‘ಬ್ರಾ’ವನ್ನು ತೊಳೆಯದೇ ಎಷ್ಟು ಬಾರಿ ಬಳಸಹುದು?

By Suvarna News  |  First Published Jan 10, 2020, 4:22 PM IST

 ಕೆಲವರು ನಿತ್ಯ ವಾಶ್‌ ಮಾಡಿದ ಬಾ ್ರವನ್ನೇ ಧರಿಸುತ್ತಿದ್ದರೆ ಕೆಲವರು ವಾಶ್‌ ಮಾಡದೇ ಎರಡು ಮೂರು ಬಾರಿ ಧರಿಸುತ್ತಾರೆ. ಹೇಗಿದ್ರೂ ಒಳಗಿರುತ್ತಲ್ಲಾ, ಯಾರಿಗೂ ಕಾಣಲ್ಲ. ಸ್ವಲ್ಪ ಕೊಳೆಯಾಗಿದ್ರೂ ಪರ್ವಾಗಿಲ್ಲ. ಟೈಮ್‌ ಸಿಕ್ಕಾಗ ವಾಶ್‌ ಮಾಡಿದ್ರಾಯ್ತು ಅಂದುಕೊಂಡು ಕೆಲವರು ಬ್ರಾ ವಾಶ್‌ ಮಾಡೋದನ್ನು ಪೋಸ್ಟ್‌ ಪೋನ್‌ ಮಾಡ್ತಾನೇ ಇರ್ತಾರೆ. ಆದರೆ ಇದರಿಂದ ಏನಾದ್ರೂ ಸಮಸ್ಯೆಯಾಗುತ್ತಾ, ಅಷ್ಟಕ್ಕೂ ಬ್ರಾವನ್ನು ತೊಳೆಯದೇ ಎಷ್ಟು ಬಾರಿ ಬಳಸಬಹುದು? ಇಲ್ಲಿದೆ ಡೀಟೈಲ್‌.
 


ಒಳ ಉಡುಪುಗಳ ವಿಷಯದಲ್ಲಿ ನಮಗೆ ಎಷ್ಟು ಸಂಕೋಚವೋ ಅದರ ಹೈಜಿನ್‌ನ ವಿಷಯಕ್ಕೆ ಬಂದರೆ ಅಷ್ಟೇ ನಿಸ್ಸಂಕೋಚ. ನಮ್ಮಲ್ಲಿ ಕೆಲವರು ನಿತ್ಯ ವಾಶ್‌ ಮಾಡಿದ ಬಾ ್ರವನ್ನೇ ಧರಿಸುತ್ತಿದ್ದರೆ ಕೆಲವರು ವಾಶ್‌ ಮಾಡದೇ ಎರಡು ಮೂರು ಬಾರಿ ಧರಿಸುತ್ತಾರೆ. ಹೇಗಿದ್ರೂ ಒಳಗಿರುತ್ತಲ್ಲಾ, ಯಾರಿಗೂ ಕಾಣಲ್ಲ. ಸ್ವಲ್ಪ ಕೊಳೆಯಾಗಿದ್ರೂ ಪರ್ವಾಗಿಲ್ಲ. ಟೈಮ್‌ ಸಿಕ್ಕಾಗ ವಾಶ್‌ ಮಾಡಿದ್ರಾಯ್ತು ಅಂದುಕೊಂಡು ಕೆಲವರು ಬ್ರಾ ವಾಶ್‌ ಮಾಡೋದನ್ನು ಪೋಸ್ಟ್‌ ಪೋನ್‌ ಮಾಡ್ತಾನೇ ಇರ್ತಾರೆ. ಆದರೆ ಇದರಿಂದ ಏನಾದ್ರೂ ಸಮಸ್ಯೆಯಾಗುತ್ತಾ, ಅಷ್ಟಕ್ಕೂ ಬ್ರಾವನ್ನು ತೊಳೆಯದೇ ಎಷ್ಟು ಬಾರಿ ಬಳಸಬಹುದು? ಇಲ್ಲಿದೆ ಡೀಟೈಲ್‌.

ಹೆಚ್ಚು ಸೋಮಾರಿತನ ಒಳ್ಳೇದಲ್ಲ
ಪ್ರಾಜ್ಞರು ಹೇಳೋ ಪ್ರಕಾರ ಕಂಚುಕ ಅನ್ನುವ ಪುರಾತನ ಹೆಸರಿನ ಈ ಒಳ ಉಡುಪನ್ನು ಪ್ರತೀ ಸಲ ತೊಳೆದೇ ಧರಿಸುವುದು ಅತ್ಯುತ್ತಮ, ತೀರಾ ಕಷ್ಟ ಆದ್ರೆ ಎರಡು ಸಲ ಬಳಸೋದಕ್ಕೆ ಅಡ್ಡಿಯಿಲ್ಲ. ಎರಡು ಸಲ ಧರಿಸಿರೋ ಬ್ರಾವನ್ನು ಮತ್ತೊಮ್ಮೆ ಧರಿಸೋದು ಡೇಂಜರ್‌. ಹೀಗೆ ಮಾಡಿದರೆ ಸ್ಕಿನ್‌ ಸಮಸ್ಯೆ ಬರಬಹುದು. ಜೊತೆಗೆ ದಿನಕ್ಕೆ 12 ಅಥವಾ 14 ಗಂಟೆ, ಕೆಲವೊಮ್ಮೆ ಅದಕ್ಕೂ ಹೆಚ್ಚು ಕಾಲ ದೇಹದ ಸೂಕ್ಷ್ಮ ಭಾಗಕ್ಕೆ ರಕ್ಷಣೆ ನೀಡೋ ಈ ಪುಟಾಣಿ ಉಡುಪು ನಿಮ್ಮ ಬೆವರನ್ನೂ ಹೀರಿರುತ್ತೆ. ಮೈಯ ಬಿಸಿಗೆ ಅದರ ಎಲಾಸ್ಟಿಕ್‌ಗಳು ಬಿಗಿ ಕಳೆದುಕೊಂಡಿರುತ್ತವೆ. ಇದನ್ನೊಮ್ಮೆ ತಣ್ಣೀರಲ್ಲಿ ಅದ್ದಿ ತೆಗೆದರೆ ನಿಮ್ಮ ಬ್ರಾ ದೀರ್ಘ ಕಾಲ ಚೆನ್ನಾಗಿರುತ್ತೆ. ಮಾತ್ರ ಅಲ್ಲ, ನಿಮ್ಮ ಎದೆಯ ಭಾಗದ ಸೂಕ್ಷ್ಮ ಮೃದು ಚರ್ಮವೂ ಹಾಯಾಗಿರುತ್ತೆ.

ಹುಡುಗೀರು ತಿಳಿದಿರಬೇಕಾದ ಒಳ ಉಡುಪಿನ ಮರ್ಮ

ನಿಜಕ್ಕೂ ನಮ್ಮ ಬಳಿ ಎಷ್ಟು ಬ್ರಾಗಳಿರಬೇಕು?
ನಿಮಗೊಂದು ವಿಷಯ ತಿಳಿದಿರಲಿ. ನೀವು ಒಂದು ಬ್ರಾವನ್ನು 90 ಸಲ ಬಳಸಬಹುದು. ಆಮೇಲೆ ಬಳಸೋದು ಒಳ್ಳೇದಲ್ಲ. ಒಟ್ಟು ನಾಲ್ಕು ನಿಮ್ಮ ದೇಹಕ್ಕೆ ಕರೆಕ್ಟಾಗಿ ಫಿಟ್‌ ಆಗುವ ಬ್ರಾಗಳಿರಲಿ. ವರ್ಷವಿಡೀ ಈ ನಾಲ್ಕು ಬ್ರಾಗಳನ್ನು ಧರಿಸುತ್ತಿರಬಹುದು. ಇದರಿಂದ ಈ ಕಂಚುಕದ ಬಾಳಿಕೆ ಹೆಚ್ಚಾಗುತ್ತೆ. ಇದಕ್ಕಿಂತ ಹೆಚ್ಚು ಖರೀದಿಸಿದರೂ ಓಕೆ. ಆದರೆ ದುಡ್ಡು ವೇಸ್ಟ್‌ ಅಷ್ಟೇ. ಇವುಗಳ ಸರಿಯಾದ ಉಪಯೋಗ ಆಗಲ್ಲ.

ಬ್ರಾಗಳನ್ನು ವಾಶ್‌ ಮಾಡೋದು ಹೇಗೆ?
ಬ್ರಾವನ್ನು ಮೈಯಿಂದ ಹಾಗೇ ಕಳಚಿ ವಾಶಿಂಗ್‌ ಮೆಶೀನ್‌ಗೆ ಬಿಸಾಡ್ತಾರೆ ನಮ್ಮಲ್ಲಿ ಹಲವರು. ಆದರೆ ಇದು ತಪ್ಪು. ಬ್ರಾಗಳನ್ನು ವಾಶಿಂಗ್‌ ಮಿಶನ್‌ಗೆ ಹಾಕಬೇಡಿ. 20 ನಿಮಿಷ ಸೋಪ್‌ ವಾಟರ್‌ನಲ್ಲಿ ನೆನಸಿಡಿ. ಬಳಿಕ ಕೈಯಿಂದಲೇ ಉಜ್ಜಿ ತಿಕ್ಕಿ ತೊಳೆಯಿರಿ. ಇದನ್ನು ತೊಳೆಯೋದಕ್ಕೆ ಬಿಸಿ ನೀರು ಬಳಸಬೇಡಿ. ತಣ್ಣೀರಲ್ಲೇ ತೊಳೆಯಿರಿ. ಅದೇ ರೀತಿ ಕಡು ಬಿಸಿಲಲ್ಲೂ ಒಣಗಿಸಬೇಕು. ಹದವಾದ ಬಿಸಿಲು ಬೀಳುವ ಜಾಗದಲ್ಲಿ ಒಣಗಿಸಿ. ಬ್ರಾ ಅತಿಯಾದ ಬಿಸಿಲಲ್ಲಿ ಒಣಗಿದರೆ ಅಂದಗೆಡುತ್ತೆ, ಅದರ ಸ್ಟ್ರಾಪ್‌ಗಳು ಸಡಿಲವಾಗಿ ತೊಟ್ಟಾಗ ಶೇಪ್‌ಲೆಸ್‌ ಆಗಿ ಕಾಣಬಹುದು. ಅರೆ ಒದ್ದೆ ಇದ್ದರೂ ಫಂಗಲ್‌ ಇನ್‌ಫೆಕ್ಷನ್‌ ಆಗುವ ಸಾಧ್ಯತೆ ಇದೆ. ಹದವಾಗಿ ಒಣಗಿಸಿದರೆ ಸಾಕು.

ಒಳ ಉಡುಪಿನ ಬಗ್ಗೆ ಇರದಿರಲಿ ನಿರ್ಲಕ್ಷ್ಯ

ಇದನ್ನು ಹೆಚ್ಚು ಮಡಿಚೋದು ಬೇಡ. ಕಪ್‌ಗಳನ್ನು ಸೇರಿಸಿ ಎರಡು ಫೋಲ್ಡ್‌ ಮಾಡಿ ಮಡಿಚಿಟ್ಟರೆ ಸಾಕು. ಟೀಶರ್ಟ್‌ಗಳ ಮಧ್ಯೆ ಅಥವಾ ಸಾಫ್ಟ್‌ ಆಗಿರುವ ಉಡುಪುಗಳ ಮಧ್ಯೆ ಎರಡು ಫೋಲ್ಡ್‌ ಮಾಡಿ ಇಡಿ. ಬ್ರಾಗಳಿಗೆ ಐರನ್‌ ಮಾಡೋ ಅಗತ್ಯ ಇಲ್ಲ. ತೀರಾ ಸಮಸ್ಯೆಯಾದರೆ ಕಪ್‌ ಭಾಗಕ್ಕಷ್ಟೇ ಐರನ್‌ ಮಾಡಿ.

click me!