
ಬೆಳಗ್ಗೆ ಎದ್ದಾಗ ನಮ್ಮ ಮೂಡ್ ಚೆನ್ನಾಗಿದ್ದರೆ ದಿನಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಆದರೆ, ಹಲವರಿಗೆ ಇದು ಸಾಧ್ಯವಿಲ್ಲ. ಇಂದಿನ ಬ್ಯುಸಿ ಲೈಫ್`ಸ್ಟೈನ್, ಒತ್ತಡದ ಬದುಕು ಅದಕ್ಕೆ ಆಸ್ಪದ ಕೊಡುವುದಿಲ್ಲ. ಹಾಗಾದರೆ, ತಮ್ಮ ಬೆಳಗನ್ನು ಖುಷಿಯಾಗಿ ಸಂಭ್ರಮಿಸುವುದು ಹೇಗೆ..? ಇಲ್ಲಿದೆ ಕೆಲ ಉಪಯುಕ್ತ ಟಿಪ್ಸ್.
1. ಒಂದೊಳ್ಳೆ ಬ್ರೇಕ್`ಫಾಸ್ಠ್: ಬೆಳಗ್ಗೆ ಎದ್ದ ಕೂಡಲೇ 15 ನಿಮಿಷದ ವಾಕಿಂಗ್ ಬಳಿಕ ೊಳ್ಳೆಯ ಬ್ರೇಕ್ ಫಾಸ್ಟ್ ಸೇವಿಸಿ. ಒಂದೊಮ್ಮೆ ಆಹಾರ ನಿಮಗೆ ಶಕ್ತಿ ಕೊಡುವ ಜೊತೆಗೆ ಹೊಟ್ಟೆ ತುಂಬಿದ ಬಳಿಕ ತಾನಾಗಿಯೇ ನಗು ಚಿಮ್ಮುತ್ತೆ
2. ದೇಹದ ಮಾಂಸಖಂಡಗಳನ್ನ ಹಿಗ್ಗಿಸಿ
ಎದ್ದ ಕೂಡಲೇ ಒಂದೆಡೆ ಕುಳಿತುಕೊಳ್ಳುವ ಮುನ್ನ ದೇಹವನ್ನ ಸ್ವಲ್ಪ ಸ್ಟ್ರೆಚ್ ಮಾಡಿ. ಕೈಗಳನ್ನ ಚಾಚುವುದು ಮತ್ತು ಸಣ್ಣ ಪುಟ್ಟ ವ್ಯಾಯಾಮ ಇರಲಿ. ಇದರಿಂದ ದೇಹ ಸಡಿಲವಾಗಿ ಉಲ್ಲಾಸ ನೀಡುತ್ತದೆ.
3. ಟಿ.ವಿ ನೋಡಬೇಡಿ
ಕೆಟ್ಟ ಸುದ್ಧಿಗಳಿಂದ ತಕ್ಷಣ ಮೂಡ್ ಹಾಳಾಗುವ ಮನಸ್ಥಿತಿಯವರಾಗಿದ್ದರೆ ಟಿವಿ ನೋಡಬೇಡಿ. ಕಾರ್ಯಕ್ರಮ ರೆಕಾರ್ಡ್ ಮಾಡಿಕೊಂಡು ಸಂಜೆ ನೋಡಿ
4. ಸಂಗೀತ ಆಲಿಸಿ
ನಿಮ್ಮ ಮನಸ್ಸಿಗೆ ಮುದ ನೀಡುವ ನಿಮಗೆ ಇಷ್ಟವಾದ ಮ್ಯೂಸಿಕ್ ಪ್ಲೇ ಮಾಡಿಕೊಂಡು ದಿನಚರಿ ಆರಂಭಿಸಿ.
5. ಬೆಳಗ್ಗಿನ ವಸ್ತುಗಳನ್ನ ರಾತ್ರಿಯೇ ರೆಡಿ ಮಾಡಿ
ಬೆಳಗ್ಗೆ ಕೆಲಸಕ್ಕೆ ಹೊರಡುವಾಗ ತೆಗೆಕೊಳ್ಳಬೇಕಾದ ಆಫೀಸ್ ಕೀ, ವಾಲೆಟ್, ಮೊಬೈಲ್ ಮುಂತಾದ ವಸ್ತುಗಳನ್ನ ರಾತ್ರಿ ಒಂದೆಡೆ ಇಟ್ಟು ಮಲಗಿ. ಬೆಳಗ್ಗೆ ಎದ್ದು ಆತುರದಲ್ಲಿ ಒದ್ದಾಡುವ ಸಮಸ್ಯೆ ಇರಲ್ಲ.
6. ನಿಮ್ಮ ನೆಚ್ಚಿನ ಪೆಟ್ ಡಾಗ್ ಇದ್ದರೆ ಅದರ ಜೊತೆ ಸ್ವಲ್ಪ ಸಮಯ ಕಳೆದರೆ ಮನಸ್ಸಿಗೆ ಉಲ್ಲಾಸ ಸಿಗುತ್ತೆ.
7. ರಾತ್ರಿಯೇ ನಿಮ್ಮ ಕೋಣೆ ಶುಚಿಮಾಡಿಡಿ
ಚೆಲ್ಲಾಪಿಲ್ಲಿಯಾಗಿರುವ ಕೊಠಡಿಯನ್ನ ರಾತ್ರಿಯೇ ಶುಚಿಮಾಡಿ. ಬೆಳಗ್ಗೆ ಎದ್ದಾಗ ಶುಚಿಕರವಾದ ವಾತಾವರಣ ಮನಸ್ಸಿಗೆ ಹಿತ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
8. ಕೊಠಡಿಯಲ್ಲಿ ಹೂಗಳಿರಲಿ
ಚೆಂದದ ಹೂಗಳನ್ನ ನೋಡಿದರೆ ಅದೆಂಥಹ ಕಟು ಮನಸ್ಸಿದ್ದರೂ ಕರಗಿ ನಗು ಒಮ್ಮುತ್ತೆ. ಹೀಗಾಗಿ, ಮಲಗುವ ಕೊಠಡಿಯಲ್ಲಿ ಕೆಲ ಚೆಂದದ ಹೂಗಳನ್ನ ತಂದಿಟ್ಟರೆ ಒಳ್ಳೆಯದು.
9. ಮಲಗುವ ಕೊಠಡಿಯ ಕಿಟಕಿ ಕರ್ಟನ್ ಅರ್ಧ ಹಾಕಿಡಿ
ಕೊಠಡಿಯ ಕಿಟಕಿಗಳನ್ನ ಅರ್ಧ ಪರದೆ ಹಾಕಿದ್ದರೆ ಬೆಳಗಿನ ಜಾವದ ಸೂರ್ಯ ರಶ್ಮಿ ನಿಮ್ಮ ದೇಹಕ್ಕೆ ತಾಗಿ ಮುದ ನೀಡುತ್ತವೆ. ಬೆಳಗಿನ ತುಸು ಬೆಚ್ಚನೆಯ ಅನುಭವ ಸಂತಸವನ್ನುಂಟುಮಾಡುತ್ತದೆ.
10. ಸೋಶಿಯಲ್ ಮೀಡಿಯಾದಿಂದ ದೂರವಿದ್ದರೆ ಉತ್ತಮ
ಬೆಳಗ್ಗೆ ಎದ್ದ ಕೂಡಲೇ ಫೋನ್, ವಾಟ್ಸಾಪ್, ಫೇಸ್ಬುಕ್ ಅಂತಾ ನೋಡುವವರ ಸಂಖ್ಯೆ ಹೆಚ್ಚು. ಇದರಿಂದ ನಿಮ್ಮ ಮೂಡ ಹಾಳಾಗಬಹುದು. ಸ್ವಲ್ಪ ಸಮಯದವರೆಗೆ ಇವುಗಳಿಂದ ದೂರವಿದ್ದರೆ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.