ನಮಗೆ ಸರಿಯಾಗಿ ನಿದ್ರೆ ಬರ್ತಿಲ್ಲ ಅಂದ್ರೆ ಅದಕ್ಕೆ ಹಾಸಿಗೆ ಕೂಡ ಕಾರಣವಾಗಿರಬಹುದು. ಚೆಂದ ಕಾಣ್ತಿದೆ ಅಂತಲೋ, ನಮ್ಮ ಸ್ಟೇಟರ್ಸ್ ಗೆ ಹೊಂದುತ್ತೆ ಅಂತ್ಲೋ ನೀವು ಮ್ಯಾಟ್ರೆಸ್ ಖರೀದಿ ಮಾಡಿದ್ರೆ ಯಡವಟ್ಟು ಮಾಡಿದ್ದೀರಿ ಎಂದೇ ಅರ್ಥ.
ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ಹಾಗೆ ಹಾಸಿಗೆ ಚೆನ್ನಾಗಿದ್ದಷ್ಟು ನಿದ್ದೆಯೂ ಕೂಡ ಚೆನ್ನಾಗಿ ಬರುತ್ತೆ. ಕೆಲವರು ಮೆತ್ತನೆಯ ಹಾಸಿಗೆಯನ್ನು ಇಷ್ಟಪಟ್ಟರೆ ಕೆಲವರು ಕೇವಲ ಕಂಬಳಿಯ ಹಾಸಿಗೆಯೇ ನಮಗೆ ಕಂಫರ್ಟ್ ಅಂತಾರೆ. ಹಾಗಾಗಿ ಅವರವರ ದೈಹಿಕ ಸ್ಥಿತಿಗೆ ಅನುಗುಣವಾಗಿ ಹಾಸಿಗೆಯ ಗುಣಮಟ್ಟ ಬದಲಾಗುತ್ತ ಹೋಗುತ್ತದೆ.
ಮಲಗುವ ಕೋಣೆ (Room) ಗೆ ಹಾಸಿಗೆಯನ್ನು ಆರಿಸುವುದೆಂದರೆ ಜೀವನ ಸಂಗಾತಿಯನ್ನು ಆರಿಸಿದಷ್ಟೇ ಕಷ್ಟ ಎಂದು ಕೆಲವರು ಹೇಳ್ತಾರೆ. ಎಲ್ಲೋ ಅಪ್ಪಿ ತಪ್ಪಿ ಹಾಸಿಗೆ (Bed) ಯನ್ನು ತರುವಲ್ಲಿ ನಾವು ಸೋತೆವೆಂದುಕೊಳ್ಳಿ. ನಮ್ಮ ನಿದ್ದೆ (Sleep) ಹಾಳಾಗುವುದರೊಂದಿಗೆ ಶರೀರದಲ್ಲಿ ಕೂಡ ನೋವುಗಳು ಕಾಣಿಸಿಕೊಳ್ತವೆ. ಹಾಗಾಗಿ ಮ್ಯಾಟ್ರೆಸ್ ಅನ್ನು ಖರೀದಿಸುವ ಮುನ್ನ ಮೊದಲು ನಿಮ್ಮ ಅಗತ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಿ.
ಹೆಚ್ಚಿನ ಮಂದಿ ತಮ್ಮ ಬಜೆಟ್ ಗೆ ಅನುಗುಣವಾಗಿರುವ ಹಾಸಿಗೆಯನ್ನು ಖರೀದಿಸುತ್ತಾರೆ. ಇದು ತಪ್ಪಾದ ವಿಧಾನವಾಗಿದೆ. ಏಕೆಂದರೆ ಒಳ್ಳೆಯ ಆರೋಗ್ಯದ ಮೊದಲ ಸೂತ್ರ ಒಳ್ಳೆಯ ನಿದ್ದೆಯಾಗಿದೆ. ಒಳ್ಳೆಯ ನಿದ್ದೆ ನೀವು ಒಳ್ಳೆಯ ಹಾಸಿಗೆಯನ್ನು ಖರೀದಿಸಿದಾಗ ಮಾತ್ರ ಸಿಗುತ್ತದೆ. ಹಾಗಾಗಿ ನಿಮ್ಮ ದೇಹಸ್ಥಿತಿಗೆ ಅನುಗುಣವಾಗಿ, ಅದಕ್ಕೆ ಸರಿಹೊಂದುವಂತ ಹಾಸಿಗೆಯನ್ನು ಖರೀದಿಸುವುದು ಸೂಕ್ತ. ನಿಮಗೆ ಸರಿಹೊಂದುವಂತ ಬೆಸ್ಟ್ ಮ್ಯಾಟ್ರೆಸ್ ಖರೀದಿಸಲು ಅನುಕೂಲವಾಗುವಂತಹ ಕೆಲವು ಟಿಪ್ಸ್ ಇಲ್ಲಿದೆ.
ಮಕ್ಕಳಿಗೆ ಹಾಲಿನ ಪೌಡರ್ ತಿನ್ನಿಸಬಹುದಾ? ಯಾವಾಗ?
ಅಧಿಕ ತೂಕವನ್ನು ಹೊಂದಿದವರಿಗೆ ಇಂತಹ ಹಾಸಿಗೆ ಬೆಸ್ಟ್ : ಹಾಸಿಗೆಯನ್ನು ಖರೀದಿಸುವ ಮುನ್ನ ಅದರ ಮೇಲೆ ಮಲಗುವವರ ಎತ್ತರ ಮತ್ತು ತೂಕವನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಹೆಚ್ಚು ತೂಕವನ್ನು ಹೊಂದಿರುವವರಿಗೆ ಇನ್ ಸ್ಪ್ರಿಂಗ್ ಹಾಸಿಗೆ ಸೂಕ್ತವಾಗಿರುತ್ತದೆ. ಇನ್ ಸ್ಪ್ರಿಂಗ್ ಮ್ಯಾಟ್ರೆಸ್ ಗಳು ನಿಮ್ಮ ಶರೀರದ ತೂಕವನ್ನು ಸಂಬಾಳಿಸಲು ಸಮರ್ಥವಾಗಿರುತ್ತದೆ. ಇದರ ಹೊರತಾಗಿ ನೀವು ಕಡಿಮೆ ಹತ್ತಿಯನ್ನು ಹೊಂದಿದ ಗಟ್ಟಿಯಾದ ಹಾಸಿಗೆಯನ್ನು ಖರೀದಿಸಿದರೆ ನಿಮಗೆ ಸೊಂಟನೋವಿನ ತೊಂದರೆ ಉಂಟಾಗಬಹುದು.
ಕಡಿಮೆ ತೂಕ ಹೊಂದಿದವರಿಗೆ ಈ ಹಾಸಿಗೆ ಸೂಕ್ತ : ಕಡಿಮೆ ತೂಕವನ್ನು ಹೊಂದಿದವರು ಮೆತ್ತನೆಯ ಮತ್ತು ಸಣ್ಣ ಚೌಕಟ್ಟಿನ ಹಾಸಿಗೆಗಳನ್ನು ಖರೀದಿಸುವುದು ಒಳ್ಳೆಯದು. ಏಕೆಂದರೆ ಕಡಿಮೆ ತೂಕ ಹೊಂದಿದವರು ಹಾಸಿಗೆಯ ಮೇಲೆ ಮಲಗಿದಾಗ ಹಾಸಿಗೆಯ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಹಾಸಿಗೆ ಗಟ್ಟಿಯಿದ್ದಾಗ ಅದು ಕೆಳಗೆ ಇಳಿಯುವುದಿಲ್ಲ ಇದರಿಂದ ಕೀಲು ನೋವಿನ ಸಮಸ್ಯೆ ಎದುರಾಗಬಹುದು.
ವಿಮಾನದಲ್ಲಿದ್ದಾಗ ಪ್ರಯಾಣಿಕರು ಮೃತಪಟ್ಟರೆ ಸಿಬ್ಬಂದಿ ದೇಹವನ್ನು ಏನು ಮಾಡ್ತಾರೆ?
ಇಂತವರಿಗೆ ಮೆಮೊರಿ ಫೋಮ್ ಹಾಸಿಗೆಯೇ ಬೇಕು : ಭುಜಗಳ ಮೇಲೆ ಒತ್ತಡ ಹಾಕಿ ಒಂದೇ ಮಗ್ಗಲಿನಲ್ಲಿ ಮಲಗುವ ರೂಢಿ ಕೆಲವರಿಗಿರುತ್ತದೆ. ಇನ್ನೂ ಕೆಲವರು ಬೆನ್ನಮೇಲೆಯೇ ಮಲಗುತ್ತಾರೆ. ಒಮ್ಮೆ ನೀವು ಮಗ್ಗುಲಿನಲ್ಲಿ ಮಲಗುವವರಾಗಿದ್ದರೆ ಅಥವಾ ಸೊಂಟನೋವಿನಿಂದ ಬಳಲುತ್ತಿದ್ದರೆ ಮೆಮೊರಿ ಫೋಮ್ ಹಾಸಿಗೆಯನ್ನು ಖರೀದಿಸಿ. ಮೆಮೊರಿ ಫೋಮ್ ಹಾಸಿಗೆಯ ಮೇಲೆ ಮಲಗುವುದರಿಂದ ನಿಮ್ಮ ಭುಜ ಮತ್ತು ಸೊಂಟದ ಮೇಲೆ ಕಡಿಮೆ ಒತ್ತಡ ಬೀಳುತ್ತದೆ ಮತ್ತು ನಿಮ್ಮ ಬೆನ್ನುಹುರಿಯೂ ನೇರವಾಗಿರುತ್ತದೆ. ಮೆಮೊರಿ ಫೋಮ್ ಹಾಸಿಗೆಯಲ್ಲಿ ನೀವು ಮಲಗಿದಾಗ ನಿಮ್ಮ ಜೊತೆ ಮಲಗುವವರು ಆಚೀಚೆ ದಿಕ್ಕು ಬದಲಾಯಿಸಿ ಮಲಗಿದರೂ ಕೂಡ ನಿಮಗೆ ಅದರಿಂದ ಡಿಸ್ಟರ್ಬ್ ಆಗುವುದಿಲ್ಲ.
ಗಾತ್ರ, ಗುಣಮಟ್ಟ, ಬೆಲೆಯನ್ನು ಲಕ್ಷ್ಯದಲ್ಲಿಟ್ಟುಕೊಳ್ಳಿ: ಹಾಸಿಗೆಯನ್ನು ಖರೀದಿಸುವ ಮುನ್ನ ಮಂಚದ ಗಾತ್ರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಅಳತೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಮತ್ತೆ ಹಾಸಿಗೆಯನ್ನು ಹಿಂತಿರುಗಿಸಬೇಕಾಗುತ್ತದೆ. ಹಾಗಾಗಿ ಹಾಸಿಗೆಯನ್ನು ಖರೀದಿಸುವ ಮುನ್ನ ನಿಮ್ಮ ಅನುಕೂಲ ಮತ್ತು ಅವಶ್ಯಕತೆಗಳೆರಡನ್ನೂ ಲಕ್ಷ್ಯದಲ್ಲಿಟ್ಟುಕೊಳ್ಳಿ. ನಿಮ್ಮ ಬಜೆಟ್ ಗೆ ಹೊಂದುವಂತಹ ಒಳ್ಳೆಯ ಬ್ರ್ಯಾಂಡ್ ನ ಮ್ಯಾಟ್ರೆಸ್ ಅನ್ನೇ ಖರೀದಿಸಿ. ನಿಮಗೆ ಸರಿಹೊಂದದ ಕಂಫರ್ಟ್ ಎನಿಸದ ಹಾಸಿಗೆಗೆ ಖರ್ಚು ಮಾಡುವುದು ವ್ಯರ್ಥ. ಮಾರುಕಟ್ಟೆಯಲ್ಲಿ ನಿಮಗೆ ಸರಿಹೊಂದುವ ಮೊತ್ತದಲ್ಲಿ ಅನೇಕ ಬ್ರ್ಯಾಂಡ್ ನ ಒಳ್ಳೆಯ ಹಾಸಿಗೆಗಳು ಲಭ್ಯವಿದೆ. ಅವುಗಳಲ್ಲಿ ನಿಮಗೆ ಸೂಕ್ತ ಎನಿಸಿದ್ದನ್ನು ನೀವು ಖರೀದಿಸಿ ಒಳ್ಳೆಯ ನಿದ್ದೆ ಪಡೆಯಬಹುದು.