರಿ ಪ್ರಯತ್ನಿಸಿದ ನಂತರ ಲಾಕ್ ಅನ್‌ಲಾಕ್ ಆಗುತ್ತದೆ.
* ಲಾಕ್ ಅನ್‌ಲಾಕ್‌ಗಾಗಿ ಬಟ್ಟೆ ಹ್ಯಾಂಗರ್
ನಿಮ್ಮ ಮನೆಯಲ್ಲಿ ಬಟ್ಟೆಗಳನ್ನು ನೇತುಹಾಕಲು ಹ್ಯಾಂಗರ್‌ಗಳು ಇರಬೇಕು. ನೀವು ಅದರ ಸಹಾಯದಿಂದ ಲಾಕ್ ಅನ್ನು ಅನ್ಲಾಕ್ ಮಾಡಬಹುದು. ಬಟ್ಟೆ ಹ್ಯಾಂಗರ್ ತೆಗೆದುಕೊಂಡು ಅದರ ತುದಿ ಬೀಗದ ರಂಧ್ರಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ನೋಡಿ. ಹ್ಯಾಂಗರ್‌ನ ತುದಿ ಲಾಕ್‌ಗೆ ಹೊಂದಿಕೊಂಡರೆ, ಹ್ಯಾಂಗರ್ ಅನ್ನು ನೇರಗೊಳಿಸಿ. ಹ್ಯಾಂಗರ್ ಉದ್ದವಾಗಿದ್ದರೆ, ನೀವು ಅದನ್ನು ಚಿಕ್ಕದಾಗಿಸಲು ಕತ್ತರಿಸಬಹುದು. ಈಗ ಹ್ಯಾಂಗರ್‌ನ ತುದಿಯನ್ನು ಲಾಕ್‌ನ ರಂಧ್ರದೊಳಗೆ ಸೇರಿಸಿ ಮತ್ತು ಅಲುಗಾಡಿಸುತ್ತಾ ಅದನ್ನು ತಿರುಗಿಸುತ್ತಲೇ ಇರಿ. ಹೀಗೆ ಮಾಡುವುದರಿಂದ ಕೀ ಹೋಲ್ ಒಳಗಿನ ರಾಡ್ ಚಲಿಸುತ್ತದೆ ಮತ್ತು ಲಾಕ್ ಸುಲಭವಾಗಿ ತೆರೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.