ಹುಡುಗಿಯರು ತಿಳಿದಿರಲೇಬೇಕಾದ ಒಳ ಉಡುಪಿನ ಮರ್ಮ

ಹೆಣ್ಣಿನ ಸೌಂದರ್ಯ ವಿವಿಧ ಅಂಗಾಂಗಳ ಮೂಲಕ ಹೊರ ಹೊಮ್ಮುತ್ತದೆ. ಆದರೆ, ಆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಕಸರತ್ತುಗಳನ್ನು ಮಾಡುವುದು ಅನಿವಾರ್ಯ. ಕೇವಲ ಹೊರಗಿನ ಉಡುಪು ಮಾತ್ರವಲ್ಲ, ಒಳ ಉಡುಪು ಸರಿಯಾದದ್ದನ್ನು ಹಾಕಿ ಕೊಂಡಾ ಮಾತ್ರ ಆ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.

This how women should maintain her brassier

ಹುಡುಗಿಯ ಅಂದವನ್ನು ಹೆಚ್ಚಿಸುವಲ್ಲಿ ಹಾಕಿ ಕೊಳ್ಳುವ ಬ್ರಾ ಸಹ ಪ್ರಮುಖ ಪಾತ್ರವಹಿಸುತ್ತದೆ.. ಪ್ರತಿಯೊಂದು ಡ್ರೆಸ್‌ಗೆ ಸೂಕ್ತ ಬ್ರಾ ಧರಿಸಿದರೆ ಮಾತ್ರ ಅಂದ ಹೆಚ್ಚಲು ಸಾಧ್ಯ. ಇದಕ್ಕಿಲ್ಲಿವೆ ಕೆಲವು ಟಿಪ್ಸ್....

- ರೆಸರ್ ಬ್ಯಾಕ್ ಬ್ರಾ ಖರೀದಿ ಮಾಡುವುದಕ್ಕಿಂತ ಬ್ರಾ ಕ್ಲಿಪ್ ಬಳಸಿ. ನಿಮ್ಮ ಬ್ರಾ ಸ್ಟ್ರ್ಯಾಪ್ ಸೇರಿಸಿ ಪಿನ್ ಮಾಡಿ.  
- ಬ್ರಾವನ್ನು ಯಾವತ್ತೂ ವಾಷಿಂಗ್ ಮಷಿನ್‌ಗೆ ಹಾಕಿ ವಾಷ್ ಮಾಡಬೇಡಿ. ಸಾಧ್ಯವಾದಷ್ಟು ಕೈಯಲ್ಲೇ ವಾಷ್ ಮಾಡಿ. ಇಲ್ಲವಾದರೆ ಅದು ಬೇಗನೆ ಹಾಳಾಗುತ್ತದೆ. 
- ಬ್ಯಾಕ್ ಲೆಸ್ ಡ್ರೆಸ್ ಧರಿಸುವುದಾದರೆ ಬ್ರಾ ಸ್ಟ್ರಾಪ್ ಕತ್ತರಿಸಿ ಡ್ರೆಸ್ ಜೊತೆ ಕೈಯಲ್ಲಿ ಸ್ಟಿಚ್ ಮಾಡುವುದು  ಉತ್ತಮ. ಇದರಿಂದ ಸಪೋರ್ಟ್ ಕೂಡ ದೊರೆಯುತ್ತದೆ. 
- ಕೆಲವೊಂದು ಬ್ರಾ ಸ್ಟ್ರಾಪ್ ಗಳು ಟೈಟ್ ಆಗಿ ಭುಜದ ಮೇಲೆ ಕಲೆ ಮೂಡಿಸುತ್ತದೆ. ಅದಕ್ಕಾಗಿ ಸಿಲಿಕಾನ್ ಬ್ರಾ ಸ್ಟ್ರಾಪ್ ಪ್ಯಾಡ್ ಗಳನ್ನು ನಿಮ್ಮ ಸ್ಟ್ರಾಪ್ ಕೆಳಗೆ ಇಟ್ಟರೆ ಉತ್ತಮ. 
- ವಾಷ್ ಮಾಡಿದ ನಂತರ ಬ್ರಾವನ್ನು ಬಿಸಿಲಿಗೆ ಮಾತ್ರ ಒಣಗಿಸಿ. ಡ್ರೈಯರ್ ಬಳಸಬೇಡಿ. ಇದರಿಂದ ಬ್ರಾ ಬೇಗನೆ ಹಾಳಾಗುತ್ತದೆ. ಪ್ಯಾಡೆಡ್ ಬ್ರಾಗಳು ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ. ಕೀಟಾಣುಗಳು ಸೇರಿಕೊಳ್ಳುವ ಸಾಧ್ಯತೆ ಇದೆ. 
- ಸ್ಟ್ರಾಪ್ ಇರುವ ಬ್ರಾವನ್ನು ಸ್ಟ್ರಾಪ್ ಲೆಸ್ ಬ್ರಾ ಆಗಿ ಪರಿವರ್ತಿಸಿ. ಅದಕ್ಕಾಗಿ ಸ್ಟ್ರಾಪ್ ಗಳನ್ನೂ ಹಿಂದಕ್ಕೆ ತಂದು ಒಳಗಡೆ ಸಿಕ್ಕಿಸಿ. ಇದರಿಂದ ನಿಮ್ಮ ಬ್ರಾ ಸ್ಟ್ರಾಪ್ ಲೆಸ್ ಬ್ರಾ ಆಗುತ್ತದೆ. 
- ಬ್ರಾ ಕಪ್ ಗಳು ಓಪನ್ ಆಗಿರುವಂತೆ ಸ್ಟೋರ್ ಮಾಡಿ. ಒಂದರ ಮೇಲೆ ಒಂದು ಬ್ರಾ ಇಡಬೇಡಿ. 

 

ಯೋಗಿನಿಯಾದ ಬಾಲಿವುಡ್ ನಟ
ಜಾರಿದ ಒಳ ಉಡುಪು
ಸೋನಾಲಿ ಬೇಂದ್ರ ಕ್ಯಾನ್ಸರ್‌ಗೆ ಕಪ್ಪು ಬ್ರಾ ಕಾರಣವೇ?

Latest Videos
Follow Us:
Download App:
  • android
  • ios