ಪ್ರತಿಯೊಬ್ಬ ಮಹಿಳೆಗೂ ತನ್ನ ಎದೆ ಭಾಗ ಆಕರ್ಷಕವಾಗಿರಬೇಕು. ಸುಂದರವಾದ ಕುಚದ್ವಯಗಳನ್ನು ಹೊಂದಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅನುವಂಶಿಕ ಕಾರಣವೋ ಇಲ್ಲವೇ ಬೇರೆ ಏನಾದರೂ ಕಾರಣದಿಂದ ಸ್ತನದ ಗಾತ್ರ ಚಿಕ್ಕದಾಗಿರುತ್ತದೆ. ಕೆಲವರು ಇದರಿಂದ ಖಿನ್ನತೆಯನ್ನು ಅನುಭವಿಸುತ್ತಾರೆ. ಹಾಗಾದರೆ ನೈಸರ್ಗಿಕವಾಗಿ ಸ್ತನದ ಗಾತ್ರ ಹೆಚ್ಚಳ ಮಾಡಿಕೊಳ್ಳುವುದು ಹೇಗೆ।? ಇಲ್ಲಿದೆ 8 ಟಿಪ್ಸ್ ಗಳು
ಸ್ತನದ ಗಾತ್ರ ಹೆಚ್ಚಳ ಮಾಡಿಕೊಳ್ಳಲು ಕೆಲವರು ಆಧುನಿಕ ವೈದ್ಯ ಪದ್ಧತಿ ಮೊರೆ ಹೋಗುವುದು ಇದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಇದೆಲ್ಲವನ್ನು ಹೊರತುಪಡಿಸಿ ನಿಸರ್ಗದತ್ತವಾದ ರೀತಿಯಲ್ಲಿ ಹೇಗೆ ಪ್ರಯತ್ನಿಸಬಹುದು ಎಂಬುದಕ್ಕೆ ಒಂದಿಷ್ಟು ಸಲಹೆ ಇಲ್ಲಿದೆ.
1. ಸರಿಯಾದ ವ್ಯಾಯಾಮ: ಜಿಮ್ ಗೆ ತೆರಳುವವರಿದ್ದರೆ 30 ನಿಮಿಷಕ್ಕೂ ಅಧಿಕ ಕಾಲ ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಬೇಕಾಗುತ್ತದೆ. ಪುಶ್ ಅಪ್ಸ್, ಎದೆ ಭಾಗಕ್ಕೆ ಒತ್ತಡ ನೀಡುವ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಜಿಮ್ ತರಬೇತುದಾರರ ಸಲಹೆ ಪಡೆದುಕೊಳ್ಳಬಹುದು.
ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ
2. ಮಸಾಜ್: ಮಸಾಜ್ ಸಹ ಸ್ತನದ ಗಾತ್ರ ಹಿಗ್ಗಿಸಲು ನೆರವಾಗುತ್ತದೆ. ರಕ್ತ ಸಂಚಾರ ಹೆಚ್ಚು ಮಾಡಿ ಜೀವಕೋಶಗಳ ವೃದ್ಧಿಗೆ ನೆರವಾಗುತ್ತದೆ. ಎಣ್ಣೆ ಉಪಯೋಗಿಸಿ 15 ನಿಮಿಷದಂತೆ ದಿನಕ್ಕೆ 2 ಸಾರಿ ಮಸಾಜ್ ಮಾಡಿಕೊಳ್ಳಬಹುದು.
3. ಡಯೆಟ್: ಸರಿಯಾದ ಡಯೆಟ್ ಪಾಲನೆ ಮಾಡಿದರೆ ಅನವಶ್ಯಕ ಅಂಶಗಳು ದೇಹ ಸೇರುವುದು ನಿಲ್ಲುವುದು. ಇದರ ಪರಿಣಾಮ ಸ್ತನಗಳ ಮೇಲೂ ಆಗುತ್ತದೆ.
4. ಸರಿಯಾದ ಬ್ರಾ ಬಳಕೆ: ಅತಿ ದೊಡ್ಡದಾದ ಅಥವಾ ಅತಿ ಸಣ್ಣದಾದ ಬ್ರಾ ಧರಿಸಬಾರದು. ಸ್ತನವನ್ನು ಎತ್ತಿ ಹಿಡಿಯುವಂತಹ ಬ್ರಾ ಧರಿಸುವುದು ಉತ್ತಮ. ಪ್ಯಾಡ್ ಬ್ರಾ ಗಳು ಲಭ್ಯವಿದ್ದು ವೈದ್ಯರ ಸಲಹೆ ಮೇರೆಗೆ ಬಳಕೆ ಮಾಡಬಹುದು.
ಎಷ್ಟೆ ಹೇಳಿದ್ರೂ ಪುರುಷರು ಲೈಂಗಿಕ ಕ್ರಿಯೆ ವೇಳೆ ಮತ್ತೆ ಇದೇ ತಪ್ಪು ಮಾಡ್ತಿದ್ದಾರೆ
5. ಮೆಂತ್ಯ ಬೀಜ ಬಳಕೆ: ಮೆಂತ್ಯ ಈಸ್ಟ್ರೋಜನ್ ಹೆಚ್ಚು ಮಾಡಲು ಪರಿಣಾಮಕಾರಿಯಾಗಿದೆ. ನೀರಿನೊಂದಿಗೆ ಮೆಂತ್ಯದ ಪೌಡರ್ ಬಳಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಮಸಾಜ್ ಮಾಡಿಕೊಳ್ಳಬಹುದು. ದಿನಕ್ಕೆ ಎರಡು ಸಾರಿ ಮಸಾಜ್ ಮಾಡಿಕೊಂಡರೆ ಪರಿಣಾಮ ಶತ ಸಿದ್ಧ.
6.ಈರುಳ್ಳಿ ಜ್ಯೂಸ್: ಜೇನುತುಪ್ಪ, ಅರಿಶಿನ ಮತ್ತು ಈರುಳ್ಳಿ ಬಳಕೆ ಮಾಡಿ ಪೇಸ್ಟ್ ಸಿದ್ಧಪಡಿಸಿಕೊಂಡು ಸ್ತನಕ್ಕೆ ಹಚ್ಚಿಕೊಂಡರೆ ಪರಿಣಾಮ ಕಾಣಬಹುದು. ರಾಥ್ರಿ ಮಲುಗುವ ಮುನ್ನ ಹಚ್ಚಿಕೊಂಡು ಬೆಳಗ್ಗೆ ಹೂ ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿಕೊಳ್ಳುವುದು ಉತ್ತಮ.
7. ಆಲೀವ್ ಆಯಿಲ್: ಸ್ತನ ಕ್ಯಾನ್ಸರ್ ತಡೆಗೂ ಆಲಿವ್ ಆಯಿಲ್ ಉಪಯುಕ್ತವಾಗಿದ್ದು ಮನೆಯಲ್ಲಿ ಇದರಿಂದ ಮಸಾನ್ ಮಾಡಿಕೊಳ್ಳಬಹುದು.
8. ಲ್ಯಾವೆಂಡರ್ ಆಯಿಲ್: ಲ್ಯಾವೆಂಡರ್ ಆಯಿಲ್ ಮತ್ತು ಚಹಾ ಎಣ್ಣೆ ಬಳಕೆ ಮಾಡಬಹುದು. ಎರಡನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಸಾಜ್ ಮಾಡಿಕೊಂಡರೆ ಫಲಿತಾಂಶ ಕಾಣಬಹುದು.