ಸಕ್ಕರೆ ನೋಡಿದ್ರೆ ಬಾಯಲ್ಲಿ ನೀರು ಬರುವುದು ಸಹಜ. ಆದರೆ, ಸಕ್ಕರೆ ದೇಹದ ಮೇಲೆ ಸಿಹಿಯಲ್ಲ, ಕಹಿ ಪರಿಣಾಮಗಳನ್ನೇ ಬೀರುತ್ತದೆ. ಅದೇ ಸಕ್ಕರೆ ತ್ಯಜಿಸಿದರೆ ಅದರಷ್ಟೇ ಸಿಹಿಯಾದ ಬದಲಾವಣೆಗಳು ದೇಹದಲ್ಲಾಗುತ್ತವೆ.
ಸಕ್ಕರೆ ಮೇಲೆ ಅಕ್ಕರೆಯಿಲ್ಲದವರು ಯಾರಿದ್ದಾರೆ ಹೇಳಿ? ಸಕ್ಕರೆಯಿಲ್ಲವೆಂದ್ರೆ ಟೀ, ಕಾಫಿ, ಜ್ಯೂಸ್, ಪಾಯಸ್ ಸೇರಿದಂತೆ ಯಾವುದೇ ಖಾದ್ಯಕ್ಕೂ ರುಚಿ ಸಿಗಲು ಸಾಧ್ಯವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎನ್ನುತ್ತಾರೆ, ಆದರೆ ಕೆಲವೊಂದು ಖಾದ್ಯಕ್ಕೆ ಸಕ್ಕರೆ ಇದ್ದರೇನೆ ಟೇಸ್ಟ್. ಆದರೆ, ಸಕ್ಕರೆಯಿಂದ ದೂರವಿದ್ದಷ್ಟು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ವೈದ್ಯರು ಹಾಗೂ ಆರೋಗ್ಯ ತಜ್ಞರ ಸಲಹೆ. ಡಯಟ್ ಮಾಡುವರಿಗಂತೂ ಸಕ್ಕರೆ ಸಂಪೂರ್ಣ ನಿಷಿದ್ಧ. ಹಾಗಂತ ಸಕ್ಕರೆಯನ್ನು ಒಮ್ಮೆಗೆ ಬಿಟ್ಟುಬಿಡುವುದು ಸುಲಭದ ಮಾತೇನಲ್ಲ.ಆದರೆ, ಸಿಹಿಗಾಗಿ ಸಕ್ಕರೆಗೆ ಪರ್ಯಾಯವಾಗಿ ಬಳಸಬಹುದಾದ ಅನೇಕ ಆರೋಗ್ಯಕರ ಪದಾರ್ಥಗಳಿದ್ದು, ಅವುಗಳನ್ನು ಧಾರಾಳವಾಗಿ ಬಳಸಬಹುದು. ಸಕ್ಕರೆ ತ್ಯಜಿಸುವುದರಿಂದ ಏನೆಲ್ಲ ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ?
ಸ್ವೀಟ್ 16 ಬ್ಯೂಟಿ: ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ತ್ವಚೆ ಕಾಂತಿ ಕಳೆದುಕೊಂಡು ವಯಸ್ಸಾದವರಂತೆ ಕಾಣಿಸುತ್ತಾರೆ. ತ್ವಚೆ ನೋಡಿ ವ್ಯಕ್ತಿಯ ವಯಸ್ಸನ್ನು ನಿರ್ಧರಿಸುವ ಕಾರಣ ನಿಮ್ಮ ವರ್ಷವನ್ನು ಹೆಚ್ಚಾಗಿ ಅಂದಾಜಿಸುವ ಸಾಧ್ಯತೆಯಿದೆ. ಹೀಗಾಗಿ ನೀವು ಯಂಗ್ ಆಗಿ ಕಾಣಬೇಕು ಎಂದರೆ ತ್ವಚೆಯ ಆರೋಗ್ಯವನ್ನು ಕಾಪಾಡುವುದು ಅಗತ್ಯ. ಹಾಗಾದ್ರೆ ತ್ವಚೆಯ ಆರೋಗ್ಯ ಕಾಪಾಡಲು ಏನು ಮಾಡಬೇಕು? ವೆರಿ ಸಿಂಪಲ್, ಸಕ್ಕರೆ ತ್ಯಜಿಸಬೇಕು. ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ತ್ಯಜಿಸುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗುವ ಜೊತೆಗೆ ನಿಮ್ಮ ನೈಜ್ಯ ವಯಸ್ಸನ್ನು ಬಿಂಬಿಸುತ್ತದೆ. ಕೊಲಜನ್ ಎಂಬ ಪ್ರೋಟೀನ್ ಚರ್ಮಕ್ಕೆ ಯೌವನದ ಕಾಂತಿಯನ್ನು ಒದಗಿಸುತ್ತದೆ. ಆದರೆ, ನಮ್ಮ ದೇಹವನ್ನು ಪ್ರವೇಶಿಸುವ ಸಕ್ಕರೆ ಅಣುಗಳು ಕೊಲಜನ್ ಅನ್ನು ವಿರೂಪಗೊಳಿಸುತ್ತವೆ. ಹೀಗಾಗಿ ಸಕ್ಕರೆಯನ್ನು ತ್ಯಜಿಸುವುದರಿಂದ ಕೊಲಜನ್ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಇದರಿಂದ ತ್ವಚೆ ಕಾಂತಿಗೂ
ಹಾನಿಯಾಗುವುದಿಲ್ಲ. ಇನ್ನು ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿರುವ ಇನ್ಸುಲಿನ್ ತಗ್ಗಿ, ಚರ್ಮದಲ್ಲೇನಾದರೂ ಊತಗಳಿದ್ದರೆ ಕಡಿಮೆಯಾಗುತ್ತವೆ.
ಸೂಕ್ಷ್ಮವಾಗಿ ಗಮನಿಸಿ ಇದು ಡಿಪ್ರೆಶನ್ ಲಕ್ಷಣಗಳಿರಬಹುದು!
ಒಳ್ಳೆಯ ಮೂಡ್: ಸಕ್ಕರೆಗೂ ಮೂಡ್‍ಗೂ ಏನ್ ಸಂಬಂಧ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಉತ್ತರ ಹೇಳ್ತೀನಿ ಇರಿ. ಸಕ್ಕರೆ ಬೇಕೆಂಬ ಬಯಕೆಗೂ ನಿಮ್ಮ ಮೂಡ್‍ಗೂ ಸಂಬಂಧವಿರುವುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಖಿನ್ನತೆ ಅಧಿಕ ಪ್ರಮಾಣದಲ್ಲಿದ್ದರೆ ಸಕ್ಕರೆ ತಿಂದಷ್ಟೂ ಮತ್ತೆ ಮತ್ತೆ ಬೇಕೆಂಬ ಬಯಕೆ ಉಂಟಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ಸಕ್ಕರೆ ಮಿದುಳಿನ ಕಾರ್ಯನಿರ್ವಹಣೆ ಮೇಲೆ ಪ್ರಭಾವ ಬೀರುವ ಮೂಲಕ ಮೂಡ್‍ನಲ್ಲಿ ಬದಲಾವಣೆ ತರಬಲ್ಲದು.
ಸುಂದರ ನಗುವಿನೊಂದಿಗೆ ತಾಜಾ ಉಸಿರು: ಅತಿಯಾದ ಸಿಹಿ ಸೇವನೆಯಿಂದ ಹಲ್ಲಿಗೆ ಆಪತ್ತು ತಪ್ಪಿದ್ದಲ್ಲ. ಸಕ್ಕರೆ ಬಾಯಿಗೆ ಸಿಹಿಯಾದರೂ ಹಲ್ಲಿಗೆ ಕಹಿ ಅನುಭವಗಳನ್ನೇ ನೀಡುತ್ತದೆ. ಸಕ್ಕರೆಯುಕ್ತ ಆಹಾರಗಳ ಅತಿಯಾದ ಸೇವನೆಯಿಂದ ಹಲ್ಲುಗಳಲ್ಲಿ ಹುಳುಕುಂಟಾಗುತ್ತದೆ. ಇದು ಬಾಯಿ ಹಾಗೂ ವಸಡಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳೊಂದಿಗೆ ಸಕ್ಕರೆ ವರ್ತಿಸುವುದರಿಂದ ಹಲ್ಲುಗಳಲ್ಲಿ ಹುಳುಕುಂಟಾಗುವ ಜೊತೆಗೆ ಮಾತನಾಡುವಾಗ ಬಾಯಿಯಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತದೆ. ಸಕ್ಕರೆ ಸೇವನೆ ನಿಲ್ಲಿಸುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
undefined
ತೂಕದಲ್ಲಿ ಕಡಿತ: ನೀವು ಸಕ್ಕರೆ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸದೆ ತೂಕ ಕಡಿಮೆ ಮಾಡಲು ಯಾವುದೇ ಡಯಟ್ ಮಾಡಿದರೂ ಅದರ ಫಲಿತಾಂಶ ಶೂನ್ಯವೇ ಆಗಿರುತ್ತದೆ. ಯಾವುದೇ ವಸ್ತುವಿರಲಿ ಅದರ ಮೇಲಿನ ವ್ಯಾಮೋಹ ಕಡಿಮೆಯಾಗಬೇಕೆಂದರೆ ಅದರ ಬಳಕೆಯನ್ನು ಕಡಿತಗೊಳಿಸಬೇಕು. ಸಕ್ಕರೆ ವಿಷಯಕ್ಕೂ ಇದು ಅನ್ವಯಿಸುತ್ತದೆ. ಡಯಟ್ ಮಾಡುತ್ತ ಬಾಯಿ ಚಪಲಕ್ಕೆ ಸೋತು ಸಿಹಿ ಪದಾರ್ಥಗಳನ್ನು ತಿನ್ನುತ್ತಲಿದ್ದರೆ ನಿಮ್ಮ ತೂಕ ಇಳಿಯುವ ಬದಲು ಏರುತ್ತದೆ. ಮಿತಿ ಮೀರಿದ ಸಕ್ಕರೆ ಸೇವನೆ ನಮ್ಮ ದೇಹವು ಹಸಿವನ್ನು ನಿಯಂತ್ರಿಸುವ ಲೆಪ್ಟಿನ್ ಎಂಬ ಹಾರ್ಮೋನ್‍ಗೆ ವಿರೋಧ ತೋರುತ್ತದೆ. ಈ ಹಾರ್ಮೋನ್ ಊಟ ಅಥವಾ ತಿಂಡಿ ಸೇವಿಸುವಾಗ ಯಾವಾಗ ತಿನ್ನುವುದನ್ನು ನಿಲ್ಲಿಸಬೇಕು ಎಂಬ ಬಗ್ಗೆ ದೇಹಕ್ಕೆ ಸೂಚನೆ ನೀಡುತ್ತದೆ. ದೇಹ ಈ ಹಾರ್ಮೋನ್‍ಗೆ ಪ್ರತಿರೋಧ ಬೆಳೆಸಿಕೊಂಡಾಗ ನಾವು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರ ಸೇವಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಇದು ದೇಹದ ತೂಕ ಹೆಚ್ಚಳಕ್ಕೂ
ಕಾರಣವಾಗುತ್ತದೆ.
ಸಕ್ಕರೆ ಮೇಲೆ ಅಕ್ಕರೆ ಹೆಚ್ಚಿದ್ರೆ ಖಿನ್ನತೆ ಕಾಡಿತು ಜೋಕೆ!
ಪ್ರಬಲ ಪ್ರತಿರೋಧಕ ವ್ಯವಸ್ಥೆ: ಸಕ್ಕರೆ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಕುಗ್ಗಿಸುವ ಮೂಲಕ ಆಗಾಗ ಶೀತ ಮತ್ತು ಜ್ವರಕ್ಕೆ ತುತ್ತಾಗುವಂತೆ ಮಾಡುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯುಟ್ರಿಷನ್ ಪ್ರಕಾರ ಯಾವುದೇ ರೂಪದಲ್ಲಿ 100ಗ್ರಾಂ ಸಕ್ಕರೆ ಸೇವಿಸುವುದರಿಂದ ಬಿಳಿ ರಕ್ತಕಣಗಳು ಕಡಿಮೆಯಾಗಿ, ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ದೇಹದ ಸಾಮಥ್ರ್ಯವನ್ನು ಶೇ.50ರಷ್ಟು ಕಡಿತಗೊಳಿಸುತ್ತದೆ.