ನಿರ್ದೇಶಕ ವಿನೋದ್ ಕಪ್ರಿಯವರು ಇನ್ನೊಂದು ಮನ ಕಲುಕುವ ವೀಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಶ್ವಾನದ ಸ್ವಾಮಿನಿಷ್ಠೆ ನಿರ್ಗತಿಕನೋರ್ವನ ಪ್ರಾಣಿ ಪ್ರೀತಿಯನ್ನು ಎತ್ತಿ ತೋರಿಸುತ್ತಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ವಿನೋದ್ ಕಪ್ರಿ (Vinod Kapri) ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮನ ಮಿಡಿಯುವ ಹಲವು ನೈ ಚಿತ್ರಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಅವರು ಯುವಕನೋರ್ವ ಸೇನೆ ಸೇರುವುದಕ್ಕಾಗಿ ಮ್ಯಾಕ್‌ಡೊನಾಲ್ಡ್‌ನಲ್ಲಿ ಕೆಲಸ ಮಾಡುತ್ತಾ ಓಡುತ್ತಾ ಮನೆ ಸೇರುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದ್ದಲ್ಲದೇ ಆ ಯುವಕನಿಗೆ ಲೆಫ್ಟಿನೆಂಟ್ ಜನರಲ್ ಒಬ್ಬರು ಸಹಾಯ ಮಾಡಲು ಮುಂದಾಗಿದ್ದರು. ಈಗ ಮತ್ತೆ ವಿನೋದ್ ಕಪ್ರಿಯವರು ಇನ್ನೊಂದು ಮನ ಕಲುಕುವ ವೀಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಶ್ವಾನದ ಸ್ವಾಮಿನಿಷ್ಠೆ ನಿರ್ಗತಿಕನೋರ್ವನ ಪ್ರಾಣಿ ಪ್ರೀತಿಯನ್ನು ಎತ್ತಿ ತೋರಿಸುತ್ತಿದೆ.
ಶ್ವಾನಗಳು ತಮಗೆ ಚಿಟಿಕೆಯಷ್ಟು ಪ್ರೀತಿ ತೋರಿದರೂ ಆ ಮನುಷ್ಯನನ್ನು ಜೀವನ ಪೂರ್ತಿ ಮರೆಯದೇ ಪ್ರೀತಿ ಮಾಡುತ್ತವೆ. ತಮ್ಮ ನಂಬಿದವನನ್ನು ಎಂದು ಇವುಗಳು ಕೈ ಬಿಡಲು ಬಯಸುವುದಿಲ್ಲ, ಅದಕ್ಕೆ ಮತ್ತೊಂದು ಉದಾಹರಣೆ ಈ ವೀಡಿಯೋ, ನಿರ್ದೇಶಕ ವಿನೋದ್ ಕಪ್ರಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅವರ ಪೋಸ್ಟ್‌ನ ಸಾರಾಂಶ ಇಲ್ಲಿದೆ ನೋಡಿ.
ನೀವು ಎಂದೂ ಮರೆಯಲಾಗದ 6 ನಿಮಿಷ 15 ಸೆಕೆಂಡ್‌ಗಳು, ಸ್ಥಳ ಲಕ್ನೋ ರಾತ್ರಿ 3.15ರ ಸಮಯ
ಒಂದು ಮದುವೆಯೊಂದರಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದ ನಾವು ಶಾಮೀನಾ ರಸ್ತೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೈಂಟಿಫಿಕ್ ಕನ್ವೆನ್ಷನ್ ಸೆಂಟರ್ (Atal Bihari Vajpayee Scientific Convention Centre)ಮುಂದೆ ಟೀ ಕುಡಿಯಲು ವಾಹನ ನಿಲ್ಲಿಸಿದೆವು. ಈ ವೇಳೆ ಅಚಾನಕ್ ಆಗಿ ದೃಶ್ಯವೊಂದು ನಮಗೆ ಕಾಣಿಸಿತು. ವ್ಯಕ್ತಿಯೋರ್ವ ಕಸ ಸಂಗ್ರಹಿಸುತ್ತಿದ್ದ, ಮತ್ತು ಆತನೊಂದಿಗೆ ಒಂದು ಕತ್ತಿಗೆ ಬೆಲ್ಟ್ ಧರಿಸಿದ ಶ್ವಾನವಿತ್ತು. 6 ನಿಮಿಷಗಳಿಗೂ ಹೆಚ್ಚು ಕಾಲ ನಾನವರನ್ನು ಗಮನಿಸಿದೆ. ನಾಯಿಯೊಂದು ಆತನ ಜೊತೆಯಲ್ಲೇ ಇತ್ತು. ಆತ ಎಲ್ಲಿ ಹೋಗುತ್ತಾನೋ ಅಲ್ಲೆಲ್ಲಾ ಈ ಶ್ವಾನವೂ ಆತನನ್ನೇ ಹಿಂಬಾಲಿಸುತ್ತಿತ್ತು.
ಇದನ್ನು ನೋಡಿ ನಾನು ಆ ಎಲ್ಲಾ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡೆ, ಆದರೆ ನಾ ಕಣ್ಣಿನಲ್ಲಿ ನೋಡಿದ್ದೆಲ್ಲವೂ ಈ ಕ್ಯಾಮರಾದಲ್ಲಿ ರೆಕಾರ್ಡ್ ಆಗಲು ಸಾಧ್ಯವಿಲ್ಲ ಅನಿಸಿತು. ಇದರ ಹೊರತಾಗಿಯೂ ಕೆಲ ಕ್ಷಣಗಳು ರೆಕಾರ್ಡ್ ಆಗಿದ್ದು, ಅವುಗಳು ಜೀವನದಲ್ಲಿ ಎಂದು ಮರೆಯಲಾಗದಷ್ಟು ಅವಿಸ್ಮರಣೀಯವಾಗಿವೆ. ರೆಕಾರ್ಡ್ ಮುಂದುವರೆಸಿದೆ ಮತ್ತು ಈ ನಾಯಿ ಹಾಗೂ ಅದರ ನಿರ್ಗತಿಕ ಮಾಲೀಕನ (Homelessman) ಒಡನಾಟವನ್ನು 6 ನಿಮಿಷಗಳ ಕಾಲ ಸೆರೆಹಿಡಿದೆ. ನಂತರ ಆ ವ್ಯಕ್ತಿ ಜೊತೆ ಮಾತನಾಡಿದೆ.
ಆತನ ಹೆಸರು ಶಕೀಲ್ (Shakil) ಹಾಗೂ ಶ್ವಾನದ ಹೆಸರು ಕಲ್ಲು, ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಾರೆ, ಒಟ್ಟಿಗೆ ಓಡಾಡುತ್ತಾರೆ. ಒಟ್ಟಿಗೆ ಮಲಗುತ್ತಾರೆ. ಈ ಶಕೀಲ್ ಜೊತೆ ಮಾತನಾಡಿದಾಗ ತಿಳಿಯಿತು ಅವರು ಬಹರಿಚ್‌ನ ಜಮೀನ್ದಾರ್ ಪರಿವಾರಕ್ಕೆ ಸೇರಿದವರು, ಆದರೆ ಅವರ ತಂದೆ ಮತ್ತೊಂದು ವಿವಾಹವಾದ ನಂತರ ಅವರ ತಂದೆ ಶಕೀಲ್ ಹಾಗೂ ಅವರ ಸೋದರರನ್ನು ಮನೆಯಿಂದ ಹೊರ ಹಾಕಿದರು. ಅಂದಿನಿಂದ ಅವರು ಫುಟ್ಫಾತ್‌ನಲ್ಲೇ ವಾಸ ಮಾಡುತ್ತಿದ್ದಾರೆ. ಯಾವೊಬ್ಬ ಸೋದರನ ಬಗ್ಗೆಯೂ ಸುದ್ದಿ ಇಲ್ಲ ಆದರೆ ಪ್ರೀತಿಯ ಕಲ್ಲು ಇವರ ಜೊತೆಗೆ ಸದಾ ಇದೆ ಎಂದು ವಿನೋದ್ ಕಪ್ರಿ (Vinod Kapri) ಬರೆದುಕೊಂಡಿದ್ದು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಟ್ಯಾಗ್ ಮಾಡಿದ್ದಾರೆ.
ಕಾರು ಮಾಲೀಕನ ಸರ್‌ಫ್ರೈಸ್‌ಗೆ ಮಕ್ಕಳು ಫುಲ್ ಖುಷ್: ಟ್ರಾಫಿಕ್‌ನಲ್ಲಿ ಕಾರಿನ ಗ್ಲಾಸ್ ಕ್ಲೀನ್ ಮಾಡ್ತಿದ್ದ ಪುಟಾಣಿಗಳು
ಇನ್ನು ಈ ವೀಡಿಯೋದಲ್ಲಿ ವಿನೋದ್ ಕಪ್ರಿಯವರು ಈ ವ್ಯಕ್ತಿಗೆ ಸ್ವಲ್ಪ ಹಣ ನೀಡಿದ್ದು, ಜೊತೆಗೆ ಆತನನ್ನು ಮಾತನಾಡಿಸಿ ತಮ್ಮ ಹಿಂದೆಯೇ ಓಡಾಡುವ ಶ್ವಾನ ಕಲ್ಲುವಿನ ಬಗ್ಗೆ ಕೇಳಿದ್ದಾರೆ. ಈ ವೇಳೆ ಶ್ವಾನ ಕಲ್ಲು (Stray Dog KallU) ಪುಟ್ಟ ಮರಿ ಇರುವಾಗ ತಮಗೆ ಸಿಕ್ಕಿದ್ದು, ಒಂದು ಸೆಕೆಂಡ್ ಕೂಡ ನನ್ನ ಬಿಟ್ಟಿರುವುದಿಲ್ಲ, ಇದು ನನ್ನ ಜೊತೆಗೆ ಇರುತ್ತದೆ. ಜೊತೆಗೆ ಮಲಗುತ್ತದೆ. ಮುಂಜಾನೆ ನಾನು ಏಳುವುದು ತಡವಾದರೆ ತನ್ನ ಮುಂಗಾಲುಗಳಲ್ಲಿ ಎಳೆದು ಎಳೆದು ನನ್ನನ್ನು ಏಳಿಸುತ್ತದೆ ಎಂದು ಹೇಳಿಕೊಂಡಿದ್ದಾರೆ ಶಕೀಲ್. ನೀವು ಅದಕ್ಕೆ ಆಹಾರ ನೀಡುವಿರಾ ಎಂದು ವಿನೋದ್ ಕಪ್ರಿ ಕೇಳಿದ್ದು, ನಾನು ತಿನ್ನುವಾಗಲೆಲ್ಲಾ ಅದಕ್ಕೂ ನೀಡುತ್ತೇನೆ ಎಂದು ಹೇಳಿದ್ದಾರೆ ಶಕೀಲ್. ಒಬ್ಬ ಮನುಷ್ಯ ಮತ್ತೊಂದು ಪ್ರಾಣಿ ಇಬ್ಬರೂ ನಿರ್ಗತಿಕರೇ ಆದರೆ ಇವರಿಬ್ಬರ ಈ ಸ್ನೇಹ ಈಗ ಎಲ್ಲರ ಮನ ಮಿಡಿಯುತ್ತಿದೆ.
कभी नहीं भूल पाने वाले 6 मिनट 51 सेकेंड !
लखनऊ।
रात के सवा 3 बजे।
एक शादी से लौटते हुए चाय पीने के लिए हम शाहमीना रोड पर चाय पीने के लिए रूके।
Atal Bihari Vajpayee Scientific Convention Centre के ठीक सामने।
अचानक क्या देखा कि एक आदमी कूड़ा बीन रहा है और एक कुत्ता लगातार उसके… pic.twitter.com/JrHSvaDozP