
ಹ್ಯಾಪಿ ವೈಫ್, ಹ್ಯಾಪಿ ಲೈಫ್ ಅನ್ನೋದು ಗಂಡಸರ ವಲಯದಲ್ಲಿ ಪ್ರಸಿದ್ಧ ನಂಬಿಕೆ. ಅದು ಬಹುತೇಕ ನಿಜ ಕೂಡಾ. ಇದೀಗ ಹೊಸ ಸಂಶೋಧನೆಯೊಂದು ಈ ಮಾತನ್ನು ಹ್ಯಾಪಿ ವೈಫ್ ಲಾಂಗ್ ಲೈಫ್ ಎಂದು ಬದಲಾಯಿಸಲು ಹೇಳುತ್ತಿದೆ.
ಮನೆಯೊಡತಿ ಮನದೊಡತಿಯೂ ಆಗಿದ್ದಾಗ ಸಂಗಾತಿಯ ಆಯಸ್ಸು ಹೆಚ್ಚುತ್ತದಂತೆ. ಅಷ್ಟೇ ಅಲ್ಲ, ಇಂಥವರು ಹೆಚ್ಚು ಚಟುವಟಿಕೆಯುಳ್ಳ ಲೈಫ್ ಸ್ಟೈಲ್ ಅಳವಡಿಸಿಕೊಂಡಿರುತ್ತಾರೆ ಎನ್ನುವುದು ನೆದರ್‌ಲ್ಯಾಂಡ್‌ನ ತಿಲ್ಬರ್ಗ್ ವಿವಿ ನಡೆಸಿದ ಅಧ್ಯಯನದ ಫಲಿತಾಂಶ.
ಮರೆತೇನೆಂದರೆ ಹೇಗೆ ಮರೆಯಲಿ ಆ ಫಸ್ಟ್ ಕ್ರಷ್...
ಅಷ್ಟೇ ಅಲ್ಲ, ಅಧ್ಯಯನ ಇನ್ನಷ್ಟು ಸಂಗತಿಗಳತ್ತ ಬೆಳಕು ಚೆಲ್ಲಿದೆ. ಸದಾ ಚಿಂತೆಯಲ್ಲಿದ್ದು, ಟಿವಿ ಮುಂದೆ ಚಿಪ್ಸ್ ತಿನ್ನುತ್ತಾ ಕೂತಿರುವ ಸಂಗಾತಿಯೊಂದಿಗೆ ಜೀವನ ನಡೆಸುವುದು ಎಷ್ಟು ದುಸ್ತರವೆಂದರೆ ಇಂಥವರ ಬೆಟರ್ ಹಾಫ್ ಕೂಡಾ ಸುಲಭವಾಗಿ ದುಶ್ಚಟಗಳ ದಾಸರಾಗಿಬಿಡುತ್ತಾರಂತೆ. ಪತ್ನಿಯು ಸದಾ ಕಾಯಿಲೆ ಬಿದ್ದು ಬೇಗ ಮೃತಪಟ್ಟರೆ, ಅದಾಗಿ 8 ವರ್ಷದೊಳಗೆ ಪತಿಯೂ ಸಾಯುವ ಸಂಭವ ಹೆಚ್ಚು. ಬಹುಷಃ ಹೆಂಡತಿ ಜೀವ ಹಿಂಡುತಿ ಎಂದು ಇಂಥವರ ನೋಡಿಯೇ ಹೇಳಿರಬೇಕು.
ದಾಂಪತ್ಯ ಸುಖವಾಗಿರಬೇಕೆ? ನಿಮ್ಮ ಸಂಗಾತಿಯಿಂದ ಇದನ್ನೆಲ್ಲಾ ನಿರೀಕ್ಷಿಸಬೇಡಿ!
ಬಡವ ಶ್ರೀಮಂತ ಯಾರೇ ಇರಲಿ, ಪತಿ-ಪತ್ನಿ ಸಂಬಂಧ ಚೆನ್ನಾಗಿದ್ದು, ಹೆಚ್ಚು ಆ್ಯಕ್ಟಿವ್ ಇದ್ದರೆ ಅವರ ಆಯಸ್ಸು ಹೆಚ್ಚುತ್ತದೆ. ಇಂಥವರು ತಮ್ಮ ಜೀವನದ ಬಗ್ಗೆ ತೃಪ್ತಿ ಹೊಂದಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಸಂಗಾತಿ ಆಯ್ಕೆ ವಿಷಯದಲ್ಲಿ ಏನು ಪರಿಗಣಿಸಬೇಕೆಂದು ಈ ಅಧ್ಯಯನದಿಂದ ತಿಳಿಯುತ್ತದೆ ಎಂಬುದು ಸಂಶೋಧಕರ ಆಂಬೋಣ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.