ಬಹಳಷ್ಟು ಕುಟುಂಬಗಳಲ್ಲಿ ಮಹಿಳೆಯರು ದಿನಬೆಳಗಾದರೆ ಪತಿಯಿಂದ ಬೈಸಿಕೊಳ್ಳುತ್ತಾರೆ. ಕಾರಣವಿರುತ್ತದೆಯೋ ಇಲ್ಲವೋ, ಇವರಿಗೆ ಬೈಗುಳ ಮಾತ್ರ ತಪ್ಪುವುದಿಲ್ಲ. ಹೀಗಾಗದಂತೆ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಕೆಲವು ಟಿಪ್ಸ್ ಫಾಲೋ ಮಾಡಿ.
ಬಹಳಷ್ಟು ಮಹಿಳೆಯರು “ಪತಿ ಬೇಗ ಕೋಪಿಸಿಕೊಂಡು ಬೈಯ್ಯುತ್ತಾರೆ, ಅವರು ಬೈದ ಮೇಲೆ ಮೂಡೇ ಹಾಳಾಗಿ ಹೋಗುತ್ತದೆ’ ಎಂದು ಬೇಸರ ಪಟ್ಟುಕೊಳ್ಳುವುದನ್ನು ಕಾಣಬಹುದು. ಹೌದು, ಯಾರೇ ಬೈದರೂ ಮನಸ್ಸು ಮುದುಡುತ್ತದೆ. ಬೈಗುಳ ಯಾವುದೇ ಕಾರಣಕ್ಕೂ ಒಪ್ಪಿತ ವಿಧಾನವಲ್ಲ. ಅಲ್ಲದೆ ಬೈಯ್ಯುವುದು ಸಮಸ್ಯೆಗೆ ಪರಿಹಾರವೂ ಅಲ್ಲ. ಅದರಲ್ಲೂ ದಾಂಪತ್ಯದಲ್ಲಿ ಪತಿ ಬೈಯ್ಯುವುದು, ಪತ್ನಿ ಬೇಸರ ಮಾಡಿಕೊಳ್ಳುವುದು ಮುಂದುವರಿಯುತ್ತಿದ್ದರೆ ಖಂಡಿತವಾಗಿ ಆ ಮನೆಯಲ್ಲಿ ಮಹಿಳೆಗೆ ನೆಮ್ಮದಿ ಇರುವುದಿಲ್ಲ. ಪತಿಯ ಈ ಸ್ವಭಾವಕ್ಕೆ ಬ್ರೇಕ್ ಹಾಕಬೇಕಾಗುತ್ತದೆ. ಬೈಯ್ಯುವುದು ತಪ್ಪು ಎನ್ನುವ ಅರಿವು ಮೂಡಿಸಬೇಕಾಗುತ್ತದೆ. ಇಂತಹ ಕುಟುಂಬಗಳಲ್ಲಿ ಮಹಿಳೆಯರ ಆರೋಗ್ಯ ಬಹುಬೇಗ ಹದಗೆಡುತ್ತದೆ. ದುರ್ದೈವವೆಂದರೆ, ಅದಕ್ಕೂ ಮತ್ತೆ ಬೈಸಿಕೊಳ್ಳಬೇಕಾಗುತ್ತದೆ. ಹೀಗಾಗಿ, ಸೆಲ್ಫ್ ಕೇರ್ ಎನ್ನುವುದು ಅತಿ ಮುಖ್ಯ. ಮಾನಸಿಕ-ದೈಹಿಕ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಬೇಕಾಗುತ್ತದೆ. ಬೈಗುಳ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹಾಗೂ ಭಾರೀ ಆತ್ಮವಿಶ್ವಾಸದಿಂದ ತಿಳಿಸಬೇಕಾಗುತ್ತದೆ. ನಿಮ್ಮ ಪತಿ ಹೀಗೆ ಬೈಯ್ಯುವ ಸ್ವಭಾವ ಹೊಂದಿದ್ದರೆ ಅವರೆದುರು ನೀವು ಹೀಗಿರಬೇಕು.
• ಮಿತಿಯ (Boundary) ಬಗ್ಗೆ ಅರಿವು ಮೂಡಿಸಿ
ಬೈಯ್ಯುವುದನ್ನು (Yelling) ಯಾವುದೇ ಕಾರಣಕ್ಕೂ ಸಹಿಸಲು (Tolerate) ಸಾಧ್ಯವಿಲ್ಲ ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿ. ಅವರು ಬೈಯ್ಯುವುದಕ್ಕೆ ಕುಗ್ಗುವುದು ಬೇಕಾಗಿಲ್ಲ. ನಿಮಗೆ ಬೈದ ಮಾತ್ರಕ್ಕೆ ಪರಿಸ್ಥಿತಿಯಲ್ಲಿ (Situation) ಸುಧಾರಣೆ ಕಂಡು ಬರುವುದಿಲ್ಲ. ಬದಲಿಗೆ, ಇನ್ನಷ್ಟು ಹಾಳಾಗುತ್ತದೆ ಎನ್ನುವುದನ್ನು ಅವರಿಗೆ ತಿಳಿಸಿ.
ಬರೀ 15 ನಿಮಿಷ: ಸೋಷಿಯಲ್ ಮೀಡಿಯಾದಿಂದ ದೂರವಿರಿ, ಆರೋಗ್ಯ ಸುಧಾರಿಸ್ಕೊಳಿ
• ಕೆರಳಬೇಡಿ
ಬೈದಾಗ ಅಳುವುದು (Cry), ನಿಮ್ಮ ಮೇಲೆ ನೀವೇ ಕೋಪಿಸಿಕೊಳ್ಳುವುದು (Anrgy), ಕೆರಳಿ ಮಾತಾಡುವುದು, ಹತಾಶೆಯ (Depression) ಭಾವನೆ ಮೂಡಿಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಬದಲಿಗೆ, ನಿಮ್ಮ ಮಾನಸಿಕ (Mental), ದೈಹಿಕ (Physical) ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.
• ಬೈಗುಳದ ಹಿಂದಿರುವ ಕಾರಣ (Reason) ಗುರುತಿಸಿ
ನಿಮ್ಮ ಪತಿ ನಿಮಗೆ ಯಾಕೆ ಬೈಯ್ಯುತ್ತಿದ್ದಾರೆ ಎನ್ನುವುದನ್ನು ಅಂದಾಜಿಸಿ. ಅಥವಾ ಕೆಲವೊಮ್ಮೆ ಅವರೇ ನಿಮಗೆ ಕಾರಣ ತಿಳಿಸಬಹುದು. ಒಂದೊಮ್ಮೆ ನಿಮ್ಮಿಂದ ತಪ್ಪಾಗಿದ್ದರೂ ಸರಿ, ಬೈಯ್ಯುವುದರಿಂದ ಪ್ರಯೋಜನವಿಲ್ಲ ಎನ್ನುವುದನ್ನು ಹೇಳಿ. ಅವರ ಅಸಮಾಧಾನ, ಕೋಪದ ಮೂಲ ತಿಳಿಸಿದರೆ ನಿಮ್ಮಗಿಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಿ. ಚಿಕ್ಕಪುಟ್ಟದ್ದಕ್ಕೆಲ್ಲ ಬೈಯ್ಯುವುದು ನಿಮ್ಮವರ ಸ್ವಭಾವ ಆಗಿದ್ದರೆ ತಿದ್ದಿಕೊಳ್ಳುವಂತೆ ಹೇಳಿ.
• ಸಮಸ್ಯೆ (Problems) ಹಂಚಿಕೊಳ್ಳಿ
ಮನೆಯಲ್ಲಿ ಮುಕ್ತ ಮಾತುಕತೆಯ ವಾತಾವರಣವಿದ್ದಾಗ ಅಸಮಾಧಾನ, ಕೋಪಕ್ಕೆ ಅವಕಾಶ ಕಡಿಮೆ. ಮನದಲ್ಲಿ ಮೂಡುವ ಭಾವನೆಗಳನ್ನು ಸರಿಯಾಗಿ ಕಮ್ಯೂನಿಕೇಟ್ (Communicate) ಮಾಡುವುದು ಸಹ ಮುಖ್ಯ. ಈ ಬಗ್ಗೆ ನಿಮ್ಮ ಪತಿಯಲ್ಲಿ (Husband) ಮಾತಾಡಿ. ಅವರೇನು ಹೇಳುತ್ತಿದ್ದಾರೆ ಎನ್ನುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಅವರೊಂದು ಹೇಳುವುದು, ನೀವು ಮತ್ತೊಂದು ರೀತಿ ಗ್ರಹಿಸಿಕೊಳ್ಳುವುದು ಆಗಬಾರದು. ಉತ್ತಮ ಕೇಳುಗರಾಗಿ.
Mental Health: ಹಿಂದಿನ ಘಟನೆಗಳ ನೆನಪಿಂದ ಹೊರಬರೋಕೆ ಆಗಲ್ವಾ?
• ಆ ಕ್ಷಣದಿಂದ ಆಚೆ ನಡೆಯಿರಿ
ನಿಮ್ಮ ಪತಿ ಕಾರಣವಿಲ್ಲದೆ ರೇಗುವ ಸ್ವಭಾವದವರಾಗಿದ್ದರೆ, (ಕಾರಣವಿದ್ದರೂ ರೇಗುವ ಸ್ವಭಾವ ಸರಿಯಲ್ಲ) ಆ ಕ್ಷಣ ಬೇರೆ ಕಡೆಗೆ ಹೋಗಿ ಬಿಡಿ. ಮನಸ್ಸು ಶಾಂತವಾದ (Calm Down) ಬಳಿಕವೇ ಅವರನ್ನು ಎದುರಾಗಿ. ಮತ್ತು ಇಂತಹ ಸ್ಥಿತಿಯಲ್ಲಿ ನೀವು ಎಷ್ಟು ಬೇಗ ಮರಳಿ ಶಾಂತಚಿತ್ತರಾಗುತ್ತೀರೋ ಅಷ್ಟೂ ನಿಮಗೇ ಉತ್ತಮ. “ನೀವು ನನಗೆ ಪದೇ ಪದೆ ಬೈಯ್ಯುತ್ತೀರಿ’ ಎಂದು ಹೇಳುವ ಬದಲು, “ನನಗೆ ನಿಮ್ಮ ಬೈಗುಳದಿಂದ ಹರ್ಟ್ ಆಗುತ್ತದೆ’ ಎಂದು ಹೇಳುತ್ತಿರಿ.
• ಕೌನ್ಸೆಲಿಂಗ್ (Counselling) ನೆರವು
ಯಾವುದಾದರೂ ಸಮಯದಲ್ಲಿ ಕೋಪಿಸಿಕೊಳ್ಳುವುದು, ಪರಸ್ಪರ ಬೈಗುಳ ದಾಂಪತ್ಯದಲ್ಲಿ ಸಹಜ. ಆದರೆ, ಅದು ಎಂದಾದರೊಮ್ಮೆ ಮಾತ್ರ. ಪದೇ ಪದೆ ಹೀಗಾಗುತ್ತಿದ್ದರೆ ಆಪ್ತಸಮಾಲೋಚಕರ ನೆರವು ಪಡೆದುಕೊಳ್ಳಿ. ಅವರಲ್ಲಿ ಸುಧಾರಣೆಯೇ ಕಾಣದಿದ್ದರೆ ಸಂಬಂಧವನ್ನು (Relation) ಮುಂದುವರಿಸಬೇಕೇ ಬೇಡವೇ ಎನ್ನುವ ನಿರ್ಧಾರ ಕೈಗೊಳ್ಳಿ. ಏಕೆಂದರೆ, ದಿನವೂ ಕುಗ್ಗುತ್ತ, ಹತಾಶೆಯಿಂದ ಬಾಳುವುದು ಬದುಕಲ್ಲ.